ಹಟ್ಟಿ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರುಗೆ ಒತ್ತಾಯಿಸಿ ಸಂಸದರಿಗೆ ಎಸ್ಎಫ್ಐ ಆಗ್ರಹ

0
170

ಹಟ್ಟಿ: ಪಟ್ಟಣಕ್ಕೆ ಪದವಿ ಕಾಲೇಜನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಯಚೂರು ಜಿಲ್ಲಾ ಸಮಿತಿಯಿಂದ ರಾಯಚೂರು-ಯಾದಗಿರಿ ಲೋಕಸಭಾ ಸದಸ್ಯ ಕುಮಾರ್ ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದೆ.

ಬುಧವಾರ ದಂದು ಹಟ್ಟಿ ಚಿನ್ನದ ಗಣಿ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಿದ ಎಸ್ಎಫ್ಐ ಸಂಘಟನೆಯು ಕಾರ್ಯಕರ್ತರು ಹಟ್ಟಿಯಲ್ಲಿ ಕೇವಲ ಪಿಯುಸಿ ವರೆಗೂ ಕಾಲೇಜು ಇದೆ. ಆದ್ರೆ ಪದವಿ 20 ಕಿ.ಮೀ. ದೂರದ ಲಿಂಗಸುಗೂರು ಹೋಗುವ ಅನಿರ್ವಾಯತೆ ಇದೆ. ಬಡ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

Contact Your\'s Advertisement; 9902492681

ದೇಶದಲ್ಲಿಯೇ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ಗಣಿ ಹಟ್ಟಿಯಲ್ಲಿದ್ದು, ಸುಮಾರು ನಾಲ್ಕು ಸಾವಿರದಷ್ಟು ಚಿನ್ನದ ಗಣಿ ಕಾರ್ಮಿಕರು ಗಣಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ರಕ್ತ ಬೆವರು ಸುರಿಸಿ ದುಡಿಯುತ್ತಿದ್ದಾರೆ. ಇಂತಹ ಕಾರ್ಮಿಕರ ಮಕ್ಕಳಿಗೆ ಕನಿಷ್ಠ ಪದವಿ ಶಿಕ್ಷಣವನ್ನು ಒದಗಿಸುವ ಬದ್ಧತೆ ತೋರದ ವಿದ್ಯಾರ್ಥಿ ವಿರೋಧಿ ಶಿಕ್ಷಣ ವಿರೋಧಿ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಗಳಿಗೆ ಎಸ್ ಎಫ್ ಐ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ವಿದ್ಯಾರ್ಥಿಗಳು ಪಟ್ಟಣದಲ್ಲಿಯೇ ಪಿಯುಸಿ ಮುಗಿಸಿದ ನಂತರ ಪದವಿ ಪಡೆಯಲು ಬೇರೆ ಬೇರೆ ಊರುಗಳಿಗೆ ತೆರಳಬೇಕಿದೆ. ಹೀಗಾಗಿ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಸ್‌ಎಫ್‌ಐ 2 ದಶಕದಿಂದಲೂ ನಾನಾ ಹೋರಾಟ, ಮನವಿ ಪತ್ರ ನೀಡಿ ಆಡಳಿತಕ್ಕೆ ಈ ಬಗ್ಗೆ ಒತ್ತಾಯ ಮಾಡುತ್ತಾ ಬಂದಿದ್ದರೂ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರಕಾರಗಳು ಅಸಡ್ಡೆ ತೋರುತ್ತಾ ಬರಲಾಗಿದೆ. ರಾಜಕಿಯ ಇಚ್ಛಾಶಕ್ತಿ ಕೊರತೆಯಿಂದ ಪದವಿ ಕಾಲೇಜ್‌ನಲ್ಲಿ ಮಂಜೂರು ಆಗಿಲ್ಲ ಇದು ನಮ್ಮ ಜನ ಪ್ರತಿನಿಧಿಗಳ ಇಚ್ಛಾ ಶಕ್ತಿ ಎಷ್ಟು ಇದೆ ಓದಕ್ಕೆ ಉದಾಹರಣೆಯಾಗಿದೆ ಎಂದರು.

ಈಗಲಾದರೂ ಪದವಿ ಕಾಲೇಜ್ ಮಂಜೂರು ಮಾಡಿಸಬೇಕು. ಇಲ್ಲದೇ ಇದ್ದಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಸ್ಎಫ್ಐ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ್, ತಾಲೂಕು ಕಾರ್ಯದರ್ಶಿ ಪವನ್ ಕಮದಾಲ್, ಹಟ್ಟಿ ಕಾರ್ಯದರ್ಶಿ ವಿನಯ್ ಕುಮಾರ್, ಡಿವೈಎಫ್ಐ ಮುಖಂಡರಾದ ಪಯಾಜ್ ಬಂಡಿ, ನಾಗರಾಜ್ ಹೊಸೂರು, ಸಿಐಟಿಯು ಮುಖಂಡ ವೆಂಕಟೇಶ ಗೋರ್ ಕಲ್, ಶೌಕತ್ ಅಲಿ, ದಾವೂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here