ಗಂಭೀರ ವಿಷಯ, ಆತ್ಮವಿಶ್ವಾಸದಿಂದ ನಡೆಸುವ ಚರ್ಚೆ ಅನುಭಾವ

0
27

ಸುರಪುರ: ಬಸವಾದಿ ಶರಣರು ತಮ್ಮ ನಿತ್ಯದ ಕಾಯಕವನ್ನು ನಡೆನುಡಿಗಳಲ್ಲಿ ಅಳವಡಿಸಿಕೊಂಡು ಅದನ್ನು ಅನುಭವ ಜನ್ಯವಾಗಿ ಮತ್ತೆ ಮತ್ತೆ ಮೆಲುಕು ಹಾಕುತ್ತಾ ಅನುಭವವನ್ನು ಅನುಭಾವವಾಗಿ ಪರಿವರ್ತಿಸಿದ ಬಗೆಯನ್ನು ಶರಣರು ಅನುಭಾವ ಎಂದು ಕರೆದಿದ್ದಾರೆ. ಅನುಭಾವ ಎಂಬುದನ್ನು ಆಧ್ಯಾತ್ಮಿಕತೆಯ ಒರೆಗಲ್ಲಿನಲ್ಲಿ ನೋಡಿದಾಗ ಇದೊಂದು ಗಂಭೀರವಾದ ವಿಷಯವನ್ನು ಕುರಿತು ಸಮಾನ ಮನಸ್ಕರು ಸುಜ್ಞಾನಿಗಳು ಶಿವಜ್ಞಾನಿಗಳು ಪರಸ್ಪರ ಆದರ ಅಭಿಮಾನ ಆತ್ಮವಿಶ್ವಾಸದಿಂದ ನೆಡೆಸುವ ಚರ್ಚೆಗಳು ಸಂವಾದಗಳನ್ನು ಅನುಭಾವ ಎಂದು ಕರೆಯಲಾಗುತ್ತದೆ ಎಂದು ರಂಗಂಪೇಟೆಯ ಸಂಸ್ಕøತ ಪಂಡೀತ ಜನಾರ್ಧನರಾವ್ ಪಾಣಿಭಾತೆ ಮಾತನಾಡಿದರು.

ನಗರದ ಕಬಾಡಗೇರಾದ ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಶ್ರಾವಣ ಶ್ರವಣ ಶಿವಾನುಭವ ಚಿಂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಬಸವಾದಿ ಪ್ರಮಥರು ವೇದ ಉಪನಿಷತ್ತುಗಳಲ್ಲಿನ ಸಾರವನ್ನು ತಮ್ಮ ವಚನಗಳಲ್ಲಿ ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ತಿಳಿಯುವ ಹಾಗೆ ನುಡಿದು ನಡೆದು ತೋರಿಸಿದರು ಅದನ್ನೇ ಶರಣರು ಅನುಭಾವ ಎಂದು ಕರೆದಿದ್ದಾರೆ.

Contact Your\'s Advertisement; 9902492681

12ನೇ ಶತಮಾನದ ಶರಣರೆಲ್ಲರೂ ಕಾಯಕಯೋಗಿಗಳಾಗಿದ್ದರು ಗುರುವಿನ ಗುಲಾಮನಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವುದನ್ನು ತೋರಿಸಿಕೊಟ್ಟರು ಬಸವಣ್ಣವರ ಸಾವಿರಾರು ವಚನಗಳಲ್ಲಿ ಕೆಲವೊಂದು ಬುನಾದಿ ವಚನಗಳು ಎನಿಸಿಕೊಂಡಿರುವ ಮಡಿಕೆಯ ಮಾಡಲು ಮಣ್ಣೆ ಮೊದಲು ತೊಡುಗೆಯ ಮಾಡಲು ಹೊನ್ನೆ ಮೊದಲು ಶಿವಪಥ ಅರಿಯಲು ಗುರುಪಥವೇ ಮೊದಲು ಒಂದನ್ನರಿತರೆ ಮತ್ತೊಂದಿಲ್ಲ ಮಗದೊಂದಿಲ್ಲ ಎನ್ನುವ ಬಸವಣ್ಣನವರ ವಚನ ಅತ್ಯಂತ ಮಹತ್ವದ್ದು ಈ ವಚನಗಳ ಸಾರವನ್ನು ಪ್ರತಿಯೊಬ್ಬ ಮನುಷ್ಯನು ಅರಿತುಕೊಂಡು ಇಂತಹ ಮಠಮಾನ್ಯಗಳು ನಡೆಸಿಕೊಡುವ ಶಿವ ಚಿಂತನೆಗಳನ್ನು ಮನನ ಮಾಡಿಕೊಂಡು ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಶ್ರಾವಣ ಶ್ರವಣ ಶಿವಾನುಭವ ಚಿಂತನಕ್ಕೆ ಸಾನಿಧ್ಯವಹಿಸಿ ಆಶಿರ್ವಚನ ನೀಡಿದ ಪೀಠಾಧಿಪತಿಗಳಾದ ಶ್ರೀ ಪ್ರಭು ಲಿಂಗ ಮಹಾಸ್ವಾಮಿಗಳವರು, ಮನುಷ್ಯನು ಇಂದು ಅತ್ಯಂತ ವೇಗದ ಮತ್ತು ಒತ್ತಡಮಯ ವಾತಾವರಣದಲ್ಲಿ ಬದುಕುತ್ತಿದ್ದಾನೆ ಅದರ ನಿವಾರಣೆಗಾಗಿ ಮಠಮಾನ್ಯಗಳಲ್ಲಿ ನಡೆಯುವ ಇಂತಹ ಪವಿತ್ರ ಶಿವ ಚಿಂತನಗಳಲ್ಲಿ ಭಾಗವಹಿಸಿ ತಮ್ಮ ಬದುಕಿನಲ್ಲಿ ಬರುವ ಹಲವಾರು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು ಭಗವಂತನೆಡೆಗೆ ಸಾಗಲು ಇಂತಹ ಕಾರ್ಯಕ್ರಮಗಳು ನಮಗೆ ಮೆಟ್ಟಿಲಾಗಿ ಪರಿಣಮಿಸುತ್ತವೆ ಇದರ ಸಾರ್ಥಕವನ್ನು ಪಡಿಸಿಕೊಳ್ಳಬೇಕು ಎಂದು ನುಡಿದರು.

ಶಿವಾನುಭವ ಚಿಂತನದ ವೇದಿಕೆಯಲ್ಲಿ ವಿನೋದ ವಿಶ್ವಕರ್ಮ ರವರು ಉಪಸ್ಥಿತರಿದ್ದರು.ತಾಕಸಾಪ ಗೌರವ ಕಾರ್ಯದರ್ಶಿ ಎಚ್ ವೈ ರಾಠೋಡ್ ನಿರೂಪಿಸಿದರು ಶಿವಶರಣಯ್ಯ ಸ್ವಾಮಿ ಬಳುಂಡಗಿಮಠ ಪ್ರಾರ್ಥಿಸಿದರು ದೇವು ಹೆಬ್ಬಾಳ ಸ್ವಾಗತಿಸಿದರು ವಿನಾಯಕ ಸ್ವಾಮಿ ಕಡ್ಲಪ್ಪನವರಮಠ ಮಂಗಳಗೀತೆಯನ್ನು ಹಾಡಿದರು.

ಶಿವಶರಣಯ್ಯಸ್ವಾಮಿ ಬಳುಂಡಗಿಮಠ,ಮೇಹನರಾವ್ ಮಾಳದಕರ,ಪ್ರಾಣೇಶ ಕುಲಕರ್ಣಿ, ಪ್ರೀಯಾಂಕಾ ವಿಶ್ವಕರ್ಮ, ಶರಣಬಸವ ಕೊಂಗಂಡಿ, ಸೂಗಮ್ಮ ಕೊಂಗಂಡಿ, ರಮೇಶ್ ಕುಲಕರ್ಣಿ, ಗುರುನಾಥ ರಡ್ಡಿ ಶೀಲವಂತ, ಶರಣಪ್ಪ ಕಮ್ಮಾರ,ಮನೋಜ ವಿಶ್ವಕರ್ಮ, ಜ್ಞಾನದೇವ ಪಾಣಿಬಾತೆ, ಸೇರಿದಂತೆ ಹಲವಾರು ಕಲಾವಿದರು ಸಂಗೀತ ಸೇವೆಯನ್ನು ನೀಡಿದರು.

ಪ್ರಮುಖರಾದ ವೀರೇಶ ನಿಷ್ಠಿ ದೇಶಮುಖ,ರಾಜಶೇಖರ ದೇಸಾಯಿ, ಚನ್ನಪ್ಪ ಕ್ಯಾದಗಿ, ಸುಭಾಷ ಹೂಗಾರ, ಶಿವಶರಣಬಸವ ಪುರಾಣಿಕ ಮಠ, ಡಾ.ಎನ್.ಡಿ.ಪುರತಗಿರಿ,ಪ್ರಕಾಶ ಅಲಬನೂರ, ಗುರುನಾಥ ಜಾದವ, ವಿಶ್ವನಾಥ ರೆಡ್ಡಿ ಮುದ್ನಾಳ, ಮಹೇಶ ಕೋನಾಳ, ಸಂಗಮೇಶ ಗುಳಗಿ, ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here