6G ತಂತ್ರಜ್ಞಾನದ ಸವಾಲುಗಳನ್ನು ಎದುರಿಸಲು ಬೋಧನಾ ಸಿಬ್ಬಂದಿ, ವಿದ್ಯಾರ್ಥಿಗಳು ತಯಾರಾಗಿ

0
26

ಕಲಬುರಗಿ; ನೆಟ್‍ವಕಿರ್ಂಗ್ ಮತ್ತು ಸಂವಹನದ ಜಗತ್ತಿನಲ್ಲಿ ಉದಯೋನ್ಮುಖ 6G ತಂತ್ರಜ್ಞಾನವು ಹೊಸ ಅನುಭವವನ್ನು ಒದಗಿಸಲು ಸಿದ್ಧವಾಗಿದೆ ಮತ್ತು 6ಉ ತಂತ್ರಜ್ಞಾನವು 5ಉ ತಂತ್ರಜ್ಞಾನಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಹಾಗೂ ನೆಟ್‍ವಕಿರ್ಂಗ್ ಮತ್ತು ಸಂವಹನವನ್ನು ಬಳಕೆದಾರರಿಗೆ ಹೊಸದಾಗಿ ಪರಿಚಯಿಸುವ ಅನುಭವವನ್ನು ನೀಡುತ್ತದೆ ಎಂದು ಇಟಲಿಯ ರೋಮ್ ಟೊರ್ ವೆರ್ಗಟಾದ ರೋಮ್ ವಿಶ್ವವಿದ್ಯಾಲಯದಲ್ಲಿ ರೇಡಿಯೊ ಸ್ಪೆಕ್ಟ್ರಮ್ ಮ್ಯಾನೇಜ್‍ಮೆಂಟ್‍ನಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಅಲೆಸ್ಸಾಂಡ್ರೊ ವಿಝಾರ್ರಿ ಅಭಿಪ್ರಾಯಪಟ್ಟರು.

Iಇಇಇ, ದಿ ಇನ್‍ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್ (Iಇಖಿಇ), ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISಖಿಇ) ಸಹಯೋಗದಲ್ಲಿ ಶರಣಬಸವ ವಿಶ್ವವಿದ್ಯಾಲಯವು ಆಯೋಜಿಸಿದ್ದ “ಡಿಸ್ಟ್ರಿಬ್ಯುಟೆಡ್ ಆ್ಯಂಡ್ ಇಂಟೆಲಿಜೆಂಟ್ ಕಮ್ಯುನಿಕೇಶನ್ ನೆಟ್‍ವಕ್ರ್ಸ” ಕುರಿತ ಅಂತರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಂಗಳವಾರ ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾಮಂಟಪದಲ್ಲಿ 6ಉ ತಂತ್ರಜ್ಞಾನದ ಪರಿಣಿತರು, ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ಕ್ಷೇತ್ರದ ಕೈಗಾರಿಕಾ ಮಟ್ಟದ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಪಕ ಅನುಭವ ಹೊಂದಿರುವ ಡಾ. ವಿಝಾರ್ರಿ 5ಉ ಯುಗದಿಂದ 6ಉ ಯುಗಕ್ಕೆ ಸಂವಹನದ ವಿಷಯವಾಗಿ ವಿಶೇಷ ಉಪನ್ಯಾಸವನ್ನು ನೀಡಿದರು.

Contact Your\'s Advertisement; 9902492681

ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ಶಿಕ್ಷಣದ ಉನ್ನತ ಅಧ್ಯಯನ ಕೇಂದ್ರಗಳ ಅಧ್ಯಾಪಕರಿಗೆ 6ಉ ನೆಟ್‍ವಕಿರ್ಂಗ್ ಮತ್ತು ಸಂವಹನದ ಜಗತ್ತಿನಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ತಮ್ಮ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ಗುರುತರವಾದ ಜವಾಬ್ದಾರಿ ಇದೆ ಮತ್ತು ಇದನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಸುಧಾರಿಸುವ ಅವಶ್ಯಕತೆಯಿದೆ. 6ಉ ತಂತ್ರಜ್ಞಾನವು ಅದರ ನಿಜವಾದ ಅರ್ಥದಲ್ಲಿ ಮತ್ತು ವಿದ್ಯಾರ್ಥಿಗಳ ವೃತ್ತಿಪರ ಭವಿಷ್ಯದಲ್ಲಿ ಅನೇಕ ಸವಾಲುಗಳನ್ನು ತೆರೆದುಕೊಳ್ಳುತ್ತದೆ ಎಂದು ಡಾ. ವಿಝಾರ್ರಿ ತಿಳಿಸಿದರು.

6ಉ ತಂತ್ರಜ್ಞಾನವು ಸಂಪೂರ್ಣವಾಗಿ ಹೊಸ ತಂತ್ರಜ್ಞಾನವಾಗಿದ್ದು, ನೆಟ್‍ವಕಿರ್ಂಗ್ ಹಾಗೂ ಸಂವಹನದ ಜಗತ್ತನ್ನು ಹೆಚ್ಚು ಸುಲಭವಾಗಿಸಿದೆ. ಕಡಿಮೆ ಸಂಕೀರ್ಣ ಮತ್ತು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲು 5ಉ ತಂತ್ರಜ್ಞಾನಕ್ಕಿಂತ ಹೆಚ್ಚು ಮುಂದುವರಿದಿದೆ ಎಂದು ಅವರು ಹೇಳಿದರು.

ಅಧ್ಯಾಪಕರು ಮತ್ತು ಸಂಶೋಧಕರು 6ಉ ತಂತ್ರಜ್ಞಾನದ ಸಂಕೀರ್ಣ ವಿನ್ಯಾಸ ಮತ್ತು ಬಳಕೆಗಳನ್ನು ಹಾಗೂ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ಕೋರ್ ನೆಟ್‍ವಕಿರ್ಂಗ್ ಮತ್ತು ಸಂವಹನದಲ್ಲಿ ಅದರ ಉಪಯೋಗಗಳನ್ನು ಅಧ್ಯಯನ ಮಾಡುವ ಇಂದಿನ ತುರ್ತು ಅಗತ್ಯವಿದೆ ಎಂದು ಒತ್ತಿ ಹೇಳಿದರು.

ನಂತರ, ಡಾ. ವಿಝಾರ್ರಿ ಅವರು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು ಮತ್ತು 6ಉ ಸ್ಪೆಕ್ಟ್ರಮ್ ಮತ್ತು ಇಂಟರ್ನೆಟ್ ಬಳಕೆದಾರರಿಗೆ ನಂಬಲಾಗದ ವೇಗವನ್ನು ಒದಗಿಸುವ ನೆಟ್‍ವಕಿರ್ಂಗ್ ಮತ್ತು ಸಂವಹನದ ಪರಿಕಲ್ಪನೆಯನ್ನು ಹೇಗೆ ಬದಲಾಯಿಸಲಿದೆ ಎಂಬುದರ ಕುರಿತು ಅವರಿಗೆ ವಿವರಿಸಿದರು.

ಈ ವಿಚಾರಸಂಕಿರಣದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ ಮಾತನಾಡಿ, 6ಉ ನೆಟ್‍ವಕಿರ್ಂಗ್ ಮತ್ತು ಸಂವಹನದ ಉದಯೋನ್ಮುಖ ಕ್ಷೇತ್ರಗಳಲ್ಲಿ ತಮ್ಮ ಬೋಧನಾ ಸಾಮಥ್ರ್ಯವನ್ನು ಉತ್ತಮಗೊಳಿಸಲು ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗೆ ಡಾ. ವಿಝಾರ್ರಿಯವರ ಜ್ಞಾನಭಂಡಾರದ ಪ್ರಪಂಚವು ತುಂಬಾ ಸಹಾಯ ಮಾಡುತ್ತದೆ ಎಂದು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್.ಜಿ. ಡೊಳ್ಳೇಗೌಡರ್, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಡಾ.ಶಿವಕುಮಾರ ಜವಳಿಗಿ, ಡಾ. ಶಿವಗಂಗಾ ಪಾಟೀಲ ಸೇರಿದಂತೆ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here