ಕಲಬುರಗಿ: ಅದು ತುಂಬಾ ಪ್ರಶಾಂತವಾದ ಸ್ಥಳ. ಅಲ್ಲಿ ಮಧುರ ಕಂಠದಲ್ಲಿ ತೇಲಿಬರುವ ಹಾಡು. ಹಾಡಿಗೆ ತಕ್ಕಂತೆ ಹಾರ್ಮೋನಿಯಂ ನುಡಿಸುವುದು ತಬಲಾ ವಾದ್ಯದ ನಾದ ನಿನಾದ. ವಚನಗಳ ಹಾಡು ಸಂಗೀತಕ್ಕೆ ತಕ್ಕಂತೆ ಬೋರ್ಡ್ ಮೇಲೆ ಚಿತ್ರ ಬಿಡಿಸುವುದು ನಡೆದಿತ್ತು.
ಈ ಕ್ರಿಯೆಯನ್ನು ಕಂಡು, ಕೇಳಿದ ಶ್ರೋತೃ ವರ್ಗ ತಲೆದೂಗುವುದು, ಚಪ್ಪಾಳೆ ಬಾರಿಸುವ ಪ್ರಕ್ರಿಯೆ ನಡೆದಿತ್ತು. ಮೇಲಿನ ಈ ದೃಶ್ಯ ಜಯನಗರದ ಅನುಭವ ಮಂಟಪದದಲ್ಲಿ ಭಾನುವಾರ ಕಂಡು ಬಂದಿತು.
ಕಲಬುರಗಿ ಬಸವ ಸಮಿತಿಯ ಅಕ್ಕನ ಬಳಗ ಹಾಗೂ ಡಾ.ಬಿ.ಡಿ. ಜತ್ತಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ
ಆಶ್ರಯದಲ್ಲಿ ಶನಿವಾರದಿಂದ ಆರಂಭವಾಗಿರುವ ಮಹಾದೇವಿಯಕ್ಕಗಳ ಸಮ್ಮೇಳನ- 14 ರ ಹಾಡು-ದರ್ಶನ ನಾಲ್ಕನೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಚನಗಳ ಹಾಡಿಗೆ ಚಿತ್ರ ದರ್ಶನ ಮಾಡುವುದು ಬಹಳ ಕುತೂಹಲ ಹುಟ್ಟಿಸುವಂತಿತ್ತು.
ಡಾ. ಛಾಯಾ ಭರತನೂರ, ಅಶ್ವಿನಿ ಚಿಟ್ಟಾ, ರತ್ನಕಲಾ, ವಿಜಯಲಕ್ಷ್ಮೀ ಕೆಂಗನಾಳ, ವೈಶಾಲಿ ಪಾಟೀಲ ಅವರ ವಚನಗಳ ಹಾಡಿಗೆ ಡಾ. ಶಾಂತಲಾ ನಿಷ್ಠಿ, ಗೀತಾಂಜಲಿ ಮಲ್ಲಾಪುರ, ಶೈಲಾ ಬಿರಾದಾರ, ವಿದ್ಯಾವತಿ ಬಳಿ, ವೀಣಾ ಮಠ ಅವರು ಚಿತ್ರ ದರ್ಶನ ಮಾಡಿಸಿದರು.
ಕಲಬುರಗಿ ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸಮ್ಮೇಳನದ ಕಾರ್ಯಾಧ್ಯಕ್ಷೆ ಡಾ. ಜಯಶ್ರೀ ದಂಡೆ ಇತರರು ವೇದಿಕೆಯಲ್ಲಿ ಇದ್ದರು.
ಕಲಬುರಗಿ: ಡಿ.3 ವಿಕಲಚೇತನರನ್ನು ಇತರರಂತೆ ಕಾಣಬೇಕು. ಅನುಕಂಪಕ್ಕೆ ಸೀಮಿತವಾಗಿಸದೆ ಅವರಿಗೆ ಅವಕಾಶ ನೀಡಿ ಸಬಲರನ್ನಾಗಿಸುವ ಜವಾಬ್ದಾರಿ ಸಮಾಜದ ಮೇಲಿದೆ…
ಕಲಬುರಗಿ: ಇಂದು ಪ್ರಗತಿ ಕಾಲೋನಿಯ ಬಸವರಾಜ್ ಮಗಲಿ ಅವರ ಮಗಳು ಕುಮಾರಿ ಸ್ವಾತಿ 20 ವರ್ಷದಿಂದ ಅಂಗವಿಕಲತೆಯಿಂದ ಬಳಲುತ್ತಿದ್ದು ಆಕೆ…
ಕಲಬುರಗಿ: ಇಂದಿನ ಯುಗದಲ್ಲಿ ಎಲ್ಲರೂ ವಾಹನ ಹೊಂದಿದ್ದಾರೆ. ರಸ್ತೆಯಲ್ಲಿ ನಿಧಾನವಾಗಿ, ವಿವೇಕದೊಂದಿಗೆ ವಾಹನ ಚಾಲನೆ ಮಾಡಬೇಕು. ವಾಹನ ಸವಾರರ ತಪ್ಪಿನಿಂದ…
ಕಲಬುರಗಿ: ಸೇವಾನಿವೃತ್ತಿಯ ದಿನ ತನ್ನ ದೇಹ ಮತ್ತು ನೇತ್ರವನ್ನು ದಾನ ಮಾಡಿದ ಕೆ ಎಸ್ ಆರ್ ಪಿ ಕಲಬುರಗಿ ಘಟಕದ…
ಕಲಬುರಗಿ; ಇಂದು ಗ್ರಾಮಿಣ ಶಾಸಕರಾದ ಬಸವರಾಜ ಮತ್ತಿಮೂಡ್ ರವರಿಗೆ ಬಗರ್ ಹುಕುಂ ರೈತರ ಸಮಸ್ಯೆಗಳ ಕುರಿತು ಮನವಿಪತ್ರ ವನ್ನು ಸಲ್ಲಿಸಲಾಯಿತು.…
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್…