ಸಾಮಾಜಿಕವಾಗಿ ಶಾಸ್ತ್ರೋಕ್ತವಾಗಿ ಗಂಡು ಹೆಣ್ಣಿನ ನಡವಿನ ಪವಿತ್ರ ಒಕ್ಕೂಟವೇ ಮದುವೆ

0
126

ಜೊತೆಗಾರ ಅಥವಾ ಜೊತೆಗಾರ್ತಿ ಆಯ್ಕೆಗೆ ಮದುವೆ ಎನ್ನುವುದು ಸಮರಸ ಜೀವನದ ಆರಂಭವೇ ಮದುವೆ ಸಾಮಾಜಿಕ ಮನ್ನಣೆ ಪಡೆದುಕೊಂಡಿರುವ ಪವಿತ್ರ ಬಂಧನದ ಅಡಿಪಾಯ ಪ್ರತಿಯೊಬ್ಬರ ಬದುಕಿನಲ್ಲಿ ಮದುವೆ ಎನ್ನುವುದು ಮಧುರಕ್ಷಣ ಎನ್ನುತ ಇದು ಅವರ ಸಂಬಂಧಿಕರ ನಡುವಿನ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸ್ಥಾಪಿಸುತ್ತವೆ. ಎಂದು ವೇ.ಮೂ. ಶಂಭುಲಿಂಗ ಶಾಸ್ತ್ರಿ ಮಾತನಾಡಿದರು.

ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ವಿದ್ಯಾನಗರ ವೆಲ್‍ಫೇರ ಸೊಸೈಟಿ ವತಿಯಿಂದ ಹಮ್ಮಿಕೊಂಡ ಪುರಾಣದಲ್ಲಿ ಪ್ರವಚನಕಾರರು ಮಾತನಾಡುತ್ತ ದಂಪತಿಗಳು ಪರಸ್ಪರ ಭಾವನೆಗಳು ಅರ್ಥಮಾಡಿಕೊಂಡರೆ ಬದುಕು ಬಂಗಾರವಾಗುವುದು ಎಂದು ಮದುವೆಯ ಮಹತ್ವದ ಬಗ್ಗೆ ಹೇಳುತ್ತ ಇಂದಿನ ಸಮಾಜದಲ್ಲಿ ದಂಪತಿಗಳ ಮಧ್ಯದಲ್ಲಿ ನಡೆಯುವ ಸಣ್ಣ-ಪುಟ್ಟ ವಿಷಯಗಳ ಅಪನಂಬಿಕೆ ಮದುವೆ ವಿಚ್ಛೇದನ ಹೀಗೆ ಅನೇಕ ವಿಷಯಗಳ ಕುರಿತು ವಿಡಂಭನಾತ್ಮಕ ಕಥೆಗಳು ಹೇಳುವ ಮೂಲಕ ಮದುವೆಯ ಪವಿತ್ರ ಬಂಧನದ ಮಹತ್ವ ಕುರಿತು ಜಾಗ್ರತೆ ಮೂಡಿಸಿದರು.

Contact Your\'s Advertisement; 9902492681

ಇಂದಿನ ಸಮಾಜದಲ್ಲಿ ದಂಪತಿಗಳ ನಡುವೆ ನಡೆಯುವ ಸಣ್ಣ-ಪುಟ್ಟ ಗೊಂದಲಗಳಿಗೆ ಸಿಲುಕಿ ಸಂಸಾರ ಹಾಳು ಮಾಡಿಕೊಳ್ಳುತ್ತಿರುವ ದಂಪತಿಗಳಿಗೆ ಸಾಮಾಜಿಕ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ಮಹಾತ್ಮಾ ಚರಬಸವೇಶ್ವರ ಪುರಾಣದ ಮದುವೆ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಚಿಂತನೆ ಮಾಡುವ ಮೂಲಕ ಜನಸಾಮಾನ್ಯರಿಗೆ ಸಾಮಾಜಿಕ ಜಾಗ್ರತೆ ಮೂಡಿಸುವ ಉದ್ಧೇಶದಿಂದಲೇ ಸಾಂಕೇತಿಕವಾಗಿ ಮದುವೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಖಜಾಂಚಿ ಗುರುಲಿಂಗಯ್ಯ ಮಠಪತಿ ಅವರ ಮುಂದಾಳತ್ವದಲ್ಲಿ ಪುರಾಣ ಕೇಳಲು ಬಂದ ಭಕ್ತರಲ್ಲಿಯೇ ಅಣವಾರ ಗ್ರಾಮದ ವರನ ಬೀಗರೆಂದು ಸಂಗಣಗೌಡ ಬಿರಾದಾರ, ವಿನೋದ ಗೋರೆ, ಮಧು ಹಿಂದೊಡ್ಡಿ, ಮಂಗಳಾ ಮಂಠಾಳೆ ಹಾಗು ದೊಡ್ಡಸಾಗರ ಗ್ರಾಮದ ವಧು ಬೀಗರೆಂದು ಬಸವರಾಜ ಸಜ್ಜನ, ಮಡಿವಾಳಪ್ಪ ಸಜ್ಜನಶೆಟ್ಟಿ, ನೀಲಮ್ಮ ಮುತ್ತಾ, ವಿಜಯಶ್ರೀ ಹೆಬ್ಬಾಳ, ಜಗದೇವಿ ಕಾಳೆ ನೇಮಕ ಮಾಡಿ ವೇ.ಮೂ. ಜಂಬಯ್ಯ ಶಾಸ್ತ್ರಿ ಹಾಗೂ ಶರಣಯ್ಯ ಮಠಪತಿ ಇವರ ಮಂತ್ರಘೋಷಣೆಯೊಂದಿಗೆ ಶಾಸ್ತ್ರೋಕ್ತವಾಗಿ ಮದುವೆ ಅಕ್ಷತಾ ಕಾರ್ಯಕ್ರಮ ಜರುಗಿತು. ಕಲಾವಿದರಾದ ಶಿವಕುಮಾರ ಹಿರೇಮಠ, ಸಿದ್ದಣ್ಣ ದೇಸಾಯಿ ಕಲ್ಲೂರ “ಮದುವೆಯ ಈ ಬಂಧ” ಎಂಬ ಹಾಡು ಹಾಗು ಭಕ್ತಿಗೀತೆಗಳ ಹಾಡಿ ಭಕ್ತರ ಮನಸೆಳೆದರು.

ಮದುವೆ ಕಾರ್ಯಕ್ರಮಕ್ಕೆ ಬೇಕಾಗುವ ಬಟ್ಟೆ ಆಯೇರಿ, ತಾಳಿ, ಬಟ್ಟೂಂಗರ ಎಲ್ಲಾ ಸಲಕರಣೆಗಳು ಸುಭಾಷ ಮಂಠಾಳೆ ತಂದಿದ್ದರು. ಹಾಗು ಸಮಾಧಾನ ರೊಟ್ಟಿಮನೆ ಖಾನಾವಳಿ ಮಾಲೀಕರಾದ ಅಮೃತ ಕಲ್ಮನಿ ಅವರು ಊಟದ ವ್ಯವಸ್ಥೆ ಮಾಡಿದರು ಉದಯಕುಮಾರ ಪಡಶೆಟ್ಟಿ, ನಾಗರಾಜ ಹೆಬ್ಬಾಳ, ತರುಣಶೇಖರ ಬಿರಾದಾರ ಮತ್ತು ತಾರಾ ಪಾಟೀಲ, ಆಯೇರಿ ಪಟ್ಟಿ ಬರೆದರು ಶಕುಂತಲಾ ನಿಗ್ಗುಡಗಿ ಅವರು ದೇವರ ಮೂರ್ತಿಗೆ ಬಂಗಾರದ ಕಣ್ಬಟ್ಟ ಮಾಡಿ ಭಕ್ತಿಯ ಸೇವೆ ಸಲ್ಲಿಸಿದ್ದಾರೆ.

ಇದೆ ಸಂದರ್ಭದಲ್ಲಿ ನಿಶ್ವಾರ್ಥ ಸಮಾಜಸೇವೆ ಮಾಡಿದ ಅಂಬೇಡ್ಕರ ಅಭಿವೃದ್ಧಿ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಸತೀಶ ಬೆಳಮಕರ ಹಾಗು ಜೈಪ್ರಕಾಶ ಹಿರೆನೂರ ಅವರಿಗೆ ಸುಭಾಷ ನರೋಣಾ ಅವರಿಂದ ಸನ್ಮಾನಿಸಿ ಗೌರವಿಸಲಾಯಿತು. ಎಂದು ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here