ಕಲಬುರಗಿ:ಗ್ರಾಮ ಪಂಚಾತಯನಲ್ಲಿ ನಿರ್ಮಾಣಗೊಂಡಿರುವ ಸ್ವಚ್ಛ ಸಂಕಿರ್ಣ ಘಟಕಗಳಲ್ಲಿ ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸವನ್ನು ಹಸಿಕಸ-ಒಣಕಸವನ್ನಾಗಿ ವಿಂಗಂಡಿಸಿದಾಗ ಆ ಕಸದಲ್ಲಿ ಸಾಕಷ್ಟು ಮರು ಬಳಕೆಯಾಗುವಂತಹ ವಸ್ತುಗಳನ್ನು ಮಾರಾಟ ಮಾಡಿದರೆ ಅದರಿಂದ ಸಾಕಷ್ಟು ಆದಾಯ ಬರುತ್ತವೆ.
ಈ ಆದಾಯದಿಂದ ಸ್ವ-ಸಹಾಯ ಸಂಘಗಳು ಆರ್ಥಿಕವಾಗಿ ಸದೃಢವಾಗುವುದು ಎಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ಕಚೇರಿಯ ಉಪನಿರ್ದೇಶಕರಾದ ಧನರಾಜ್ ಬೋರಾಳೆ ಅವರು ಹೇಳಿದರು.
ಇಂದು ನಗರದ ಹೊರವಲಯದಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ, ಮತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಹಾಗೂ ಪ್ರಾದೇಶಿಕ ಕೇಂದ್ರ ರವರ ಸಂಯುಕ್ತಾಶ್ರದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ಕಾರ್ಯಾಚರಣೆಯಲ್ಲಿ ತೊಡಗಿರುವ ಜಿ.ಪಿ.ಎಲ್.ಎಫ್ ಸದಸ್ಯರುಗಳಿದೆ 3 ದಿನಗಳ ವಸತಿ ಸಹಿತ ಪುನಶ್ಚೇತನ ತರಬೇತಿಯ ಎರಡನೇ ತಂಡದ ಕಾರ್ಯಕ್ರಮವನ್ನು ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತರಬೇತಿ ಮುಗಿದ ಬಳಿಕ ಸ್ವ-ಸಹಾಯ ಸಂಘಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯನ್ಮೋಖರಾಗಬೇಕೆಂದರು.
ತರಬೇತಿ ಕಾರ್ಯಕ್ರಮದಲ್ಲಿ ಬೋಧಕರುಗಳಾದ ಶಿವಪುತ್ರಪ್ಪ ಗೊಬ್ಬೂರು, ಡಾ.ರಾಜು ಕಂಬಳಿಮಠ, ಸಂತೋಷ ಎನ್ ರವರು ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.
ವಿಕೇಂದ್ರೀಕೃತ ಸಂಯೋಜಕರಾದ ಸಂಯೋಜಕರಾದ ಪುಷ್ಪಾ ಬೆಳಮಗಿ ಸತೀಶ್ಚಂದ್ರ ಸುಲೇಪೇಟ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು. ಕಾರ್ಯಕಮದಲ್ಲಿ ಆಡಳಿತ & ಲೆಕ್ಕಾಧಿಕಾರಿಗಳಾದ ಕು.ಸಾಕ್ಷಿ ಪಾಟೀಲ್, ಸಿಬ್ಬಂಧಿಗಳಾದ ಅಶ್ವೀನಿ ಪೂಜಾರಿ, ಅರ್ಚನ ಪಾಟೀಲ್ ಹಾಗೂ ಕಮಲಾಪೂರು ಸಮುದಾಯ ಸಂಘಕರಾದ ಭಾಗ್ಯವಂತಿ ರವರು ಉಪಸ್ಥಿತರಿದ್ದರು.