ಕಲಬುರಗಿ: ಇಲ್ಲಿನ ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳು ನೂತನ ಆವಿಷ್ಕಾರವೊಂದನ್ನು ಮಾಡುವ ಮೂಲಕ ಗೋವಾದಲ್ಲಿ ನಡೆದ ವಾರ್ಷಿಕ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ ನಾವೀನ್ಯತೆ ಪ್ರಶಸ್ತಿ ಹಾಗೂ ಚಿನ್ನದ ಪದಕ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ನವೆಂಬರ್ 13 ಹಾಗೂ 14ರಂದು ಗೋವಾದಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಇನ್ನೋವೇಷನ್ ಎಕ್ಸಪೊ ಆಯೋಜಿಸಿದ್ದ ವಾರ್ಷಿಕ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ ಭಾಗವಹಿಸಿದ್ದ ಮಹೆತಾ ಶಾಲೆಯ ವಿದ್ಯಾರ್ಥಿಗಳಾದ ಸ್ಮಿತಾ ಹಾಗೂ ವೇದಾ ಪ್ಲಾಸ್ಟಿಕ್ ಬಾಟಲ್ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ರಿಸೈಕಲಿಂಗ್ ಮಾಡುವ ಯಂತ್ರವನ್ನು ಆವಿಷ್ಕಾರ ಮಾಡಿ ಪ್ರದರ್ಶನ ಮಾಡಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕಲಬುರಗಿ ಕೀರ್ತಿಯನ್ನು ಹೆಚ್ವಿಸಿದ್ದಾರೆ.
ಪ್ರದರ್ಶನದಲ್ಲಿ ರಾಜ್ಯಮಟ್ಟದಲ್ಲಿ ಬಹು ಸ್ತ್ರೀನಿಂಗ್ ಮತ್ತು ಆಯ್ಕೆ ಪ್ರಕ್ರಿಯೆ ನಂತರ ದೇಶ್ಯಾದಂತ ಆಯ್ಕೆಯಾದ ಸುಮಾರು 60 ಕ್ಕೂ ಹೆಚ್ಚು ಕಾರ್ಯಯೋಜನೆಗಳು ಪ್ರದರ್ಶನ ಮಾಡಲಾಗಿತ್ತು. ಯಾವುದೇ ವಯಸ್ಸಿನ ಮಾನದಂಡವಿರಲಿಲ್ಲ. ಆದ್ದರಿಂದ ಶಾಲೆಗಳು ಇಂಜಿಯನರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂಥಹ ಕಠಿಣ ಸ್ಪರ್ಧೆ ನಡುವೆ ನಮ್ಮ ವಿದ್ಯಾರ್ಥಿಗಳ ಕಾರ್ಯ ಪರಿಕಲ್ಪನೆ ಮತ್ತು ಆಲೋಚನೆಗಳನ್ನು ಗುರುತಿಸಿ ಪ್ರಶಂಸೆ ಪಡೆದಿದ್ದು, ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿದೆ. ನಾವು ಚಿನ್ನದ ಪದಕ ಪಡೆದುಕೊಂಡಿದ್ದೇವೆ ಎಂದು ಎಸ್ ಆರ್ ಎನ್ ಮೆಹೆತಾ ಶಾಲೆಯ ನಿರ್ದೇಶಕರಾದ ಪ್ರೀತಂ ಮೆಹೆತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಎಸ್ ಆರ್ ಎನ್ ಮೆಹೆತಾ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿವರ್ಷವೂ ಒಂದಿಲ್ಲೊಂದು ಆವಿಷ್ಕಾರದ ಮುಖಾಂತರ ಪರಿಸರ ಸ್ನೇಹಿ, ಜನಸ್ನೇಹಿ ಯಂತ್ರಗಳನ್ನು ಆವಿಷ್ಕಾರ ಮಾಡಿ ಜನ ಮನ್ನಣೆಗೆ ಪಾತ್ರವಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.