ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಶಿಸ್ತು ದೇಶಭಕ್ತಿ ದೇಶ ಪ್ರೇಮ ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ: ಅಲ್ಲಮಪ್ರಭು ಪಾಟೀಲ್

0
117

ಕಲಬುರಗಿ: ಹರಳಯ್ಯ ಭವನ ರಾಮಮಂದಿರ ಹಿಂದುಗಡೆ ನಡೆದ ತಾಲೂಕು ಮಟ್ಟದ ದೇಶಭಕ್ತಿ ಗೀತೆಯನ್ನು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ, ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ ಅಧ್ಯಕ್ಷರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ದಕ್ಷಿಣ ಇವರು ಮಾತನಾಡಿದರು.

ಇಡೀ ರಾಷ್ಟ್ರದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಮಕ್ಕಳಲ್ಲಿ ಶಿಸ್ತು ದೇಶ ಭಕ್ತಿ ದೇಶಪ್ರೇಮ ಬೆಳೆಸುವಲ್ಲಿ ಮುಂಚೂಣಿಯಲ್ಲಿದೆ ಇಂಥ ಸಂಸ್ಥೆಯ ಸಹಕಾರದೊಂದಿಗೆ ಮಕ್ಕಳ ಜೀವನ ಕೌಶಲ್ಯಗಳನ್ನು ಕಲಿಯಬೇಕೆಂದು ತಿಳಿಸಿದರು.

Contact Your\'s Advertisement; 9902492681

ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂದ್ಯಾ ಜಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಕೂಡ ಉತ್ತಮವಾಗಿರ್ತಕ್ಕಂತ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕೊಂಡಜ್ಜಿ ಮನೆತನದವರ ಸೇವೆಯನ್ನು ಕೂಡo ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿಜಯಕುಮಾರ್ ಜಮಖಂಡಿ ಅವರು ಮತ್ತು ದೈಹಿಕ ಶಿಕ್ಷಣ ಪರೀಕ್ಷಕರಾದ ಬಸವರಾಜ್ ರೆಡ್ಕಲ್ ಅವರು ಮತ್ತು ಉಪಾಧ್ಯಕ್ಷರಾದ ಡಾ. ಸುನಿಲ್ ಕುಮಾರ್ ವoಟಿ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಚಾಲತ್ವವನ್ನು ತಾಲೂಕಿನ ಕಾರ್ಯದರ್ಶಿಗಳಾದ ಅಂಬರೀಶ್ ಕೊರಿಯವರು ಮತ್ತು ಜಿಲ್ಲಾ ತರಬೇತಿ ಆಯುಕ್ತರು ಗೈಡ್ ಸುಮಂಗಲಾ ಕೋರಿ ಅವರು ವಹಿಸಿಕೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಗೀತ ಗಾಯನ ಕಾರ್ಯಕ್ರಮದ ನಿರ್ಣಾಯಕರಾಗಿ ಬಾಬುರಾವ್ ಕೋಬಾಳ್ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಾವಿದರು ಮತ್ತು ಸಿದ್ದಾರ್ಥ ಚಿಮ್ಮಾಯಿದಲಾಯಿ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿಯವರು ಮತ್ತು ಬಸಯ್ಯ ಗುತ್ತೇದಾರ್ ಆಕಾಶವಾಣಿ ಕಲಾವಿದರು ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಸ್ಕೌಟ್ ಆಯುಕ್ತರಾಗಿರ್ತಕ್ಕಂತ ಎಸ್. ಪಿ.ಸುಳ್ಳ ದ ತಾಲೂಕಿನ ಉಪಾಧ್ಯಕ್ಷರಾದ ಡಾ.ಸುನಿಲ್ ಕುಮಾರ್ ಒಂಟಿ ಮತ್ತು ಅವರು ಮತ್ತು ಸುದರ್ಶನ ಭವಾನಿ ಉಪಾಧ್ಯಕ್ಷ ಅಶೋಕ್ ಕಾಳೆ ಅವರು ಮತ್ತು ರಾಜ್ಯ ಪರಿಷತ್ ಸದಸ್ಯರು ಸ್ಕೌಟ್ ಪೀರಪ್ಪ ಹೂಗುಂಡ್ ಸರ್ ಅವರು ಮಕ್ಕಳಿಗೆ ಪಾರಿತೋಷಕವನ್ನು ವಿತರಿಸಿದರು.

ಗೀತಗಾಯನದ ಫಲಿತಾಂಶ ವಿವರ : ಗೈಡ್ ವಿಭಾಗ 1/ಅಪ್ಪ ಪಬ್ಲಿಕ್ ಶಾಲೆ ಕಲಬುರ್ಗಿ, 2/ಸಂತ ಜೋಸೆಫ್ ಆಂಗ್ಲ, ಮಾಧ್ಯಮ ಪ್ರಾಥಮಿಕ ಶಾಲೆ, 3/ಚಂದ್ರಕಾಂತ್ ಪಾಟೀಲ್ ಶಾಲೆ, ಸ್ಕೌಟ್ ವಿಭಾಗ: 1/ಅಪ್ಪ ಪಬ್ಲಿಕ್ ಶಾಲೆ, 2/ಕ್ಯಾನ್ ಬ್ರಿಡ್ಜ ಶಾಲೆ, 3/ಚಂದ್ರಕಾಂತ್ ಪಾಟೀಲ್ ಶಾಲೆ, ಕಬ್ ವಿಭಾಗ: 1/ಚಂದ್ರಕಾಂತ್ ಪಾಟೀಲ್ ಪಬ್ಲಿಕ್ ಶಾಲೆ, ಬುಲ್ ಬುಲ್ ವಿಭಾಗ: 1/ಚಂದ್ರಕಾಂತ್ ಪಾಟೀಲ್ ಪಬ್ಲಿಕ್ ಶಾಲೆ,‌ಸ್ಕೌಟ್ ಮಾಸ್ಟರ್ಸ್ ವಿಭಾಗ: 1/ಗುರುಲಿಂಗಯ್ಯ ಸ್ವಾಮಿ ಸ್ಕೌಟ್ ಮಾಸ್ಟರ್, 2/ಶಿವಕುಮಾರ್ ಸ್ಕೌಟ್ ಮಾಸ್ಟರ್ ಚಂದ್ರಕಾಂತ್ ಪಾಟೀಲ್ ಶಾಲೆ, ಗೈಡ್ ವಿಭಾಗ: 1/ಶ್ರೀಮತಿ ರಾಜಕುಮಾರಿ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, 2/ಪ್ರತಿಭಾ ಗೈಡ್ ಕ್ಯಾಪ್ಟನ್ ಚಂದ್ರಕಾಂತ್ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here