ಬೆಂಗಳೂರು: ಇತ್ತೀಚಿಗೆ ಜೈಲಿನಿಂದ ಬಿಡುಗಡೆಯಾದ ಮಾಜಿ ಸಚಿವ ಡಿಕೆ ಶಿವಕುಮಾರ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಡಿಕೆಶಿ, ಸಿದ್ದರಾಮಯ್ಯ ಅವರ ಬಳಿಕ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ಎಂದು ಸಿದ್ದು ತಮ್ಮ ಟ್ವೀಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲಾತಾಣ ಟ್ವೀಟರ್ ನಲ್ಲಿ ಡಿಕೆಶಿ ಹಾಗೂ ತಮ್ಮ ಫೋಟೋ ಅಪ್ಲೋಟ್ ಮಾಡಿ ಟ್ವೀಟ್ ಮಾಡಿ ಸ್ಟೋಟಕ್ ಮಾಹಿತಿ ಹಂಚಿಕೊಂಡಿರುವುದಾಗಿ ತಿಳಿಸಿದ್ದಾರೆ.
Visited former minister Shri. @DKShivakumar at his residence and conveyed my support to him. Inspite of being targeted for political reasons, he has not lost his confidence.@INCIndia party will always stand with him.@INCKarnataka pic.twitter.com/DxjyVxzasy
— Siddaramaiah (@siddaramaiah) October 27, 2019
(ಇಡಿ) ಅಧಿಕಾರಿಗಳು ನನ್ನ ಏಕೆ ಅರೆಸ್ಟ್ ಮಾಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಅವರು ನನ್ನನ್ನು ಅರೆಸ್ಟ್ ಮಾಡಿದ್ದರು. ಏಕೆ ಅರೆಸ್ಟ್ ಮಾಡಿದರು ಎಂಬುದು ನನಗೂ ಗೊತ್ತಾಗಲಿಲ್ಲ. ನನ್ನನ್ನು ಬಂಧಿಸಿರುವುದನ್ನು ನೋಡಿದ ನನ್ನ ವಕೀಲರಿಗು ಕೂಡ ಶಾಕ್ ಆಯಿತು ಎಂದು ಹೇಳಿದ್ದಾರೆ.
ಈಗಲೇ ಅರೆಸ್ಟ್ ಮಾಡಿ ಎಂದು ಇಡಿ ಅಧಿಕಾರಿಗಳಿಗೆ ಸಾಹೇಬ್ ಆದೇಶಿಸಿದ್ದರು. ಆ ಸಾಹೇಬರ ಆದೇಶದಂತೆ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ. ಈ ವೇಳೆ ನಾನು ಏಕೆ ನನ್ನನ್ನು ಅರೆಸ್ಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ‘ಮೇಲಿನ ಸಾಹೇಬರು ಹೇಳಿದಂತೆ ನಾವು ಮಾಡುತ್ತಿದ್ದೇವೆ. ಅವರು ಹೇಳಿದ್ದನ್ನು ಮಾಡುವುದು ನಮ್ಮ ಕೆಲಸ ಎಂದು ಇಡಿ ಅಧಿಕಾರಿಗಳು ಉತ್ತರಿಸಿದ್ದರು ಎಂದು ಡಿಕೆಶಿ ತಿಳಿಸಿದ್ದಾರೆ.
ಬಂಧಿಸಿದ್ದಕ್ಕೆ ಇಡಿ ಅಧಿಕಾರಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅರೆಸ್ಟ್ ಮಾಡುವ ಕೇಸಲ್ಲ ಸಾರ್ ಎಂದು ಹೇಳಿದರೂ ಯಾಕೆ ಅರೆಸ್ಟ್ ಮಾಡಿ ಎಂದು ಹೇಳುತ್ತಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ.
ಆದರೆ ನಾವು ಮೇಲಿನವರ ಆದೇಶವನ್ನು ಪಾಲಿಸದೇ ವಿಧಿಯಿಲ್ಲ ಎಂದು ಕೆಲ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.