ಕಲಬುರಗಿ: ಓದುವದು, ಬರೆಯುವುದು, ಆಲಿಸುವುದು, ಕಲಿಕೆಯ ಆಸಕ್ತಿ, ಪ್ರದರ್ಶಿಸುವಿಕೆಯ ವೈಶಿಷ್ಟತೆ ಈ ಐದು ಕೌಶಲ್ಯಗಳು ಯಶಸ್ಸಿನ ಮಂತ್ರಗಳಾಗಿವೆ. ವಿದ್ಯಾರ್ಥಿಗಳು ಯಶಸ್ಸಿನತ್ತ ಸಾಗಬೇಕು ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಇಂಜಿನಿಯರ್ಸ್ ಹೈದರಾಬಾದ್ ಪ್ರಾದೇಶಿಕ ಕೇಂದ್ರ (IIಛಿhe-hಡಿಛಿ) ಅಧ್ಯಕ್ಷ ಅಲ್ತಾಫ್ ಹುಸೇನ್ ಅಭಿಪ್ರಾಯ ಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಶರಣಬಸವ ವಿಶ್ವವಿದ್ಯಾಲಯ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಇಂಜಿನಿಯರ್ಸ್ ಹೈದರಾಬಾದ್ ಪ್ರಾದೇಶಿಕ ಕೇಂದ್ರ ಭಾನುವಾರ ಆಯೋಜಿಸಿದ IIche-hrc) (Indian institute of chemical engineers Hyderabad Regional centre IIche-hrc student chapter inauguration program) ವಿದ್ಯಾರ್ಥಿ ಅಧ್ಯಾಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಪಠ್ಯ, ಪಠ್ಯೇತರ ಹಾಗೂ ಇತರೆ ಪಠ್ಯೇತರ ಕಲಿಕೆಯತ್ತ ವಿದ್ಯಾರ್ಥಿಗಳು ಗಮನವಹಿಸಬೇಕು. ಇಂತಹ ಕಲಿಕೆಯಿಂದ ಮಾತ್ರ ವ್ಯಕ್ತಿತ್ವ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ನ್ಯೂ ಎಜುಕೇಶನ್ ಪಾಲಿಸಿಯಿಂದ ಇಂತಹ ಕಲಿಕೆ ಅವಕಾಶ ಸಿಕ್ಕಿದೆ ಎಂದರು.
ಈ ಅಧ್ಯಯನದಿಂದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಹೆಚ್ಚು ಹೆಚ್ಚು ಕಲಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಈ ಮೂಲಕ ಅಪ್ರೇಂಟಿಸ್, ಇಂಟರ್ನ್‍ಶಿಪ್ ಹಾಗೂ ಇತರೇ ಸ್ಪಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ ಮತ್ತು ಸಂಶೋಧನಾತ್ಮಕ ಕ್ರೀಯಾತ್ಮಕ ಮನಸ್ಥಿತಿ ಅಭಿವೃದ್ಧಿಗೊಳಿಸಿಕೊಳ್ಳಬಹುದು ಎಂದರು.
ಈ ಕಾರ್ಯಕ್ರಮದ ಇನ್ನೋರ್ವ ಅಥಿಯಾಗಿ ಭಾಗವಹಿಸಿದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಇಂಜಿನಿಯರ್ಸ್ ಹೈದರಾಬಾದ್ ಪ್ರಾದೇಶಿಕ ಕೇಂದ್ರದ ಕಾರ್ಯದರ್ಶಿ ಸಿ.ಎಚ್. ಅಪ್ಪಾರಾವ ಮಾತನಾಡಿ, ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಬೇಕು ಮತ್ತು ಕಲಿತ ವಿಷಯವನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಎನ್ನುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ವಿವಿ ಪ್ರಾಧ್ಯಾಪಕರಾದ ಡಾ. ಬಸವರಾಜ ಶ್ರೀಗಿರಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಎನÀರ್ಜಿ ಇಂಜಿನಿಯರಿಂಗ್ ವಿಭಾಗ ಆರಂಭವಾಗಿದ್ದು 2021ರಲ್ಲಿ, ಇಷ್ಟು ಕಡಿಮೆ ಅವಧಿಯಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಜಾಗತೀಕ ಸವಾಲುಗಳ ಬಗ್ಗೆ ಅಧ್ಯಯನ ಮಾಡಿ, ಪರಿಹಾರ ಕಂಡುಕೊಳ್ಳುವತ್ತ ಕಲಿಕೆಯಲ್ಲಿ ನಿರಂತರತೆ ಕಾಯ್ದುಕೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ಹೊಂದುವರು ಎಂದರು.
ವಿವಿ ಕುಲಸಚಿವ ಡಾ. ಎಸ್ ಜಿ. ಡೊಳ್ಳೇಗೌಡರ ಮಾತನಾಡಿ, ವಿದ್ಯಾರ್ಥಿಗಳು ಹಲವಾರು ಕ್ಷೇತ್ರದ ಕಲಿಕೆಯ ಮುಖಾಂತರ ಉತ್ತಮ ಪಾಠ ಪಡೆದುಕೊಳ್ಳಬಲ್ಲರು. ಈ ಜಗತ್ತಿನ ಭವಿಷ್ಯ ನಿಮ್ಮ ಕೈಯಲಿದೆ. ಹೀಗಾಗಿ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಿ ಎಂದರು.
ವೇದಿಕೆಯಲ್ಲಿ ವಿವಿ ಕುಲಪತಿ ಡಾ. ಅನೀಲಕುಮಾರ ಜಿ. ಬಿಡವೆ, ಕುಲಸಚಿವ ಮೌಲ್ಯಮಾಪನ ಡಾ. ಎಸ.ಎಸ್. ಹೊನ್ನಳ್ಳಿ, ಎಂಜನಿಯರಿಂಗ್ ವಿಭಾಗದ ಡೀನ ಡಾ. ಶಿವಕುಮಾರ ಜವಳಗಿ, ಪ್ರೊ. ವಿಕಾಸ ಕೆ. ಅಣಕಲ್ ಇತರರು ಇದ್ದರು.