ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿ ಮತ್ತು ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ 120ನೇ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರೀಯ ಆಯುಕ್ತ ರವಿ ಯಾದವ “ಸ್ವಚ್ಚತಾ ಹಿ ಸೇವಾ” ಕಾರ್ಯಕ್ರಮದ ನಿಮಿತ್ತವಾಗಿ ಪೌರಕಾರ್ಮಿಕರಿಗೆ ಗೌರವಿಸಿ ಸನ್ಮಾನಿಸದರು.
ಕಾರ್ಯಕ್ರಮದಲ್ಲಿ ವಿಠ್ಠಲ, ಬಸವರಾಜ ಹೆಳವರ, ಮದನ ಕುಲಕರ್ಣಿ, ಮೋಹ್ಮದ ಯೂಸುಫ್, ಕಲ್ಪನಾ ಮದಭಾವಿ, ಜಗನ್ನಾಥ, ಪ್ರತಿಭಾ, ರಾವುಫ್ ಪಟೇಲ, ಶಿವಶರಣಪ್ಪ ಶಿವಕೇರಿ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.