ನಾಳೆ ಕಲಬುರಗಿಯಲ್ಲಿ ಕನ್ಹಯ್ಯ ಕುಮಾರ್ ಭಾಷಣ

0
130

ಸುರಪುರ: ಶ್ರೀನಿವಾಸ ಗುಡಿ ಮೆಮೋರಿಯಲ್ ಟ್ರಸ್ಟ್ ಹಾಗು ಸಂವಿಧಾನಪರ ಸಂಘಟನೆಗಳ ಒಕ್ಕೂಟ ಕಲಬುರಗಿ ವತಿಯಿಂದ ಕಲಬುರಗಿಯ ದರ್ಗಾ ರೋಡಲ್ಲಿರುವ ಡಾ:ಬಿ.ಆರ್.ಅಂಬೇಡ್ಕರ್ ಡಿಗ್ರಿ ಕಾಲೇಜ್ ಆವರಣದಲ್ಲಿ ಸಂವಿಧಾನದ ರಕ್ಷಣೆ ಯುವ ಜನತೆಯ ಹೊಣೆ ಎಂಬ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಯುವ ಭಾರತ ನಾಯಕರಾದ ಡಾ: ಕನ್ಹಯ್ಯ ಕುಮಾರ್ ಭಾಗವಹಿಸಿ ಸಂವಿಧಾನದ ಕುರಿತು ಮತ್ತು ಇಂದಿನ ಭಾರತದ ಸ್ಥಿತಿಗತಿ ಹಾಗು ಯುವ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ಮಾತನಾಡಲಿದ್ದಾರೆ.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಅನೇಕ ಜನ ಪ್ರಗತಿಪರ ಚಿಂತಕರು,ಸಂಘಟನಾಕಾರರು,ಹಿರಿಯ ಸಾಹಿತಿಗಳು ಹಾಗು ಸಹಸ್ರಾರು ಜನ ಯುವಕರು ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮಕ್ಕೆ ತಾಲ್ಲೂಕಿನ ಜನಪರ ಚಿಂತಕರು ಹಾಗು ಸಂವಿಧಾನ ರಕ್ಷಣೆಯ ಚಿಂತನೆಯುಳ್ಳ ಸಂಗಾತಿಗಳು ಹಾಗು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಗತಿಪರ ಹೋರಾಟಗಾರರಾದ ಮಲ್ಲಯ್ಯ ಕಮತಗಿ,ದೇವಿಂದ್ರಪ್ಪ ಪತ್ತಾರ,ಯಲ್ಲಪ್ಪ ಚಿನ್ನಾಕಾರ,ಹೈಮದ ಪಠಾಣ್,ಮೂರ್ತಿ ಬೊಮ್ಮನಹಳ್ಳಿ ಇತರರು ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here