ಪಾಮನಕಲ್ಲೂರಿನ ಸುಡುಗಾಡಿಗೆ ದಾರಿ ಯಾವುದಯ್ಯ!?

0
38

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಊರ ಮುಂದೆ ಇರುವ ಸ್ಮಶಾನ (ರುದ್ರಭೂಮಿ) ಸರ್ಕಾರಿ ಜಾಲಿಗಿಡಗಳು ಬೆಳೆದು ಹಾಳಾಗಿದ್ದು, ಅಲ್ಲದೇ ಸ್ಮಶಾನಕ್ಕೆ ತೆರಳುವ ರಸ್ತೆ ಕೂಡ ಹಳ್ಳದ ನೀರಿನಿಂದ ಹದಗೆಟ್ಟಿದೆ ಕೂಡಲೇ ಸ್ಮಶಾನ ಮತ್ತು ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಯ ಹೋಬಳಿ ಘಟಕದ ಮುಖಂಡರು ಆಗ್ರಹಿಸಿದ್ದಾರೆ.

ಬುಧುವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕರವೇ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಅಧ್ಯಕ್ಷ ರಮೇಶ್ ಗಂಟ್ಲಿ, ಮುಖಂಡ ಅಮರೇಶ್ ಡಿ ಪೂಜಾರಿರವರು, ಪಾಮನಕಲ್ಲೂರಿನ ಸುಡುಗಾಡಿಗೆ ಹೋಗುವ ದಾರಿ ಹಾಳಾಗಿದೆ. ಅಲ್ಲದೇ ಸುಡುಗಾಡು ಕೂಡ ಸರ್ಕಾರಿ ಜಾಲಿಗಿಡಗಳಿಂದ ತುಂಬಿ ಹೋಗಿದೆ. ಇದರಿಂದ ಗ್ರಾಮದಲ್ಲಿ ಮೃತಪಟ್ಟವರನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡುವುದು ಸವಾಲಿನ ಕೆಲಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಾವು ನಮ್ಮೂರಿನ ಸ್ಮಶಾನ ದುರಸ್ತಿಗೆ ಸಂಬಂಧಿಸಿದಂತೆ ಕಳೆದು ಮೂರು ವರ್ಷಗಳಿಂದ ಗ್ರಾಮ ಪಂಚಾಯತಿಗೆ ಮನವಿ ಮಾಡಿಕೊಂಡು ಬಂದಿದ್ದೇವೆ. ಸಂಬಂಧಿಸಿದ ಅಧಿಕಾರಿಗಳು ಮಾತ್ರ ಸ್ಮಶಾನವನ್ನು ಮತ್ತು ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಸರಿ ಪಡಿಸುವ ಕೆಲಸ ಮಾಡಿಲ್ಲ. ನಾವು ಎಷ್ಟು ಬಾರಿ ಮನವಿ ಮಾಡಿದರು ಕೂಡ ಅವರು ಶಾಶ್ವತ ಪರಿಹಾರ ಒದಗಿಸಿಕೊಡುವ ಕೆಲಸ ಮಾಡುತ್ತಿಲ್ಲ.

ಇದು ಮಳೆಗಾಲವಾಗಿರುವುದರಿಂದ ಗ್ರಾಮದಲ್ಲಿ ಗ್ರಾಮದ ಜನರು ಮೃತಪಟ್ಟಾಗ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತಿದೆ. ಮೃತದೇಹವನ್ನು ಹೊತ್ತುಕೊಂಡು ಹೋಗುವಾಗ ಅನೇಕ ಜನರು ಮುಳ್ಳುಕಂಟಿಗಳಿಗೆ ಸಿಲುಕಿ ಬಿದ್ದು ಗಾಯಮಾಡಿಕೊಂಡಿದ್ದಾರೆ. ಅಲ್ಲದೇ ಹಳ್ಳದ ನೀರಿನಿಂದ ಸ್ಮಶಾನದ ರಸ್ತೆ ಹಾಳಾಗಿರುವುದರಿಂದ ಶವ ಸಾಗಿಸುವುದು ಕೂಡ ದುಸ್ತರವಾಗಿದೆ ಎಂದು ತಮ್ಮೂರಿನ ಸ್ಮಶಾನದ ಸಮಸ್ಯೆಗಳನ್ನು ಕರವೇ ಮುಖಂಡರು ಬಿಚ್ಚಿಟ್ಟರು.

ಸ್ಮಶಾನ ದುರಸ್ತಿ ಮಾಡುವಂತೆ ನಾವು ಮತ್ತೊಮ್ಮೆ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸುತ್ತೇವೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಕೂಡಲೇ ಸುಡುಗಾಡನ್ನು ಮತ್ತು ಸುಡುಗಾಡಿಗೆ ತೆರಳುವ ರಸ್ತೆಯನ್ನು ದುರಸ್ತಿ ಮಾಡದಿದ್ದರೇ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಕಛೇರಿಗಳಿಗೆ ಬೀಗಮುದ್ರೆ ಹಾಕಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಲಕ್ಷ್ಮಣ ಚೌಡ್ಲಿ, ರಮೇಶ್ ಗಂಟ್ಲಿ, ಅಮರೇಶ್ ಡಿ ಪೂಜಾರಿರವರು ಉಗ್ರ ಹೋರಾಟದ ಸುಳಿವು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here