ಕಲಬುರಗಿ ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣಕ್ಕೆ ಪತ್ರ ಚಳುವಳಿ

0
28

ಕಲಬುರಗಿ; ವಿಮಾನ ನಿಲ್ದಾಣಕ್ಕೆ ಶ್ರೀ ಶರಣಬಸವೇಶ್ವರ ಹೆಸರು ನಾಮಕರಣಕ್ಕೆ ಮಾಡಬೇಕೆಂದು ಅಗಸ್ಟ್ 19 ರಂದು ಪತ್ರ ಚಳುವಳಿ ಅಭಿಯಾನ ಎಂದು ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ದಯಾನಂದ್ ಎಂ. ಪಾಟೀಲ್ ಮತ್ತು ಯುವ ಮುಖಂಡರಾದ ಶ್ರೀಧರ್ ಎಮ್ ನಾಗನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಮಹಾ ವೇದಿಕೆ ಕಲಬುರ್ಗಿ ಜಿಲ್ಲಾ ಸಮಿತಿಯು ಕಲಬುರಗಿ ವಿಮಾನ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕದ ಆರಾಧ್ಯ ದೈವ “ಶ್ರೀ ಶರಣಬಸವೇಶ್ವರ ”ಹೆಸರನ್ನು ನಾಮಕರಣ ಮಾಡಬೇಕೆಂದು ಕಳೆದ 5 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದು ಕಲ್ಯಾಣ ಕರ್ನಾಟಕದ ಆರಾಧ್ಯ ದೈವ, ಸರ್ವ ಸಮುದಾಯ ಪೂಜಿಸಲ್ಪಡುವ ಮತ್ತು ಕಲ್ಯಾಣ್ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿ ಮೂಡಿಸಿದ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರ ಹೆಸರನ್ನು ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಸಮಸ್ತ ಈ ಭಾಗದ ಜನತೆಯ ಬಯಕೆಯಾಗಿದ್ದು ಆ ನಿಟ್ಟಿನಲ್ಲಿ ವೀರಶೈವ ಲಿಂಗಾಯತ ಮಹಾ ವೇದಿಕೆಯ ವತಿಯಿಂದ ಅಗಸ್ಟ್ 19 ರಂದು ಪ್ರಧಾನ್ ಮಂತ್ರಿ ಅವರಿಗೆ ಪತ್ರ ಚಳುವಳಿ ಅಭಿಯಾನ ಮುಖಾಂತರ ಮನವಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ

Contact Your\'s Advertisement; 9902492681

ಈ ಸಂಧರ್ಭದಲ್ಲಿ ಮಹಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಕಲ್ಯಾಣರಾವ ಪಾಟೀಲ್ ಕಣ್ಣಿ, ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವ್ಕಾರ, ಕಾರ್ಯದರ್ಶಿ ಮಹೇಶ್ಚಂದ್ರ ಪಾಟೀಲ್ ಕಣ್ಣಿ, ಜಿಲ್ಲಾ ಸಂಘಟನ ಕಾರ್ಯದರ್ಶಿ ಆನಂದ್ ಕಣಸೂರ್, ಸಹ ಕಾರ್ಯದರ್ಶಿ ಪರಮೇಶ್ವರ್ ಯಳಮೇಲಿ, ಜಿಲ್ಲಾ ಸಂಚಾಲಕರಾದ ಸತೀಶ್ ಮಾಹುರ್, ಗುರುರಾಜ್ ಅಂಬಾಡಿ, ಸತೀಶ್ ಕೋಣಿನ್ ಕಿರಣ್ ಕಣ್ಣಿ, ಗುರುರಾಜ್ ಸುಂಟನೂರ್, ಅಣ್ಣರಾಯ ಹಿರೇಗೌಡ ಮತ್ತು ಸದ್ಯಸರಾದ ಪ್ರಜ್ವಲ್, ಸಚಿನ್, ಶ್ರೀಕಾಂತ್ ಬಿರಾದರ, ಆಕಾಶ್ ಕುಲಕರ್ಣಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here