ಕಲಬುರಗಿ: ಸರ್ವೋಚ್ಚ ನ್ಯಾಯಾಲಯದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಆಯಾ ರಾಜ್ಯಗಳು ಜಾರಿಗೊಳಿಸುವಂತೆ ತೀರ್ಪನ್ನು ಅನುಷ್ಠಾನಕ್ಕೆ ವಿರೋಧಿಸುತ್ತಿರುವ ವಿಠಲ ದೊಡ್ಡನಿಯವರ ಹೇಳಿಕೆಯನ್ನು ಸ್ವೀಕಾರರ್ಹವಲ್ಲದೆ ಖಂಡನೀಯವಾಗಿದೆ ಎಂದು ಹಿರಿಯ ಮಾದಿಗ ಸಮಾಜದ ಮುಖಂಡರಾದ ಅಂಬಾರಾಯ ಬೇಳಕೋಟಾ ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ ಎಲ್ಲಾ ಜಾತಿಗಳು ಮತ್ತು ಉಪ ಜಾತಿಗಳನ್ನು ಕರ್ನಾಟಕ ಸರ್ಕಾರ ಸಂವಿಧಾನ ಮತ್ತು ಕಾನೂನುಬದ್ದವಾಗಿ ನೇಮಕ ಮಾಡಿದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅವೈಜ್ಞಾನಿಕವಾಗಿದೆ ಮತ್ತು ವಿಶ್ವಾಸಾರ್ಹವಲ್ಲ ಎನ್ನುವುದಾದರೆ, ಡಾ: ಬಾಬಾ ಸಾಹೇಬ ಅಂಬೇಡ್ಕರ ರವರನ್ನು ಮತ್ತು ಅವರು ದೇಶಕ್ಕೆ ನೀಡಿರುವ ಸಂವಿಧಾನಕ್ಕೆ ಪ್ರಶ್ನಿಸಿದಂತಾಗಿದೆ. ಸಂವಿಧಾನಬದ್ಧವಾಗಿ ರಚನೆಗೊಂಡ ಕಾನೂನಿನಂತೆ ರಚಿಸಿರುವ ಆಯೋಗ ಪರಿಶೀಲಿಸಿ ಒಂದು ವರದಿ ನೀಡಿರುವುದನ್ನು ಪ್ರಶ್ನೆ ಮಾಡಲು ದೊಡ್ಡನಿಯವರು ಒಂದು ಶತಮಾನಕ್ಕಿಂತ ಹಳೆಯದಾದ ಅಂಕಿ-ಅಂಶಗಳನ್ನು ನೀಡಿರುವುದು ನಂಬಬಹುದಾಗಿದೆಯೇ?
ರಾಜ್ಯದಲ್ಲಿ ಹೊಲೆಯ-ಮಾದಿಗರು ಅಸ್ಪಶ್ಯರಾಗಿದ್ದು, ಈ ಜಾತಿಗಳನ್ನು ಸರ್ಕಾರದ ಸೌಲಭ್ಯಗಳಿಂದ ಮತ್ತು ಸರ್ಕಾರದ ಸೇವೆಗೆ ಸೇರುವಲ್ಲಿಯ ಹಿನ್ನಡೆಯಾಗುತ್ತಿರುವುದರಿಂದಲೇ ಪರಿಶಿಷ್ಟ ಜಾತಿಯಲ್ಲಿ ಮೀಸಲಾತಿಯಲ್ಲಿ
ಒಳಮೀಸಲಾತಿ ವರ್ಗೀಕರಣಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಹೊಲೆಯ-ಮಾದಿಗರು ಜಂಟಿಯಾಗಿ ಹೋರಾಟ ಮಾಡಿರುವುದು ಇತಿಹಾಸ ದತ್ತಾಂಶದ ಪ್ರಸ್ತಾಪ ಮಾಡುವುದು ಅವೈಜ್ಞಾನಿಕವಾದದ್ದು ಎನ್ನುವ ಹೇಳಿಕೆಯನ್ನು ಮತ್ತು ಮಾದಿಗ ಸಮಾಜದವರ 30 ವರ್ಷದ ಹೋರಾಟವನ್ನು ನಾಟಕವೆನ್ನುವುದಾದರೆ ವಿಠಲ ದೊಡ್ಡನಿಯವರೆ, ತಮ್ಮ ಸುಧೀರ್ಘವಾದ ರಾಜಕೀಯ ಸಾಮಾಜಿಕ ಜೀವನ ನಾಟಕೀಯವಾಗಿದೆಯೇ ಎಂದು ಪ್ರಶ್ನಿಸಬೇಕಾಗುತ್ತದೆ.
ಅಲ್ಲದೆ ಈ ಹೇಳಿಕೆಯನ್ನು ಉಗ್ರವಾಗಿ ಖಂಡಿಸಬೇಕಾಗುತ್ತದೆ. ಕರ್ನಾಟಕ ಘನ ಸರ್ಕಾರ ಪ್ರಸ್ತುತ ಲಭ್ಯವಿರುವ ದತ್ತಾಂಶಗಳನ್ನು ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸುವುದಕ್ಕೆ ಯಾವುದೇ ಅಡಚಣೆ ಇಲ್ಲ. ಮಾನ್ಯ ಮುಖ್ಯ ಮಂತ್ರಿಗಳು ಇಚ್ಛಾ ಶಕ್ತಿ ಪ್ರದರ್ಶನ ಮಾಡಬೇಕು, ನಾಡಿನ ಅಸ್ಪೃಶ್ಯರು ಮತ್ತು 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಿಕೊಡುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸುತ್ತೇವೆ.
ಸುಧೀರ್ಘ ಸಾಮಾಜಿಕ ಮತ್ತು ಸಾರ್ವಜನಿಕ ಜೀವನದಲ್ಲಿರುವಂತೆ ಜನಪರ ಚಿಂತನೆಗಳಿಂದ ಬಂದ ವಿಠಲ ದೊಡ್ಡನಿಯವರು ಈ ರೀತಿಯಾದ ಕೆಳಮಟ್ಟದ ಪದಪ್ರಯೋಗ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.