ಕಲಬುರಗಿ: ದಿನಾಂಕ:24-12- 2024 ರಂದು ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಸಮತಾ ಲೋಕ ಶಿಕ್ಷಣ ಟ್ರಸ್ಟ್ ಕಲಬುರಗಿ, ಕೃಷಿ ಮಾಹವಿದ್ಯಾಲಯ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಸಿರ ನಾಡಿನ ಕೃಷಿ ಜಾತ್ರೆ- 2024 ರಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಆಳಂದನ ಶಾಸಕರಾದ ಬಿ.ಆರ್. ಪಾಟೀಲ ಹಾಗೂ ಕೆ . ಎಮ. ಎಪ್. ನ ಅಧ್ಯಕ್ಷರಾದ ಆರ್. ಕೆ. ಪಾಟೀಲ ಇವರ ಮಾರ್ಗ ದರ್ಶನ ಹಾಗೂ ಉಪಸ್ಥಿತಿಯಲ್ಲಿ ಮಹಿಳಾ ಗ್ರಾಹಕರಿಂದ ಸಸಿಗೆ ನಿರು ಹಾಕುವ ಮೂಲಕ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಆಚರಿಸಲಾಯಿತು, ಈ ಸಂದರ್ಭದಲ್ಲಿ ವೈಜನಾಥ ಎಸ್ ಝಳಕಿ ನ್ಯಾಯವಾದಿ, ಪ್ರಧಾನ ಕಾರ್ಯದರ್ಶಿ ಮಾಹತ್ಮಗಾಂಧಿಜಿ ಗ್ರಾಹಕರ ಹಿತರಕ್ಷಣೆ ವೇದಿಕೆ (ರಿ) ಅವರು ರೈತರಿಗೆ ಗ್ರಾಹಕ ಹಿತರಕ್ಷಣಾ ಕಾಯ್ದೆಯ ಉಪಯೋಗಗಳ ಕುರಿತು ವಿಶೇಷ ಉಪನ್ಯಾಸ ನ ನಿಡಿ ಗ್ರಾಹಕರೊಂದಿಗೆ ಸಂವಾದ ನಡೆಸುತ್ತಾ, “ಜಾಗ್ರತ ಗ್ರಾಹಕರು ದೇಶದ ಆರ್ಥಿಕ ಶಕ್ತಿಯ ಭದ್ರ ಬುನಾದಿ” ಎಂದು ಹೇಳಿದರು, ಗ್ರಾಹಕರು ಜಾಗ್ರತಿಯಿಂದ ವ್ಯವಹರಿಸಿ ಬೇಕು , ಕಡ್ಡಾಯವಾಗಿ ಪ್ರತಿಯೊಂದು ಖರಿದಿಗೆ- ವ್ಯಾಪರಿಗಳಿಂದ ರಸಿದಿ ಪಡೆಯಬೇಕು ಇದರಿಂದ ನೊಂದ ಗ್ರಾಹಕರಿಗೆ ಗ್ರಾಹಕ ಕಾಯ್ದೆ ಅಡಿ ನ್ಯಾಯ ಪಡೆಯಲು ಅನಕುಲ ವಾಗುತ್ತದೆ ಹಾಗೂ ರಸಿದಿ ಪಡೆದು ವ್ಯವಹರಿಸುವ ಗ್ರಾಹಕರ ಜಾಗ್ರತಿ ಯಿಂದ ಟ್ಯಾಕ್ಸ ಸಂಗ್ರಹ ವಾಗುತ್ತದೆ ಇದರಿಂದ ನೇರವಾಗಿ ದೇಶದ ಆರ್ಥಿಕ ಅಭಿವೃದ್ಧಿಗೆವಾಗುತ್ತದೆ ಎಂದು ಹೇಳಿದರು, ಈ ಸಂವಾದದಲ್ಲಿ ಶಾಸಕರಾದ ಬಿ.ಆರ್.ಪಾಟೀಲ ಅವರು ಸಕ್ರಿಯವಾಗಿ ಭಾಗವಹಿಸಿ ರೈತರಿಗೆ, ಗ್ರಾಹಕರಿಗೆ ಗ್ರಾಹಕ ಹಿತರಕ್ಷಣ ಕಾಯ್ದೆಯ ಮಹತ್ವ ಹಾಗೂ ಉಪಯೋಗಗಳನ್ನು ಉಪನ್ಯಾಸಕರಾದ ಝಳಕಿ ಅವರಿಂದ ವಿವರವಾಗಿ ಒದಗಿಸಿದರು,
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಸಮದ ಪಟೇಲ, ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ಹಿರಿಯ ವಿಜ್ಞಾನಿ ರಾಜು ತೆಗ್ಗಳ್ಳಿ, ಕೃಷಿ ವಿಜ್ಞಾನಿಗಳಾದ ಡಾ. ಮಲ್ಲಪ್ಪ , ಡಾ. ಚಂದ್ರಕಾಂತ ಕೃಷಿ ವಿಜ್ಞಾನ ಕೇಂದ್ರ ರದ್ದೆವಾಡಗಿ, ರಾಜಶೇಖರ ಬಸನಾಯಕ ಕೃಷಿ ಕಾಲೇಜ ಕಲಬುರಗಿ, ಕೆ.ಎಮ. ಎಫ್. ಕಲಬುರಗಿಯ ನಿವೃತ ಎಮ.ಡಿ. ಡಾಕ್ಟರ್ ಕಮಕೇರಿ ಹಾಗೂ ಆಳಂದನ ಸಾಹಯಕ ಕೃಷಿ ನಿರ್ದೇಶಕರಾದ ಶರಣಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು, ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಹಸ್ರಾರು ರೈತರು ಭಾಗವಹಿಸಿದ್ದರು.