ಕಲಬುರಗಿ: ನಗರದ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿರುವ ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ನವಚೇತನ ಸಾಂಸ್ಕøತಿಕ ಕಲಾ ಸಂಸ್ಥೆ ವತಿಯಿಂದ ಜಾನಪದ ನೃತ್ಯೋತ್ಸವ ಕಾರ್ಯಕ್ರಮವನ್ನು ಮಹಾದೇವ ಹಿ.ಪ್ರಾ.ಶಾಲೆಯ ಮುಖ್ಯ ಗುರುಗಳಾದ ನೀಲಮ್ಮ ಕೆ. ಪುರಂತ ಅವರು ಉದ್ಘಾಟಿಸಿದರು.
ಪೂಜ್ಯ ಶ್ರೀ ಭರತರಾಜ್ ಅಪ್ಪಾಜಿ, ಶ್ರೀ ಕೋಕಿಲ ಪರಮೇಶ್ವರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಜೋಕೆ, ಪಿ.ಎಸ್.ಐ ಯಶೋಧಾ ಕಟಕೆ, ನವಚೇತನ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಆಕಾಶ ಎಸ್. ಕಾಳೆ, ನಾಮದೇವ ಜೋಕೆ, ಅಕ್ಷಯ್ ಡ್ಯಾನ್ಸ್‍ರ್, ಶಶಿಕಾಂತ ಆರ್. ದಿಕ್ಷೀತ್, ರಾಹುಲ ಕಟ್ಟಿ, ಶಿವಾನಂದ ಹೊನಗುಂಟಿ, ನಟರಾಜ ಕಟ್ಟಿಮನಿ, ಶರಣು ಕಿರಸಾವಳಗಿ, ಗುರುಶರಣ ಪಾಟೀಲ ಸೇರಿದಂತೆ ಇತರರು ಇದ್ದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.