ಕಲಬುರಗಿ: ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಜತೆಗೂಡಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಿದರೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಕಲಬುರಗಿ ಸಿಟಿಇ ಪ್ರವಾಚಕರಾದ ಅನೀಲಕುಮಾರ ಗಂಗಾಧರ್ ಹೇಳಿದರು.
ಅವರು ಶಾಲಾ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮಜಿ ಫೌಂಡೇಷನ್ ಸಹಯೋಗದೊಂದಿಗೆ ಶುಕ್ರವಾರ ಮಾಡಬೂಳ ಕೆಪಿಎಸ್‍ನಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಏರ್ಪಡಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದ್ದು, ಮುಖ್ಯ ಶಿಕ್ಷಕರು ಕ್ರಿಯಾಶೀಲರಾಗಬೇಕು. ಮುಖದಲ್ಲಿ ನಗು, ಪೂರ್ವ ತಯ್ಯಾರಿಯಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದರ ಮೂಲಕ ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರೇಪಣೆ ಮೂಡಿಸಬೇಕು.ಶಾಲೆಯ ವಾತಾವರಣ ಉತ್ತಮವಾಗಿದ್ದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ. ಶಿಕ್ಷಕರ ನಡುವೆ ಹೊಂದಾಣಿಕೆ, ಶೈಕ್ಷಣಿಕ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ಬೋಧನೆ ಮಾಡಬೇಕು.
ಪೆÇೀಷಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸುವ ಮೂಲಕ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡುವ ಮೂಲಕ ಅವರಲ್ಲಿ ಧೈರ್ಯ ತುಂಬಿ ಮನೋಸ್ಥೈರ್ಯ ಬೆಳೆಸಿ ಪರೀಕ್ಷೆಗೆ ಸಿದ್ಧಗೊಳಿಸಬೇಕು’ ಎಂದು ಮುಖ್ಯಶಿಕ್ಷಕರಿಗೆ ಮನಮುಟ್ಟುವಂತೆ ಉದಾಹರಣೆಗಳ ಮೂಲಕ ಮಾರ್ಗದರ್ಶನ ನೀಡಿದರು.
ಕಲಬುರಗಿ ಸಿಟಿಇ ಪ್ರವಾಚಕರಾದ ಅಂಧಾನಪ್ಪ ವಡಗೇರ್ ಮಾತನಾಡಿ,ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವುದರಿಂದ ಜ್ಞಾನದ ಕ್ಷಿತಿಜ ವಿಸ್ತಾರವಾಗುತ್ತದೆ. ಶಿಕ್ಷಣದಲ್ಲಿ ಆಸಕ್ತಿ, ಧನಾತ್ಮಕತೆಯಿಂದ ಉತ್ತಮ ಕಲಿಕೆ ಸಾಧ್ಯ. ಶಿಕ್ಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು. ಮಕ್ಕಳನ್ನು ಇತರರೊಂದಿಗೆ ಹೋಲಿಕೆ ಮಾಡಬಾರದು. ಉತ್ತಮ ಅಭ್ಯಾಸ, ಗುಂಪು ಓದು ಪರಿಣಾಮಕಾರಿ ಕಲಿಕೆಗೆ ನೆರವಾಗುತ್ತದೆ ಎಂದರು.
ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ ಮಾತನಾಡಿ,ಶೈಕ್ಷಣಿಕ ಗುಣಮಟ್ಟದ ಪ್ರಗತಿ ಸಾಧಿಸಲು ಮಕ್ಕಳಿಗೆ ವಿಶೇಷ- ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ.
ಗುರುಗಳು ಬಂದರೂ ಗುರುವಾರ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಶಿಕ್ಷಕರು ಮನೆ ಬೇಟಿ ಮಾಡಿ, ಪೆÇೀಷಕರೊಂದಿಗೆ ಸಮಾಲೋಚನೆ ನಡೆಸಲು ಸಹಕಾರಿಯಾಗಿದೆ.ಅಲ್ಲದೇ ಒಂದು ದಿನದ ಕ್ಷೇತ್ರ ಅಧ್ಯಯನಕ್ಕಾಗಿ ಯಾದಗಿರಿಯ ಎಪಿಎಫ್‍ನ ಶಾಲೆಗೆ ಸಂಪನ್ಮೂಲ ಶಿಕ್ಷಕರನ್ನು ಬೇಟಿ ಮಾಡಿಸಿ ಅಲ್ಲಿನ ಶೈಕ್ಷಣಿಕ ಕಾರ್ಯವನ್ನು ಅಧ್ಯಯನ ಮಾಡಿಸಲಾಗಿದೆ ಎಂದರು.
ಪ್ರೌಢಶಾಲಾ ಮುಖ್ಯಗುರುಗಳ ಸಂಘದ ತಾಲೂಕಾಧ್ಯಕ್ಷ ರವೀಂದ್ರ ರೆಡ್ಡಿ ಮಾತನಾಡಿದರು.
ಮಾಡಬೂಳ ಕೆಪಿಎಸ್ ಪ್ರಾಂಶುಪಾಲ ಗಣಪತಿ ಪೂಜಾರಿ, ಮಾಡಬೂಳ ಕೆಇಪಿಸ್ ಮುಖ್ಯಗುರುಗಳು ಸಿದ್ದಮ್ಮ ಹೆಬ್ಬಾಳ, ಎಪಿಎಫ್‍ನ ರೇಣುಕಾ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ರಾಜೇಂದ್ರಪ್ರಸಾದ, ಡಯಟ್ ಹಿರಿಯ ಉಪನ್ಯಾಸಕ ರಾಘವೇಂದ್ರ.ಪಿ.ಕುಲಕರ್ಣಿ ವೇದಿಕೆಯ ಮೇಲಿದ್ದರು.
ಶಿಕ್ಷಕರಾದ ಭೀಮಾಶಂಕರ ನಿರೂಪಿಸಿದರು, ಸೀತಮ್ಮ.ಎನ್ ಪ್ರಾರ್ಥಿಸಿದರು, ಬಿಆರ್‍ಪಿ ರಮೇಶ ಮಠದ್ ಸ್ವಾಗತಿಸಿದರು, ಮಹೇಶ ಬಡಿಗೇರ್ ವಂದಿಸಿದರು.
ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…
ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…
ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…
ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…
ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…
ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…