ಕಲಬುರಗಿ ಪ್ರವಾಸಿ ತಾಣಗಳ ಆಯ್ಕೆಗೆ ಆನ್‌ಲೈನ್‌ ಮೂಲಕ ವೋಟ್‌ ಮಾಡಲು ಡಿ.ಸಿ. ಮನವಿ

0
271

ಕಲಬುರಗಿ: ಕೇಂದ್ರದ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಾರ್ವವಜನಿಕರು ಮತ್ತು ಪ್ರವಾಸಿಗರೆ ಪ್ರವಾಸೋದ್ಯಮ ತಾಣಗಳನ್ನು ಆಯ್ಕೆ ಮಾಡಲು ದೇಖೋ ಅಪನಾ ದೇಶ-ಪೀಪಲ್ ಚಾಯಿಸ್ 2024 ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ ಜನತೆ ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಲಬುರಗಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

ಸಾರ್ವಜನಿಕರು ಮತ್ತು ಪ್ರವಾಸಿಗರು
https://innovateindia.mygov.in/dekho-apna-desh/ ಇಲ್ಲಿಗೆ ಭೇಟಿ ನೀಡಿ ಸೆಪ್ಟೆಂಬರ್ 15 ರೊಳಗೆ ತಮ್ಮ ಆಯ್ಕೆಯನ್ನು ಖಚಿತಪಡಿಸುವ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳ ಕುರಿತಂತೆ ವೋಟ್ ಮಾಡುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

Contact Your\'s Advertisement; 9902492681

ಜಿಲ್ಲೆಯ ಪ್ರವಾಸೋದ್ಯಮವನ್ನು ಮೇಲ್ದರ್ಜೆಗೇರಿಸಲು ಧಾರ್ಮಿಕ, ಸಾಂಸ್ಕೃತಿಕ, ಪಾರಂಪರಿಕ, ಐತಿಹಾಸಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ ಮೇಲ್ದರ್ಜೆಗೇರಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here