ಹಬ್ಬಗಳ ಅರ್ಥಪೂರ್ಣ ಆಚರಣೆ ಅಗತ್ಯ: ಪ್ರೊ.ಎಚ್.ಬಿ.ಪಾಟೀಲ

0
29

ಕಲಬುರಗಿ: ಮನುಷ್ಯನಲ್ಲಿ ಅಡಗಿರುವ ದ್ವೇಷ, ಅಸೂಯೆ, ಸ್ವಾರ್ಥತೆ, ಕೆಟ್ಟ ಆಲೋಚನೆಯಂಥಹ ಮುಂತಾದ ದುಷ್ಟ ಶಕ್ತಿಯ ಗುಣಗಳನ್ನು ನಾಶಪಡಿಸಿ, ಪರಸ್ಪರ ಪ್ರೀತಿ, ಸಹಬಾಳ್ವೆ,ಸಹಕಾರ,ಪರೋಪಕಾರದಂಥಹ ಶಿಷ್ಟತೆಯ ಗುಣಗಳನ್ನು ಮೈಗೂಡಿಕೊಂಡು ಜೀವನ ಸಾಗಿಸಬೇಕೆಂಬ ಮೇರು ಸಂದೇಶವನ್ನು ವಿಜಯದಶಮಿ ಹೊಂದಿದೆ.ಯಾವುದೇ ಹಬ್ಬದ ಹಿನ್ನಲೆ,ಉದ್ದೇಶ ಅರಿತುಕೊಂಡು ಆಚರಿಸಿದರೆ ಹೆಚ್ಚು ಅರ್ಥಪೂರ್ಣವೆನಿಸಲು ಸಾಧ್ಯವಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

ಅವರು ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ವಿಜಯದಶಮಿ ಹಬ್ಬದ ನಿಮಿತ್ಯ ನಗರದ ಆಳಂದ ರಸ್ತೆಯ, ರಾಮತೀರ್ಥ ದೇವಸ್ಥಾನದ ಸಮೀಪದಲ್ಲಿರುವ ಕೊಳಗೇರಿ ಪ್ರದೇಶದ ಅಲೆಮಾರಿ ಜನಾಂಗದ ಮಕ್ಕಳೊಂದಿಗೆ ಬನ್ನಿ ವಿನಿಮಯ ಮಾಡುವ ಮೂಲಕ ವಿಜಯದಶಮಿ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಕಾರ್ಯದರ್ಶಿ ರಾಜಶೇಖರ ಬಿ.ಮರಡಿ, ಬಡ, ಹಿಂದುಳಿದ, ಕೊಳಗೇರಿ ಜನರಲ್ಲಿ ಸಮಾಜವು ನಿಮ್ಮ ಜೊತೆಗಿದೆ ಎಂಬ ನೈತಿಕ ಸ್ಥೈರ್ಯ ಅವರಲ್ಲಿ ಮೂಡಬೇಕೆಂಬ ಉದ್ದೇಶದಿಂದ ನಮ್ಮ ಬಳಗವು ಈ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆಯೆಂದರು.

ಕಾರ್ಯಕ್ರಮದಲ್ಲಿ ಬಳಗದ ಸದಸ್ಯರಾದ ಡಾ.ವಿ.ಬಿ.ಮಠಪತಿ, ವೀರೇಶ ಬೋಳಶೆಟ್ಟಿ, ಬಸವರಾಜ ಪುರಾಣೆ, ಅಣ್ಣಾರಾವ ಮಂಗಾಣೆ, ಶಿವಕುಮಾರ ತಿಮಾಜಿ, ಕೊಳಗೇರಿ ಪ್ರದೇಶದ ಪ್ರಮುಖರಾದ ಪೂಚವ್ವ, ನಾಗಮ್ಮ, ನಾಗಪ್ಪ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here