ನಿವೃತ್ತ ಯೋಧನಿಗೆ ಮಣ್ಣಿನ ಗಣಪತಿ ನೀಡಿ ಅಭಿನಂದನೆ

0
139

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 21 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಸಿ ತಾಯ್ನಾಡಿಗೆ ವಾಪಸಾದ ಬಳವಡಗಿ ಗ್ರಾಮದ ಷಣ್ಮುಖ ಲೋಕು ಚವ್ಹಾಣ ಅವರಿಗೆ ಪರಿಸರ ಸ್ನೇಹಿ ಮಣ್ಣಿನ ಗಣಪತಿ ನೀಡಿ ಅಭಿನಂದಿಸಲಾಯಿತು.

ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ನಾವು ಸುರಕ್ಷಿತವಾಗಿ ಬದುಕುತ್ತಿರುವುದಕ್ಕಾಗಿ, ಮೊದಲು ಸೈನಿಕರಿಗೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದರು.

Contact Your\'s Advertisement; 9902492681

ಯೋಧರು ದಿನದ 24 ಗಂಟೆ ವರ್ಷದ 12 ತಿಂಗಳು ಗಡಿಯಲ್ಲಿ ದೇಶ ಕಾಯುತ್ತಾರೆ. ಶತ್ರುಗಳು ಗಡಿಯಲ್ಲಿ ನುಸುಳದಂತೆ ತಡೆಯುತ್ತಾರೆ.ಚಳಿ,ಮಳಿ,ಗಾಳಿ ಹಾಗು ಬಿಸಿಲು ಎನ್ನದೇ ದೇಶ ಕಾಯುವ ಕೆಲಸ ಮಾಡುತ್ತಾರೆ,ಆದ್ದಕ್ಕಾಗಿ ಅವರಿಗೆ ಗೌರವ ಕೊಟ್ಟಷ್ಟು ದೇಶ ಸುರಕ್ಷಿತವಾಗಿರುತ್ತದೆ.

ಅದರಂತೆ ನಾವು ಕೂಡಾ ನಮ್ಮ ದೇಶದ ಸಂಸ್ಕತಿ,ಸಮಾಜ ಹಾಗೂ ಕುಟಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಯೋಧರಂತೆ ಜವಾಬ್ದಾರಿ ನಿಭಾಯಿಸಬೇಕಾಗಿದೆ, ನಮಗಾಗಿ ಮತ್ತು ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಷಣ್ಮುಖ ಚವ್ಹಾಣ ಅವರಿಗೆ ಧನ್ಯವಾದಗಳು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ,ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ,ಸೋಮು ಚವ್ಹಾಣ, ಕಾಶಿನಾಥ ಶೆಟಗಾರ,ವಿಶ್ವನಾಥ ಮಾಡಗಿ,ಹೀರಾ ನಾಯಕ,ಸಿದ್ದು ಪುಜಾರಿ,ವಿಜಯ ಚವ್ಹಾಣ, ಲಕ್ಷ್ಮಣ ಕಟ್ಟಿಮನಿ,ಈಶು ರಾಠೋಡ,ನಶ್ರುದ್ದಿನ ಬಳವಡಗಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here