ಸರ್ಕಾರಿ ನೌಕರನ ಮೇಲೆ ದೌರ್ಜನ್ಯ ಎಸಗಿದ ಆರೋಪಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ 

0
672

ಮರಿಗೌಡ ಬಾದರದಿನ್ನಿ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುಕನೂರು ಪೊಲೀಸ್ ಠಾಣೆಯ ಸರಹದ್ದಿನ ಕುಕನೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಆಗಿ ಸರ್ಕಾರಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ ಇತನ ಮೇಲೆ ಕುಕನೂರು ಪಟ್ಟಣದ ಆರೋಪಿ ಈಶಪ್ಪ ಸಬರದ ಇತನು ಹಲ್ಲೇ ನಡೆಸಿ ಕೈ ಮುಷ್ಟಿಯಿಂದ ಗುದ್ದಿ ತೀವ್ರ ಸ್ವರೂಪದ ಗಾಯಗೊಳಿಸಿದ ಆರೋಪ ಎಸಗಿರುವುದು ವಾದ-ಪ್ರತಿವಾದಗಳಿಂದ ಸಾಭಿತಾಗಿದೆ ಎಂದು ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಈ ಆರೋಪಿಗೆ ಶಿಕ್ಷೆಯನ್ನು ವಿಧಿಸಿದ್ದಾರೆ.

ಈ ಪ್ರಕರಣದ ಹಿನ್ನಲೆ ಏನು?: ಕುಕನೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕುಕುನೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬಸವರಾಜ ಈತ ಬಿಲ್ ಕಲೆಕ್ಟರ್ ಎಂದು ಕರ್ತವ್ಯ ನಿರ್ವಹಿಸುತ್ತಿರಬೇಕಾದರೆ ಆರೋಪಿ ಈಶಪ್ಪ ಸಬರದ ಇತನು ದಿನಾಂಕ 06-11-2012 ರಂದು ಮನೆಯ ವರ್ಗಾವಣೆ ಮುಟೇಶನ್ ತಿದ್ದುಪಡಿ ಮಾಡುವ ವಿಷಯವಾಗಿ ಕಛೇರಿಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಸವರಾಜ ಇತನೊಂದಿಗೆ ಬಾಯಿ ಮಾತಿನ ಜಗಳ ಮಾಡಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅಲ್ಲದೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯಾಗುವಂತೆ ಆತನ ಅಂಗಿ ಹಿಡಿದು ಎಳೆದಾಡಿ ಕೈ ಮುಷ್ಟಿ ಮಾಡಿ ಎದೆಗೆ ಮತ್ತು ಭುಜಕ್ಕೆ ಬಲವಾಗಿ ಭಾರಿಸಿ ತೀವ್ರ ಸ್ವರೂಪವಾದ ಗಾಯಗೊಳಿಸಿದ್ದ ಅಲ್ಲದೆ ಒಬ್ಬನೇ ಹೊರಗೆ ಸಿಕ್ಕರೆ ಕೊಲೆಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ.

Contact Your\'s Advertisement; 9902492681

ದೂರು ದಾಖಲು:ಬಸವರಾಜ ಬಿಲ್ ಕಲೆಕ್ಟರ್ ದಿನಾಂಕ 16-11-2012 ರಂದು ಪೊಲೀಸ್ ಠಾಣೆ ದಾವಿಸಿ ದೂರು ನೀಡಿದ್ದರು ಪೊಲೀಸ್ ಠಾಣೆ ಗುನ್ನೆ ನಂಬರ್ 117/2012 ರಡಿಯಲ್ಲಿ ಕಲಂ 448,333,504,506, IPC ಇದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಠಾಣಾಧಿಕಾರಿಗಳಾದ ಹೆಚ್.ಗುರುಬಸವರಾಜ ಪಿಎಸ್ಐ ರವರು ಇವರು ತನಿಖೆ ಮಾಡಿ ಆರೋಪಿಯ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಕುಕನೂರು ಪಟ್ಟಣದ ಆರೋಪಿ ಈಶಪ್ಪ ಸಬರದ ಇತನ ಮೇಲಿರುವ ಆರೋಪಗಳು ಸಾಭೀತಾಗಿವೆ ಎಂದು ಮಾನ್ಯ ನ್ಯಾಯಾಧೀಶರಾದ ಶ್ರೀ ಸಂಜೀವ್ ಕುಲಕರ್ಣಿ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಕೊಪ್ಪಳ ರವರು ಆರೋಪಿಗೆ ,3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 11,000 ಗಳ ದಂಡ ವಿಧಿಸಿದ್ದು ದಂಡದ ಮೊತ್ತದಲ್ಲಿ ರೂ. 10,000 ಗಳನ್ನು ಗಾಯಾಳು ಬಸವರಾಜ ಇತನಿಗೆ ಪರಿಹಾರ ರೂಪದಲ್ಲಿ ವಿತರಿಸಲು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ನಿವೃತ್ತರಾದ ಶ್ರೀ ಮಹಾಂತಪ್ಪ ಎ‌ ಪಾಟೀಲ್ ಇವರು ಪ್ರಕರಣ ನಡೆಸಿದ್ದು ಹಾಗೂ ಶ್ರೀ ಅಂಬಣ್ಣ ಟಿ ಸರ್ಕಾರಿ ಅಭಿಯೋಜಕರು ಕೊಪ್ಪಳ ಇವರು ವಾದ ಮಂಡಿನೆ ಮಾಡಿ ಆರೋಪಿಗೆ ಶಿಕ್ಷೆಯನ್ನು ವಿಧಿಸುವಲ್ಲಿ ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ಅಭಿಯೋಜಕರು ಯಶ್ವಿಯಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here