ಕಲಬುರಗಿ: ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್, ರಾಜ್ಯ ಗೌರವಾಧ್ಯಕ್ಷ ರಮೆಶ ಬೀದರ್‍ಕರ ಹಾಗೂ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮಹಿಳಾ ಘಟಕ ನೇಮಕ ಮಾಡಲಾಯಿತು.
(ಶ್ರೀಮತಿ ಗೋರಂಪಳ್ಳಿ ಅಧ್ಯಕ್ಷೆ), (ನೀಲಮ್ಮ ಕಮಲಾಪೂರಕರ ಉಪಾಧ್ಯಕ್ಷೆ), (ಶ್ರೀದೇವಿ ಮುತ್ತಂಗಿ ಪ್ರಧಾನಕಾರ್ಯದರ್ಶಿ), (ಸುಜಾತಾ ಸಹ ಕಾರ್ಯದರ್ಶಿ), (ಸಾವಿತ್ರಿ ಸಂಘಟನಾ ಕಾರ್ಯದರ್ಶಿ) ನೇಮಕ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ದತ್ತು ಹಯ್ಯಾಳಕರ್ ಮಾತನಾಡಿದ ಸಂಘಟನೆ ಬೆಳೆಯ ಬೇಕಾದರೆ ಸ್ತ್ರೀ ಶಕ್ತಿ ಅತಿ ಅವಶ್ಯಕ, ಸ್ತ್ರೀಯರ ವಿರುದ್ಧ ನಡೆಯುತ್ತಿರುವ ಶೋಷಣೆ, ಅತ್ಯಾಚಾರ ಮುಂತಾದವುಗಳನ್ನು ಮೆಟ್ಟಿ ನಿಂತು ಹೋರಾಡಬೇಕಿದೆ. ಅದಕ್ಕೆ ಸ್ತ್ರೀಯರು ಮುಂದೆ ಬರಬೇಕಾಗಿದೆ. ಗ್ರಾಮ ಮಟ್ಟ ದಿಂದ ಹಿಡಿದು ಕೊಂಡು ರಾಜ್ಯಮಟ್ಟದವರೆಗೆ ಮಹಿಳೆಯರು ಶಸಕ್ತವಾಗಿ ನಿಲ್ಲಬೇಕಿದೆ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯರ, ಶೋಷಿತರ, ದಮನಿತರ ಬೆಂಬಲವಾಗಿ ನಾವು ಸದಾ ಇರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರವೀಂದ್ರ ಟಿ. ವರ್ಮಾ, ಕಾಶೀನಾಥ, ಮುಖಂಡರಾದ ಗುಂಡೇಶ ಶಿವನೂರ, ಮೌನೇಶ ಹಯ್ಯಾಳಕರ್ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…