ಕನ್ನಡ ನಾಡು ಬಹು ಸಂಸ್ಕøತಿಯ ಸಮನ್ವಯದ ಬೀಡು; ಡಾ. ಪುರುಷೋತ್ತಮ ಬಿಳಿಮಲೆ

ಕಲಬುರಗಿ: ನಮ್ಮ ಕನ್ನಡ ನಾಡು ಧರ್ಮಾತೀತವಾಗಿದ್ದು ಬಹು ಸಂಸ್ಕøತಿಯ ಸಮನ್ವಯದ ಬೀಡಾಗಿದೆ. ಈಗಿನ ಮಕ್ಕಳಿಗೆ ಕನ್ನಡದ ಬಗ್ಗೆ ತಿಳಿಹೇಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ ಶನಿವಾರದಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಆಯೋಜಿಸಲ್ಪಟ್ಟ, “ಕನ್ನಡ ಸಾಮರಸ್ಯದ ನೆಲೆಗಳು ಮಾಲಿಕೆಯ ಕರ್ನಾಟಕ ಬರಹಗಾರರಿಗೆ” ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಆರಂಭಿಸಿದ ಮಾಲಿಕೆಗೆ ಮೊಟ್ಟಮೊದಲಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದು ಕಲ್ಯಾಣ ಕರ್ನಾಟಕ ಭಾಗದಿಂದ, ಈ ಭಾಗದ ಕನ್ನಡದಲ್ಲಿ ಹಾಗೂ ಜೀವನದಲ್ಲಿ ಸಂಸ್ಕøತಿ ತುಂಬಿಕೊಂಡಿದೆ. ಕನ್ನಡ ಭಾಷೆ ನಮ್ಮ ಭಾಷೆ ಎಂಬ ಹೆಮ್ಮೆ ಎಲ್ಲರಲ್ಲಿರಬೇಕು. ಕನ್ನಡದ ಬಹಳಷ್ಟು ವಿಷಯಗಳು ಪಠ್ಯಕ್ರಮದಲ್ಲಿ ಬಂದಿಲ್ಲ. ಕನ್ನಡವೆಂದರೆ ಬರೀ ಭಾಷೆಯಲ್ಲ ಅದೊಂದು ಸಂಸ್ಕøತಿ. ಕರ್ನಾಟಕವು ಉತ್ತರ ಮತ್ತು ದಕ್ಷಿಣ ಭಾರತವನ್ನೊಳಗೊಂಡಿದ್ದು, ಹೀಗಾಗಿ ನಾವುಗಳು ಮೂರು ಸಂಸ್ಕøತಿಗಳನ್ನು ಕಲಿತಿದ್ದೇವೆ.

ಹತ್ತನೇ ಶತಮಾನದಲ್ಲಿ ಕನ್ನಡದಲ್ಲಿ ಮಹಾಭಾರತವನ್ನು ಪರಿಚಯಿಸಿದ ಶ್ರೇಯಸ್ಸು ಪಂಪನಿಗೆ ಸಲ್ಲುತ್ತದೆ. ಬೌದ್ಧರು, ಜೈನರು ಕನ್ನಡಕ್ಕೆ ಸಂಸ್ಕøತಿಯ ಮೂಲ ಕೊಟ್ಟಿದ್ದಾರೆ. ನಮ್ಮಲ್ಲಿ ಅನೇಕ ಆಚರಣೆಗಳುಂಟು, ಒಳ್ಳೆಯ ಕಾರ್ಯ ಶುರು ಮಾಡಲು ಗಣೇಶನಿಗೆ ಪೂಜೆ ಮಾಡಿ ಆರಂಭಿಸುವ ಪದ್ಧತಿ ಇದ್ದಾಗ, ಪ್ರಕಾಶಮಾನವಾದ ಜ್ಯೋತಿಯ ಮೂಲಕ ಆರಂಭ ಮಾಡುವ ಪದ್ಧತಿ ತಂದಿದ್ದು ಬೌದ್ಧರು. ಕರಾವಳಿ ಭಾಗ ಬಹು ಸಂಸ್ಕøತಿಯ ನೆಲೆಬೀಡಾಗಿದೆ ಎಂದ ಅವರು, ಇದೇ ಸಮಯದಲ್ಲಿ ಕರ್ನಾಟಕದ ಮಸ್ಕಿಯಲ್ಲಿ ಅಭಿವೃದ್ಧಿಗೆಂದು 10 ಕೋಟಿ ನೀಡಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು.

ಡಾ. ಬಿಳಿಮಲೆ ತಮ್ಮ ಮಾತುಗಳನ್ನು ಮುಂದುವರೆಸಿ ಕನ್ನಡ ದ್ವೇಷದ ಭಾಷೆಯಲ್ಲ ಅದು ಪ್ರೀತಿಯ ಭಾಷೆ. ಕನ್ನಡ ಕಥೆ, ಕಾದಂಬರಿ, ಕಾವ್ಯಗಳನ್ನು ಓದಿದರೆ ಮನುಷ್ಯನಲ್ಲಿ ಪ್ರೀತಿ ಬೆಳೆಯುತ್ತದೆ. ಯಾವಾಗಲೂ ಭಾಷೆಯ ಮೂಲಕ ಜನರಿಗೆ ಪ್ರೀತಿ ಹಂಚುತ್ತಿರುವವರು ಕನ್ನಡದವರು ಹಾಗೆಂದೇ ಕನ್ನಡಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ ಎಂದರು.

ಈ ಮಾಲಿಕೆಗೆ ಕಷ್ಟಪಟ್ಟು ಕೆಲಸ ಮಾಡಿದರೆ ಮುಖ್ಯ ಘಟ್ಟದ ಭಾಗವಾಗುತ್ತಿರಿ ಎಂದು ಕನ್ನಡ ಸಾಮರಸ್ಯದ ನೆಲೆಗಳು ಮಾಲಿಕೆಯ, ಕಲ್ಯಾಣ ಕರ್ನಾಟಕ ಬರಹಗಾರರಿಗೆ ಹಾಗೂ ಲೇಖಕರಿಗೆ ಕರೆ ನೀಡಿದರು. ಈಗಿನ ಕಾಲಘಟ್ಟದಲ್ಲಿ ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದು ನೋವಿನಿಂದ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯ ಸೇರಿದಂತೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳು ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ವೈದ್ಯರಿಗೆ ಕನ್ನಡದಲ್ಲಿ ಚೀಟಿ ಬರೆಯಲು ಬಹಳ ಸಲ ಮನವಿ ಮಾಡಿದ್ದಾಗಿದೆ ಆದರೂ ಆ ಕೆಲಸವಿನ್ನೂ ಆಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ ಬಿಳಿಮಲೆ ಚೀಟಿಯಲ್ಲಿ ರೋಗಿಯ ಹೆಸರನ್ನಾದರೂ ಕನ್ನಡದಲ್ಲಿ ಬರೆಯಬೇಕೆಂದು ಮನವಿ ಮಾಡಿದರು.

ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ. ಅನಿಲ ಕುಮಾರ ಬಿಡವೆ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶರಣಬಸವ ವಿಶ್ವವಿದ್ಯಾಲಯವು ಎಲ್ಲಾ ರಂಗಗಳಲ್ಲಿಯೂ ಕನ್ನಡವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಇಂದಿನ ದಿನಗಳಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಬರೀ ಹಣ ಸಂಪಾದಿಸುವ ವಿಭಾಗಗಳ ಕಡೆ ಗಮನ ಕೊಡುತ್ತಿವೆ. ಆದರೆ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಪೂಜ್ಯ ಡಾ. ಶರಣಬಸಪ್ಪ ಅಪ್ಪಾಜಿಯವರು ಭಾಷಾ ನಿಕಾಯಗಳ ಮೇಲೆ ಹೆಚ್ಚಿನ ಒಲವು ತೋರಿಸಿದ್ದಾರೆ. ಆದ್ದರಿಂದ ಕನ್ನಡದ ಕಂಪು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಲೆ ನಿಂತಿದೆ. ಇದರಿಂದ ಕನ್ನಡದಲ್ಲಿ ಸಾಹಿತ್ಯ ಮೂಡಿ ಬರುತ್ತಿದೆ. ಸಾಹಿತ್ಯವಿರದಿದ್ದರೆ ಮನುಷ್ಯರು ರಾಕ್ಷಸರಾಗುತ್ತಿದ್ದರು ಎಂದು ಡಾ. ಬಿಡವೆ ಒತ್ತಿ ಹೇಳಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ತಮ್ಮ ನೇತೃತ್ವದ ನುಡಿಗಳಲ್ಲಿ, ನಾಡಿಗೆ ಕವಿರಾಜ್ಯ ಮಾರ್ಗ, ವಚನ ಸಾಹಿತ್ಯ ಕೊಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗ. ನಿಜಾಮನ ಆಳ್ವಿಕೆಯಲ್ಲಿ ಲಿಂಗೈಕ್ಯ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು 1934ರಲ್ಲಿಯೇ ಕನ್ನಡ ಶಾಲೆ ತೆರೆದಿದ್ದರು ಅದು ಈಗ ಹೆಮ್ಮರವಾಗಿ ಬೆಳೆದಿದೆ. ಕಲ್ಯಾಣ ಕರ್ನಾಟಕ ಭಾಗ ನಾಡಿಗೆ ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ತಿಳಿಹೇಳಬೇಕು ಹಾಗೂ ಈ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಿದರು.

ಒಂದನೇ ಗೋಷ್ಠಿಯಲ್ಲಿ ಮಾಲಿಕೆಯ ವಸ್ತು, ವಿನ್ಯಾಸ, ಭಾಷೆ, ಶೈಲಿ ಮತ್ತು ಆಶಯ ಕುರಿತು ಲೇಖಕರೊಂದಿಗೆ ಸಂವಾದ ನಡೆಯಿತು. ಎರಡನೇ ಗೋಷ್ಠಿಯಲ್ಲಿ ಸಾಮರಸ್ಯದ ನೆಲೆಗಳು ಮತ್ತು ಬರವಣಿಗೆಯ ಸವಾಲುಗಳು ಕುರಿತು ಲೇಖಕರೊಂದಿಗೆ ಸಂವಾದ ನಡೆಯಿತು. ಈ ಕಾರ್ಯಗಾರದಲ್ಲಿ ಕರ್ನಾಟಕದ 12 ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ಲೇಖಕರು ಪಾಲ್ಗೊಂಡಿದ್ದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ತಮ್ಮ ಆಶಯ ನುಡಿಗಳನ್ನಾಡಿದರು. ಕನ್ನಡ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಕಲ್ಯಾಣರಾವ ಪಾಟೀಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರೆ, ಶೈಲಜಾ ಜಮಾದಾರ ನಿರೂಪಿಸಿ, ವಂದಿಸಿದರು. ಅಕ್ಕಲಕೋಟನ ಡಾ. ಗುರುಲಿಂಗಪ್ಪ ಧಬಾಲೆ ವೇದಿಕೆ ಮೇಲಿದ್ದರು.

emedialine

Recent Posts

ಬಡ್ಡಿ ರಹಿತ ವ್ಯವಹಾರವು ಎಲ್ಲರಿಗೂ ಸಹಾಯವಾಗಲಿ: ಮೊಹ್ಮದ್ ಯುಸೂಫ್ ಕುನ್ನಿ

ಬೀದರ್: ಕಾರುಣ್ಯ ಸೌಹಾರ್ದ ಸಹಾಕರಿ ಸಂಘದಿಂದ ಕೇವಲ ಮುಸ್ಲಿಂ ಸಮುದಾಯಕಕ್ಕೆ ಅಲ್ಲ ಎಲ್ಲ ವರ್ಗಗಕ್ಕೂ ಬಡ್ಡಿ ರಹಿತ ವ್ಯವಹಾರ ಎಲ್ಲರಿಗೂ…

5 hours ago

ಮುನಿರತ್ನರ ಶಾಸಕ ಸ್ಥಾನ ರದ್ದಪಡಿಸಲು ಸಿಪಿಐಎಂ ಕೆ. ನೀಲಾ ಆಗ್ರಹ

ಕಲಬುರಗಿ: ಜಾತಿ ಹಾಗೂ ಮಹಿಳಾ ನಿಂದನೆ ಗಂಭೀರ ಸ್ವರೂಪದ್ದಾಗಿರುವಾಗಲೆ, ಹನಿಟ್ರ್ಯಾಪ್ ಜೀವ ವಿರೋಧಿ ಏಡ್ಸ್ ರೋಗಹರಡುವ ದುಷ್ಖೃತ್ಯದ ಆರೋಪದಲ್ಲಿ ಜೈಲು…

7 hours ago

ಗುರುಗಳಾದವರು ಸಮಾಜಕ್ಕೆ ಭಾರವಾಗದೆ ಬೆಳಕಾಗಬೇಕು: ನಿಡುಮಾಮಿಡಿ ಶ್ರೀ

ಕಲಬುರಗಿ: ಬಸವಾದಿ ಶರಣರ ಪರಂಪರೆ, ಬಸವತತ್ವ ಪರಿಪಾಲನೆಯಲ್ಲಿ ಸುಲಫಲ ಮಠದ ಕೊಡುಗೆ ಅನನ್ಯವಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ…

7 hours ago

ಕನ್ನಡ ಜನಾಂದೋಲನದ ಭಾಷೆಯಾಗಿ ಬೆಳೆಯಬೇಕು: ಡಾ. ಪುರುಷೋತ್ತಮ ಬಿಳಿಮಲೆ

ಕಲಬುರಗಿ: ಸಾಮರಸ್ಯವೆಂದರೆ ಕೇವಲ ಹಿಂದು ಮುಸ್ಲಿಂ ಅಷ್ಟೇ ಅಲ್ಲ. ಅಲ್ಲಿ ಕೆಳ,‌ಮಧ್ಯಮ, ಮೇಲ್ವರ್ಗ ಇರುವಂತೆ ವಿವಿಧ ಸಂಸ್ಕೃತಿಗಳು ಕೂಡ ಅಡಕವಾಗಿರುತ್ತವೆ.…

8 hours ago

ಮಹಿಳೆಯರಿಗೆ ಆರೋಗ್ಯವೆ ಭಾಗ್ಯ : ಡಾ. ಸುರೇಶ ಜಂಗೆ

ಕಲಬುರಗಿ: ಮಹಿಳೆಯರ ಆರೋಗ್ಯವು ಅನೇಕ ವಿಶಿಷ್ಟ ರೀತಿಯಲ್ಲಿ ಪುರುಷರ ಆರೋಗ್ಯಕ್ಕಿಂತ ಭಿನ್ನವಾಗಿದೆ. ಹೀಗಾಗಿ ಎಲ್ಲಾ ಮಹಿಳೆಯರಿಗೆ ಆರೋಗ್ಯವೆ ಭಾಗ್ಯ ಎಂದು…

8 hours ago

`ಕಾವ್ಯ ಸಂಸ್ಕøತಿ ಯಾನ’ ಅಧ್ಯಕ್ಷರಾಗಿ ಕವಿ ಅಂಬಲಗೆ ಆಯ್ಕೆ

ಕಲಬುರಗಿ: ಕಲಬುರಗಿಯಲ್ಲಿ ನಡೆಯಲಿರುವ `ಕಾವ್ಯ ಸಂಸ್ಕೃತಿ ಯಾನ'ದ  ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ.ಕಾಶೀನಾಥ ಅಂಬಲಗಿ ಅವರು ಆಯ್ಕೆಯಾಗಿದ್ದಾರೆ ಎಂದು ಆಯೋಜಕರಾದ…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420