ಕಟ್ಟಡ ಕಾರ್ಮಿಕರಿಂದ ಮುಖ್ಯಮಂತ್ರಿ ಚಲೋ; ಕ ಕಲ್ಯಾಣ ಮಂಡಳಿಯಲ್ಲಿ ಭ್ರಷ್ಟಾಚಾರ

0
76

ಶಹಾಬಾದ : ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಧನಸಹಾಯ ಪಾವತಿಸಬೇಕು ಹಾಗೂ ಖರೀದಿಗಳ ಮೂಲಕ ನಡೆಸಲಾಗುವ ವ್ಯಾಪಕ ಭ್ರಷ್ಟಾಚಾರದಿಂದ ಕಲ್ಯಾಣ ಮಂಡಳಿಯನ್ನು ಮುಕ್ತಗೊಳಿಸಬೇಕು. ಆ ಮೂಲಕ ಮಂಡಳಿ ನಿಧಿ ಉಳಿಸಿ, ಬಡ ಕಾರ್ಮಿಕರ ಬದುಕು ರಕ್ಷಿಸಲು ಆಗ್ರಹಿಸಿ ೨೦೨೪ ಆಗಸ್ಟ್ ೫ ರಂದು ರಾಜ್ಯದ ಸಾವಿರಾರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಮುಖ್ಯಮಂತ್ರಿ ಮನೆ ಚಲೋ ಹೋರಾಟ ನಡೆಸಲಿದ್ದೆವೆ ಎಂದು ಸಿಐಟಿಯು ಅಧ್ಯಕ್ಷ ರಾಮು ಜಾಧವ ಹಾಗೂ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್ ತಿಳಿಸಿದರು.

ಅವರು ನಗರದ ರೇಲ್ವೆ ನಿಲ್ದಾಣ ಸಮೀಪದಲ್ಲಿ ಕಟ್ಟಡ ಕಾರ್ಮಿಕರು ಆಯೋಜಿಸಲಾದ ಆಗಸ್ಟ್ ೫ ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟದ ಕರಪತ್ರಗಳನ್ನು ಪ್ರದರ್ಶಿಸಿ ಮಾತನಾಡಿದರು.

Contact Your\'s Advertisement; 9902492681

ರಾಜ್ಯದಲ್ಲಿ ೨೦೦೭ ರಿಂದ ಅಸ್ತಿತ್ವದಲ್ಲಿರುವ ಕರ್ನಾಟಕ ಕಟ್ಟಡ ಮತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಮಿಕರಿಗಾಗಿ ೧೯ ಸೌಲಭ್ಯಗಳನ್ನು ಘೋಷಿಸಿದೆ. ಇದರಲ್ಲಿ ೧೧ ಮಾತ್ರವೇ ಜಾರಿಯಲ್ಲಿವೆ. ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯ, ಅಪಘಾತ ಸಹಜ ಮರಣ, ಹೆರಿಗೆ ಮೊದಲಾದ ಸೌಲಭ್ಯಗಳು ಜಾರಿಯಲ್ಲಿವೆ. ಆದರೆ ಇತ್ತೀಚಿಗೆ ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ ನಿಯಂತ್ರಣಕ್ಕಾಗಿ ಹಲವು ಬಿಗಿ ಕ್ರಮಗಳನ್ನು ಅನುಸರಿಸುತ್ತಿದೆ ಇದು ಸ್ವಾಗತಾರ್ಹ. ಆದರೆ ಬೋಗಸ್ ನಿಯಂತ್ರಣದ ನೆಪದಲ್ಲಿ ಸಾವಿರಾರು ನೈಜ ಕಟ್ಟಡ ಕಾರ್ಮಿಕರು ಬಲಿಪಶುವಾಗುತ್ತಿದ್ದಾರೆ ಎಂದು ಹೇಳಿದರು.

ನೊಂದಣಿ,ನವೀಕರಣ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಹಾಕಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಮಂಡಳಿ ತಂತ್ರಾAಶದಲ್ಲಿ ಪದೇ ಪದೇ ಉಂಟಾಗುತ್ತಿರುವುದರಿAದ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಹೆರಿಗೆ, ಪಿಂಚಣಿ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ಹಿಂದಿನ ಬಿಜೆಪಿ ಸರ್ಕಾರದ ಬೊಮ್ಮಾಯಿ ಸರ್ಕಾರದ ವೇಳೆ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್ ತಮ್ಮ ಅವಧಿಯಲ್ಲಿ ಟಿವಿಗಳು, ಕಂಪ್ಯೂಟರ್‌ಗಳು, ಇನ್ನೋವಾ ಕಾರುಗಳು, ಕಚೇರಿಯ ಐಷಾರಾಮಿ ಒಳ ವಿನ್ಯಾಸ, ಜಾಹಿರಾತು, ಪ್ರಕಟಣೆ, ಸೋಫಾ, ಖುರ್ಚಿಗಳು ಇತ್ಯಾದಿಗಳ ಹೆಸರಿನಲ್ಲಿ ಮನಸೋಇಚ್ಛೆ ಖರ್ಚು ಮಾಡಿದರು. ಮುಂದುವರಿದು ಕಾರ್ಮಿಕರ ಹೆಸರಿನಲ್ಲಿ ಟೂಲ್ ಕಿಟ್, ರೇಷನ್ ಕಿಟ್, ಬೂಸ್ಟರ್ ಕಿಟ್ ಸ್ಕೂಲ್ ಕಿಟ್, ಲ್ಯಾಪ್ಟಾಪ್, ಟ್ಯಾಬ್, ವೈದ್ಯಕೀಯ ತಪಾಸಣೆ, ಆಂಬ್ಯೂಲೆನ್ಸ್, ಕ್ರೀಚ್, ಇತ್ಯಾದಿಗಳಿಗೆ ಖರ್ಚು ಮಾಡಿ ನಿಧಿಯನ್ನು ಅರ್ಧಕ್ಕೆ ಇಳಿಸಿದರು. ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯಿತು, ಕಾರ್ಮಿಕ ಸಂಘಟನೆಗಳಿAದ ಬೃಹತ್ ಹೋರಾಟಗಳು ನಡೆದವು ಎಂದರು. ಕಲ್ಯಾಣ ಮಂಡಳಿ ಸಭೆ ನಡೆಸದೇ ಬೇಕಾಬಿಟ್ಟಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಕಾರ್ಮಿಕರು ಸಲ್ಲಿಸಿದ ಮನವಿ, ಹೋರಾಟಕ್ಕೂ ಕಿವಿಗೊಡುತ್ತಿಲ್ಲ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಎಲ್ಲ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಸಂಯೋಜನೆ ಗೊಂಡಿರುವ ಕಟ್ಟಡ ಕಾರ್ಮಿಕ ಸಂಘಗಳು ಕಟ್ಟಡ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲು ಆಗಸ್ಟ್ ೫, ೨೦೨೪ ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟವನ್ನು ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಪ್ರಕಾಶ ಕುಸಾಳೆ, ನಿಲೇಶ ರಾಠೋಡ್, ಭೀಮರಾವ ಮತ್ತಿಮಡು, ನೀಲು ಚವ್ಹಾಣ, ಇನ್‌ಟಕ್ ಅಧ್ಯಕ್ಷ ಸುನೀಲ ಚವ್ಹಾಣ,ಶ್ರೀನಿವಾಸ ಹುಗ್ಗಿ, ಸಂತೋಷ ಚವ್ಹಾಣ, ಮರಿಯಪ್ಪ ಮುದ್ನಾಳ, ತುಕಾರಾಮ ಒಚಿಟಿ, ಲಕ್ಷö್ಮಣ ಸಿಂಘೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here