ಕಲಬುರಗಿ; ಸಿ.ಸಿ.ಚರಂಡಿ ಅಂದಾಜು ರೂ.3.00 ಕೋಟಿ ವೆಚ್ಚದ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರ ಅಂದಾಜು ಪತ್ರಿಕೆಯಲ್ಲಿರುವಂತೆ ನಿರ್ವಹಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ ಕಲಬುರಗಿ ಅಭಿವೃದ್ಧಿಪರ ಸಮಿತಿ ವತಿಯಿಂದ ಮೇಯರ್ ಯಲ್ಲಪ್ಪ ನಾಯಿಕೊಡಿ ಅವರಿಗೆ ಮನವಿ ಸಲ್ಲಿಸಿದರು.
ನಗರದ ಫೈಯರ ಬ್ರಿಗೇಡ ಕಛೇರಿಯಿಂದ ಲಾಳಗೇರಿ ಕ್ರಾಸ್ ಮುಖಾಂತರ ಪೂರ್ಣಾನಂದ ಪ್ಯಾರಡೈಸ ಹೊಟೇಲವರೆಗೆ ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿರುವ ಕಾಮಗಾರಿಯ ಉಸ್ತುವಾರಿಗಾಗಿ ವಲಯ ಕಛೇರಿ-02ಕ್ಕೆ ವರ್ಗಾವಣೆಗೊಳಿಸಿರುವ ಕಿರಿಯ ಅಭಿಯಂತಕರು ಈ ಕೂಡಲೇ ಸಿ.ಸಿ.ಚರಂಡಿ ಕೆಲಸ ನಿರ್ವಹಿಸುತ್ತಿರುವ ಸ್ಥಳದಲ್ಲಿ ಅಂದಾಜು ಪತ್ರಿಕೆ ಹಾಗೂ ನೀಲನಕ್ಷೆಯೊಂದಿಗೆ ಹಾಜರಿರುವಂತೆ ಹಾಗೂ ಈ ಮೊದಲು ಫೈಯರ ಬಿಗೇಡ ಕಛೇರಿಯಿಂದ ಕಿಲ್ಲಾಕಡೆ ನಿರ್ಮಿಸಿರುವ ಸಿ.ಸಿ.ಚರಂಡಿಯನ್ನು ಸ್ವಚ್ಚಗೊಳಿಸಿ ಅದರ ಮೇಲೆ ಸ್ಥಾಬ ಹಾಕುವ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಒತ್ತಾಯಿಸಿದರು.
ನಗರದ ಫೈಯರ ಬ್ರಿಗೇಡ ಕಛೇರಿಯಿಂದ ಲಾಳಗೇರಿ ಕ್ರಾಸ ಮುಖಾಂತರ ಪೂರ್ಣಾನಂದ ಪ್ಯಾರಡೈಸ ಹೋಟೆಳವರೆಗೆ ದೊಡ್ಡ ಪ್ರಮಾಣದಲ್ಲಿ ಸಿ.ಸಿ.ಚರಂಡಿ ರೂ.3.00 ಅಂದಾಜು ಮೊತ್ತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರನು ಅಂದಾಜು ಪತ್ರಿಕೆಯಲ್ಲಿ ನಮೂದಿಸಿರುವಂತೆ ಕಾಮಗಾರಿಯನ್ನು ನಿರ್ವಹಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿಯನ್ನು ನಿರ್ವಹಿಸುತ್ತಲಿದ್ದಾನೆ. ಕಾಮಗಾರಿಯನ್ನು ವೀಕ್ಷಣೆ ಮಾಡುವ ಯಾರೊಬ್ಬ ಅಧಿಕಾರಿಯು ಕಾಮಗಾರಿ ನಡೆಯುವ ಸ್ಥಳದಲ್ಲಿ ವೀಕ್ಷಣೆಯನ್ನು ಮಾಡುತ್ತಿಲ್ಲ ಎಂದು ದುರಿದ್ದರು.
ಕಾರಣ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ವಲಯ ಕಛೇರಿ-02ಕ್ಕೆ ವರ್ಗಾವಣೆಗೊಳಿಸಿರುವ ಕಿರಿಯ ಅಭಿಯಂತಕರನ್ನು ಈ ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಕ್ತ ನಿರ್ದೇಶನವನ್ನು ನೀಡುವಂತೆ ಹಾಗೂ ಫೈಯರ ಬ್ರಿಗೇಡ ಕಛೇರಿಯಿಂದ ಕಿಲ್ಲಾದ ಕಡೆ ನಿರ್ಮಿಸಲಾಗಿರುವ ಸಿ.ಸಿ.ಚರಂಡಿಯನ್ನು ಸ್ವಚ್ಚಗೊಳಿಸಿ ಅದರೆ ಮೇಲೆ ಸ್ಥಾಬ ಹಾಕುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಲೂಯಿಸ್ ಕೊರಿ, ಗೌರವಾಧ್ಯಕ್ಷ ಶಿವಕುಮಾರಿ ಬಾಳಿ, ಮಲ್ಲಿಕಾರ್ಜುನ ಸಾಗರ, ರಾಜಶೇಖರ ಪಾಟೀಲ, ಸೇರಿದಂತೆ ಇತರರು ಇದ್ದರು.