ಕಾರಾಗೃಹದ ಕೈದಿಗಳಿಗೆ ಉಚಿತ ಕಂಪ್ಯೂಟರ್‌ ತರಬೇತಿ: ಪ್ರಮಾಣಪತ್ರ ವಿತರಣೆ

ಕಲಬುರಗಿ: ‘ಜೈಲು ಶಿಕ್ಷೆಯ ಜತೆಗೆ ಕೈದಿಗಳ ಪರಿವರ್ತನೆ ಮತ್ತು ಪುನರ್ವಸತಿ ಕೇಂದ್ರ’ಎಂದು ಕಲಬುರಗಿ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಬಿ.ಸುರೇಶ ಹೇಳಿದರು.

ಅದಾನಿ ಗ್ರೂಪ್‌ನ ಸಕ್ಷಮ ಕೌಶಲ ತರಬೇತಿ ಕೇಂದ್ರ ಮತ್ತು ಶೃಂಗೇರಿ ಶಾರದಾ ಪೀಠದ ಸೋಕೇರ್‌ ಇಂಡ್‌ ಸಂಸ್ಥೆ ಸಹಯೋಗದಲ್ಲಿ ಕಂಪ್ಯೂಟರ್‌ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ‘ಕೈದಿಗಳ ಸುಧಾರಣೆ ನಮ್ಮ ಕರ್ತವ್ಯ, ಪುನರ್ವಸತಿ ಸಂಸ್ಥೆಗಳಿಂದ. ತರಬೇತಿ ಪಡೆದ ಕೈದಿಗಳು ಬಿಡುಗಡೆಯಾದ ನಂತರ ಕೆಲಸಕ್ಕೆ ಸೇರಿಕೊಳ್ಳಿ’ ಎಂದು ಸಲಹೆ ನೀಡಿದರು. ಕಂಪ್ಯೂಟರ್‌ ತರಬೇತಿಯ ಎರಡನೇ ಬ್ಯಾಚ್‌ನ ಕೈದಿಗಳೂ ವಿಧೇಯತೆಯಿಂದ ಕಲಿತುಕೊಳ್ಳಿ’ಎಂದು ಎಚ್ಚರಿಸಿದರು.

ಕಾರಾಗೃಹ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಮಾತನಾಡಿ, ‘ಜವಾಹರ್‌ಲಾಲ್‌ ನೆಹರೂರವರು ಜೈಲಿನಲ್ಲಿದ್ದಾಗಲೇ ಡಿಸ್ಕವರಿ ಆಫ್‌ ಇಂಡಿಯಾ ಕೃತಿ ಬರೆದಿದ್ದು. ದುಡುಕಿ ಇಲ್ಲಿಗೆ ಬಂದಿದ್ದೀರಿ, ಇಲ್ಲಿರುವ ಅವಕಾಶ ಬಳಸಿಕೊಂಡು ತರಬೇತಿ ಪಡೆಯಿರಿ’ ಎಂದು ಹೇಳಿದರು.

ಶೃಂಗೇರಿ ಶಾರದಾ ಪೀಠದ ಪ್ರತಿನಿಧಿ ಉಮೇಶ್‌ ಹರಿಹರ ಮಾತನಾಡಿ, ‘ದೇವನೊಬ್ಬ ನಾಮ ಹಲವು. ಅವನು ಸಂದರ್ಭಕ್ಕನುಗುಣವಾಗಿ ಅನೇಕ ರೂಪಗಳನ್ನು ತಾಳುತ್ತಾನೆ. ಶೃಂಗೇರಿ ಪೀಠದಲ್ಲಿ ಸಮಾಜದ ಚಿಂತನೆ ಇದೆ. 5000 ವಿದ್ಯಾರ್ಥಿಗಳಿಗೆ ನಿತ್ಯ ಮಠದಿಂದ ಬಿಸಿಯೂಟ ಹೋಗುತ್ತದೆ. ನಿಮ್ಮ ತರಬೇತಿಗೂ ಶ್ರೀಗಳು ಸಹಾಯ ಮಾಡಿದ್ದಾರೆ. ಉಜ್ವಲ ಭವಿಷ್ಯವಿದೆ. ಹೊರಬಂದು ಉತ್ತಮ ಪ್ರಜೆಗಳಾಗಿ’ಎಂದು ಹೇಳಿದರು.

ಸೋಕೇರ್‌ ಇಂಡ್‌ ಸಂಸ್ಥೆಗೆ ಶೃಂಗೇರಿ ಮಠದಿಂದ ಅನುದಾನ ಲಭಿಸುತ್ತದೆ. ಕೈದಿಗಳ ಮಕ್ಕಳಿಗೂ ನಾವು ಶಿಕ್ಷಣ ಕೊಡುತ್ತೇವೆ. ಸದ್ಯ ನಮ್ಮಲ್ಲಿ 30 ಮಕ್ಕಳಿದ್ದಾರೆ. ನಿಮ್ಮ ಬಡ ಸಂಬಂಧಿಕರ ಮಕ್ಕಳಿದ್ದರೂ ಅವರನ್ನೂ ಸೇರಿಸಿಕೊಳ್ಳುತ್ತೇವೆ’ ಎಂದು ಸೋಕೇರ್‌ ಇಂಡ್‌ ಕಲಬುರಗಿ ಅಧ್ಯಕ್ಷ ಪ್ರಕಾಶ್‌ ಕುಲಕರ್ಣಿ ಕೈದಿಗಳಿಗೆ ತಿಳಿಸಿದರು.

ಅದಾನಿ ಗ್ರೂಪ್‌ನ ಕೌಶಲ ತರಬೇತಿ ಕೇಂದ್ರದ ಆಪರೇಷನಲ್‌ ಮ್ಯಾನೇಜರ್‌ ಅಶೋಕ್‌ ಕುಮಾರ್‌ ಎಚ್. ಮಾತನಾಡಿ, ‘ಜಗತ್ತು ಕೌಶಲದ ಮೇಲೆ ಅವಲಂಬಿತವಾಗಿದೆ. ಕಲಿತಿದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ. ಎಜುಕೇಟ್‌ ಮತ್ತು ಎಂಪ್ಲಾಯ್‌ಮೆಂಟ್‌ ನಮ್ಮ ಉದ್ದೇಶ. ನೀವು ಹೊರಗೆ ಬಂದ ಮೇಲೆ ಕೆಲಸದ ಅವಕಾಶ ಕೂಡ ಕೊಡುತ್ತೇವೆ. ನಾವು ಅಪರಾಧಿಗಳು ಎಂಬುದನ್ನು ತಲೆಯಿಂದ ತೆಗೆದುಹಾಕಿ’ ಎಂದು ಹೇಳಿದರು.

ಕಂಪ್ಯೂಟರ್ ಶಿಕ್ಷಕ ಹರೀಶ್‌ ದತ್ತಾತ್ರೇಯ ಗೌಳಿ ಮಾತನಾಡಿ, ‘ಕೈದಿಗಳಿಗೆ ಕಂಪ್ಯೂಟರ್ ತರಬೇತಿ ನೀಡಿದ್ದು, ನನಗೆ ಖುಷಿ ತಂದಿದೆ. ಮೊದಲ ಬ್ಯಾಚ್‌ನಲ್ಲಿ ಎಲ್ಲರೂ ಒಳ್ಳೆಯವರಿದ್ದರು. ಎರಡನೇ ಬ್ಯಾಚ್‌ನವರೂ ಸಹಕಾರ ನೀಡಿ ಕಂಪ್ಯೂಟರ್‌ ಕಲಿಯಬೇಕು. ನಿಮ್ಮ ಸಾಧನೆಯೇ ನನಗೆ ಗೌರವ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೈಲರ್‌ಗಳಾದ ಪರಮಾನಂದ ಹರವಾಳ, ಶೈನಾಜ್‌ ನಿಗೆವಾನ್‌, ಶೃಗೇರಿ ಪೀಠದ ವಿನೀತ್‌ ಹಾಜರಿದ್ದರು. ಕಾರಾಗೃಹದ ಶಿಕ್ಷಕ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದ 30 ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. 2ನೇ ಬ್ಯಾಚ್‌ನವರಿಗೆ ತರಬೇತಿ ಕಿಟ್‌ ವಿತರಿಸಲಾಯಿತು.

emedialine

Recent Posts

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಫಾರೂಕ್ ಮನ್ನೂರ್ ಮಕ್ಕಳೊಂದಿಗೆ ಜನ್ಮದಿನಾಚರಣೆ

ಕಲಬುರಗಿ: ಮಕ್ಕಳ ದಿನಾಚರಣೆ ನಿಮಿತ್ತ ಇಂದು ಸಂಜು ನಗರದಲ್ಲಿರುವ ಕಲಿಕಾ ಕೇಂದ್ರದಲ್ಲಿ ಮನ್ನೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಫಾರೂಕ್ ಮನ್ನೂರ್…

12 hours ago

ಜಾನಪದದಲ್ಲಿ ಮಾನವೀಯ ಮೌಲ್ಯಗಳು ಒಳಗೊಂಡಿದೆ: ಯಲ್ಲಪ್ಪ ನಾಯ್ಕೋಡಿ

ಕಲಬುರಗಿ: ಜಾನಪದ ಸಾಹಿತ್ಯ ಸಂಸ್ಕೃತಿ ಹಾಗೂ ಜಾನಪದ ಕಲೆ ಪ್ರಕಾರಗಳಲ್ಲಿ ಮಾನವಿಯ ಮೌಲ್ಯ ಅಡಕವಾಗಿದೆ ಎಂದು ಮಹಾಪೌರರಾದ ಯಲ್ಲಪ್ಪ ನಾಯ್ಕೊಡಿ…

13 hours ago

ಕಲಬುರಗಿ ಸ್ಮಾರ್ಟ್ ಸಿಟೀ ಎನ್ನುವುದು ಸಿಎಂ ತೋರಿಸುವ ಹಗಲ ನಕ್ಷತ್ರ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಲ್ಯಾಣ ಕರ್ನಾಟಕದ ಜನರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಾ ಬಂದಿದ್ದಾರೆ, ಅದರ ಮುಂದುವರೆದ ಭಾಗವಾಗಿ…

13 hours ago

ರವಿ ಎನ್ ದೇಗಾಂವ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಕೆ ಪಿ ಆರ್ ಸಕ್ಕರೆ ಕಾರ್ಖಾನೆಯಿಂದ ಹೊರಬಿಡುತ್ತಿರುವ ಕಲುಷಿತ ನೀರು ಮತ್ತು ಕಲುಷಿತ ಗಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರ ಜಮೀನುಗಳಿಗೆ…

13 hours ago

ಕಲಬುರಗಿ; 10 ಕೃತಿಗಳಿಗೆ `ಅಮ್ಮ ಪ್ರಶಸ್ತಿ’

ಕಲಬುರಗಿ; ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ `ಅಮ್ಮ ಪ್ರಶಸ್ತಿ’ಗೆ ವಿದ್ಯಾರಶ್ಮಿ…

13 hours ago

ವಾಡಿ; ಮಕ್ಕಳ ದಿನಾಚರಣೆ ಸಂಭ್ರಮ

ವಾಡಿ: ಮಾಜಿ ಪ್ರಧಾನಿ ಪಂಡೀತ್ ಜವಾಹರಲಾಲ್ ನೆಹರು ಅವರ ಜನ್ಮದಿನ ಪ್ರಯುಕ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.…

14 hours ago