ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ತಾಕುಗಳಿಗೆ ಸಲಹೆ

0
102

ಕಲಬುರಗಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರಮುಖ ಬೆಳೆಗಳಾದ ಹತ್ತಿ, ತೊಗರಿ, ಉದ್ದು, ಹೆಸರು ಮತ್ತು ತೋಟಗಾರಿಕೆ ಬೆಳೆಗಳಾದ ಮೆಣಸಿನಕಾಯಿ ಬೆಳೆಗಳು ಹಾಳಾಗುತ್ತಿದ್ದು ರೈತರಿಗೆ ಮತ್ತೋಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಹೆಚ್ಚಾಗಿ ಹತ್ತಿ ಮತ್ತು ತೊಗರಿ ಬೆಳೆಗೆ ಕುತ್ತು ಬಂದಿದೆ. ಹೀಗೆ ಮಳೆ ಮುಂದುವರೆದರೆ ತೊಗರಿ ಬೆಳೆಗೂ ಪೆಟ್ಟು ಬಿಳಲಿದ್ದು ಈ ಬೆಳೆಯು ನಷ್ಟ ಆಗುವ ಸಂಭವವಿದೆ.

ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿಯ ವಿಜ್ಞಾನಿಗಳು ರೈತರ ವಿವಿಧ ತಾಕುಗಳಿಗೆ ಭೇಟಿ ನೀಡಿದಾಗ ಅತಿ ಹೆಚ್ಚು ಮಳೆಯಿಂದಾಗಿ ಹತ್ತಿ ಬೆಳೆಯಲ್ಲಿ ಅಲಲ್ಲಿ ಹಸಿಯಾಗಿ ಸೊರಗಲಾರಂಭಿಸಿದ್ದು ಈ ಸಮಸ್ಯೆಯನ್ನು ಹತ್ತಿಯ ಪ್ಯಾರ ವಿಲ್ಟ್ (ಹತ್ತಿ ಹಸಿನೆಟೆ) ಎಂದು ಕರೆಯಲಾಗುತ್ತಿದೆ.

Contact Your\'s Advertisement; 9902492681

ಈ ಸಮಸ್ಯೆಗೆ ಬೇಸಾಯಶಾಸ್ತ್ರ ವಿಜ್ಞಾನಿಯಾದ ಡಾ. ಮಲ್ಲಪರವರು ಭೂಮಿಯಲ್ಲಿ ಅತಿಯಾದ ಮಳೆ ನೀರು ಬಸಿದು ಹೊಗುವಂತೆ ಬಸಿಗಾಲುವೆ ನಿರ್ಮಿಸುವುದು, ಕಾಪರ ಆಕ್ಸಿಕ್ಲೋರೈಡ 2.5 ಗ್ರಾಂ ಮತ್ತು 10 ಗ್ರಾಂ ಬೇವು ಮಿಶ್ರೀತ ಯೂರಿಯಾ ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಬಡ್ಡೆ ಭಾಗ ನೆನೆಯುವಂತೆ ಮಾಡಿ ಸಿಂಪಡಿಸುವುದು ಅಥವಾ ಕಾರ್ಬನಡೈಜಿಂ 50% ಡಬ್ಲೂ  2 ಗ್ರಾಂ ಮತ್ತು 10 ಗ್ರಾಂ ಬೇವು ಮಿಶ್ರೀತ ಯೂರಿಯಾ ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಬಡ್ಡೆ ಭಾಗ ಮತ್ತು ಕವಲುಗಳು ನೆನೆಯುವಂತೆ ಸಿಂಪಡಿಸಬೇಕು.

ಬಿಸಿಲಿನ ಅವಧಿಯಲ್ಲಿ ಬೆಳೆಯ ಸಾಲಿನಲ್ಲಿ ಎಡೆಕುಂಟಿ ಹೊಡೆಯುವುದರಿಂದ ಗಿಡದ ಉಸಿರಾಟ ಕ್ರಿಯೆಗೆ ಸಹಕಾರಿಯಾಗಲಿದೆ ನಿಧಾನ ಹಂತದಲ್ಲಿ ಹಸಿ ನೆಟೆ ಗಿಡಗಳು ಮಳೆಯ ನಂತರ ಸೂರ್ಯನ ಸೂಕ್ತ ತಾಪಮಾನಕ್ಕೆ ವಾತವರಣಕ್ಕೆ ಹೊಂದಿಕೊಂಡು ಚೇತರಿಸಿಕೊಂಡು ಹತೊಟೆಗೆ ಬರುತ್ತವೆ. ಅದೇ ರೀತಿಯಾಗಿ ತೊಗರಿ ಬೆಳೆಯಲ್ಲಿಯೂ ಸಹ ಕೊಳೆ ರೋಗ ಹಾವಳಿ ಹೆಚ್ಚಾಗಿದ್ದು ಇದನ್ನು ಹತೋಟಿ ಮಾಡಲು ಕಾರ್ಬನಡೈಜಿಂ 50% ಡಬ್ಲೂ.ಪಿ 2 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೆರೆಸ ಬುಡಕ್ಕೆ ನೆನೆಸಬೇಕು ಮತ್ತು ತೊಗರಿಯಲ್ಲಿ ಅಲಲ್ಲಿ ಕಾಂಡ ಮಚ್ಚೆ ರೋಗ ಕಂಡು ಬರುತ್ತಿದ್ದು ಅದರ ಹತೋಟಿಗಾಗಿ 3 ಗ್ರಾಂ ಮೇಟಲಾಕ್ಸಿಲ್ ಎಮ್.ಝಡ್ ನ್ನು ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಕಾಂಡ ಭಾಗದಿಂದ ಬೇರಿಗೆ ತೊಯುವಂತೆ ಸಿಂಪರಣೆ ಮಾಡಬೇಕೆಂದು ಸಲಹೆ ನೀಡಿದರು.

ನಂತರ ತೇವಾಂಶ ಹೆಚ್ಚಾಗಿರುವುದರಿಂದ ಬೇರುಗಳು ನಿಷ್ಕ್ರಿಂiÀವಾಗಿದ್ದು ಹತ್ತಿ ಬೆಳೆಯಲ್ಲಿ ಮ್ಯಾಗ್ನಿಷಿಯಂ ಕೊರತೆಯಿಂದ ಎಲೆ ಕೆಂಪಾಗುವಿಕೆ ಕಂಡು ಬಂದಿದೆ ಅದರ ನಿರ್ವಹಣೆಗೆ ಮ್ಯಾಗ್ನಿಷಿಯಂ ಸಲ್ಫೇಟ 10 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಮಣ್ಣು ವಿಜ್ಞಾನಿ ಡಾ. ಚಂದ್ರಕಾಂತ ತಿಳಿಸಿದರು.

ಮೆಣಸಿನಕಾಯಿ ಬೆಳೆಯಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತು ಸಾಲಿನಲ್ಲಿ ನೆಟೆ ಹೋಗುವುದು ಕಂಡು ಬಂದಿದೆ ಇದರ ನಿರ್ವಹಣೆಗೆ ಕಾಪರ ಆಕ್ಸಿಕ್ಲೋರೈಡ 3 ಗ್ರಾಂ ಅಥವಾ ಕಾರ್ಬನಡೈಜಿಂ 50% ಡಬ್ಲೂ  3 ಗ್ರಾಂ ಪ್ರತಿ ಲೀಟರ ನೀರಿನಲ್ಲಿ ಬೆರೆಸಿ ಬುಡ ತೊಯುವಂತೆ ನೆಟೆ ರೋಗದ ಸಾಲಿನಲ್ಲಿ ಮತ್ತು ಅಕ್ಕಪಕ್ಕದ ಸಾಲುಗಳಿಗೆ ಸುರಿಯುವುದರಿಂದ ಇದನ್ನು ಹತೋಟಿಗೆ ತರಬಹುದೆಂದು ತೋಟಗಾರಿಕೆ ವಿಜ್ಞಾನಿ ಡಾ. ಚೇತನ್ ಟಿ. ರವರು ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here