ಕಲಬುರಗಿ: ಸಮುದಾಯ ಭವನ ಮುಕ್ತಾಯಕ್ಕೆ ರೂ. 15.00 ಲಕ್ಷ ಅನುದಾನ ಮಂಜೂರು ಮಾಡಬೇಕೆಂದು ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಜೀರ್ಣೋದ್ದಾರ ಟ್ರಸ್ಟ್‍ನ್ ಅಧ್ಯಕ್ಷ ಸಾಯಬಣ್ಣ ಎಂ. ಹೋಳ್ಳರ ಹಾಗೂ ಪ್ರಧಾನ ಕಾರ್ಯದರ್ಶಿ ಮೋತಿಲಾಲ ಎಂ. ಕಟಕೆ ಅವರು ವಿಧಾನ ಪರಿಷತ್ ಸದಸ್ಯ ತಿಪಣ್ಣಪ್ಪ ಕಮಕನೂರ ಅವರಿಗೆ ಮನವಿ ಸಲ್ಲಿಸಿದರು.
ಟ್ರಸ್ಟ್ ಸ್ಥಾಪನೆಯ ಮುಂಚಿತವಾಗಿಂದಲೂ ಸಹ ಶರಣ ಡೋಹರ ಕಕ್ಕಯ್ಯ ದೇವಸ್ಥಾನವಿದ್ದು ಅದರ ಹೆಸರಿನಲ್ಲಿ ಈ ಟ್ರಸ್ಟರನ್ನು ಪ್ರಾರಂಭಿಸಲಾಗಿದೆ ನಂತರ ಹಲವಾರು ಶಾಸಕರು, ಸಚಿವರಲ್ಲಿ ಅನುದಾನಕ್ಕೆ ಮೊರೆಹೋದರೂ ಸಹ, ಈವರೆಗೂ ಸದರಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಆಗಲಿ ಅಥವಾ ಇನ್ನಾವುದೇ ಕಾರ್ಯಕ್ಕಾಗಲಿ ಯಾವುದೇ ಅನುದಾನವನ್ನು ಪಡೆದಿರುವುದಿಲ್ಲ, ಸದ್ಯ ಸದರಿ ಟ್ರಸ್ಟನ್ ಹಾಸರಿನಲ್ಲಿ 970 ಚದರ ಅಡಿ ಖುಲ್ಲಾ ನಿವೇಶನವಿದ್ದು, ಸದರಿ ನಿವೇಶನದಲ್ಲಿ ಟ್ರಸ್ಟನ ಹೆಸರಿನಲ್ಲಿ ಒಂದು ಸಮುದಾಯ ಭವನವನ್ನು ಕಟ್ಟಲು ನಿರ್ಧರಿಸಲಾಗಿರುತ್ತದೆ ಹಾಗೂ ಈಗಾಗಲೇ ಒಂದು ಹಂತದ ಕಾಮಗಾರಿ ಮುಗಿದಿದ್ದು ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇರುತ್ತದೆ, ಏಕೆಂದರೆ ಸುತ್ತಮುತ್ತಲಿನ ಜನರು ಹಾಗೂ ದೂರದಿಂದ ಬರುವ ಭಕ್ತಾದಿಗಳಿಗೆ ಅಲ್ಲಿ ಸಭೆ, ಸಮಾರಂಭ ಇತರೇ ಕಾರ್ಯಗಳನ್ನು ಮಾಡಲು ಅಡುಗೆ ಮಾಡಲು, ತಂಗಲು ಸೂಕ್ತ ಸ್ಥಳ ಇರುವುದಿಲ್ಲ, ಕಾರಣ ಅಲ್ಲಿ ಒಂದು ಸಮುದಾಯ ಭವನವನ್ನು ನಿರ್ಮಾಣ ಮಾಡಿದ್ದಲ್ಲಿ ಭಕ್ತಾದಿಗಳಿಗೆ, ಹಾಗೂ ದೂರದ ಊರಿನಿಂದ ಬರುವ ಭಕ್ತಾದಿಗಳಿಗೆ ತಂಗಲು, ವಿಶ್ರಾಂತಿ ಪಡೆಯಲು, ಇಲ್ಲವೇ ಹಲವಾರು ಸಭೆ ಸಮಾರಂಭಗಳಿಗೆ ಉಪಯುಕ್ತವಾಗುತ್ತದೆ.
ಆದರಿಂದ ತಮ್ಮ ಅನುದಾನದ ಅಡಿಯಲ್ಲಿಯಲ್ಲಿ ಸಮುದಾಯ ಭವನ ಪೂರ್ಣಗೊಳಿಸಲು ರೂ. 15.00 ಲಕ್ಷಗಳ ಸಹಾಯಧನವನ್ನು ಮಂಜೂರು ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.