ರಾಮ ಮಂದಿರದ ತೀರ್ಪನ್ನು ಸೌಹಾರ್ಧದಿಂದ ಸ್ವಾಗತಿಸೋಣ: ರಾಜುಗೌಡ

0
259

ಸುರಪುರ: ಮುಂಬರುವ ದಿನಗಳಲ್ಲಿ ಸುಪ್ರೀಂ ಕೋರ್ಟ ಆಯೋಧ್ಯಯ ರಾಮ ಮಂದಿರದ ತೀರ್ಪು ನೀಡಲಿರುವ ಹಿನ್ನಲೆಯಲ್ಲಿ ತಾಲೂಕಿನ ಜನತೆ ಶಾಂತಿ ಸೌಹಾರ್ಧಯುತವಾಗಿ ತೀರ್ಪನ್ನು ಸ್ವಿಕರಿಸಬೇಕು ಎಂದು ಶಾಸಕ ನರಸಿಂಹ ನಾಯಕ(ರಾಜುಗೌಡ) ಹೇಳಿದರು.

ನಗರದ ತಮ್ಮ ಗೃಹದಲ್ಲಿನ ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ ನೀಡಲಿರುವ ತೀರ್ಪು ಯಾರಪರವಾಗಿದ್ದರು ಅದನ್ನು ಸ್ವಾಗತಿಸೋಣ. ಕೋಮು ಸೌಹಾರ್ದತೆಯನ್ನು ಮೆರದು ಮಾದರಿಯಾಗೋಣ.ನಮ್ಮದು ಶರಣ ಸಂತರ ನಾಡು,ಇಲ್ಲಿ ಕೊಡೇಕಲ್ಲ ಬಸವಣ್ಣ,ತಿಂಥಣಿಯ ಮೌನೇಶ್ವರ,ಶ್ರೀ ವೇಣುಗೋಪಾಲ ಸ್ವಾ,ಮಿ,ಹಾವಿನಾಳದ ಕಲ್ಲಯ್ಯನಂತ ಶರಣರು ಇಲ್ಲಿ ಜನಸಿ ಎಲ್ಲರಿಗು ಆರಾಧ್ಯರಾಗಿದ್ದಾರೆ.ಇಂತಹ ಕ್ಷೇತ್ರದ ನಾವು ತೀರ್ಪು ಏನೆ ಬಂದರು ಅದನ್ನು ಸೌಹಾರ್ಧ ದಿಂದ ಸ್ವಾಗತಿಸೋಣ.ಯಾರೂ ಅಹಿತಕರ ಘಟನೆಗಳಿಗೆ ಒತ್ತು ನೀಡದಂತೆ ಜನರಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ನಗರದ ರಂಗಂಪೇಟಯಲ್ಲಿ ಮುಂಬರುವ ದಿನಗಳಲ್ಲಿ ರಸ್ತೆ ಅಗಲೀಕರಣ ನಡೆಯುವ ಸಾಧ್ಯತೆ ಇದೆ. ಕೆಲ ಬಡಾವಣೆಗಳ್ಲಲಿನ ಜನ ಮನೆಗಳಿಗೆ ಧಕ್ಕೆ ಬರಬಹುದು,ಅಂತಹ ಕುಟುಂಬಗಳಿಗೆ ತಾತ್ಕಾಲಿಕವಾಗಿ ಶೇಡ್‌ಗಳನ್ನು ನಿರ್ಮಿಸಿಕೊಟ್ಟು ಮುಂಬರುವ ದಿನಗಳಲ್ಲಿ ಅವರಿಗೆ ಶಾಶ್ವತವಾಗಿ ಸರ್ಕಾರದ ನೀವೇಶನವನ್ನು ವದಗಿಸಿ ಮನೆಗಳನ್ನು ಕಟ್ಟಿಕೊಡುವ ಸಲುವಾಗಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಯೋಜನೆಯನ್ನು ರೋಪಿಸಲಾಗುವುದು ಎಂದು ತಿಳಿಸಿದರು.

ನಗರದಲ್ಲಿರುವ ಕುಡಿಯುವ ನೀರನ ಸಮಸ್ಯೆಗೆ ಇನ್ನು ಕೆಲದಿನಗಳಲ್ಲಿ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸಲಾಗಿದೆ ಕಾಮಗಾರಿಯು ಟೆಂಡರ್ ಹಂತದಲ್ಲಿದ್ದು ಇನ್ನು ಕೆಲವೆ ದಿನಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ ಇನ್ನು ಹಲವಾರು ಮನೆಗಳಲ್ಲಿರುವ ನದಿನೀರಿನ ಪೈಪುಗಳಿಗೆ ಕೋಳಗಳಿಲ್ಲ ಇದರಿಂದ ನೀರು ಪೋಲಾಗುತ್ತಿದೆ ಕಾರಣ ಸಾರ್ವಜನಿಕರು ತಮ್ಮ ಮನೆಗಳಲ್ಲಿ ನಳಗಳನ್ನು ಅಳವಡಿಸಿಕೊಳ್ಳಲು ಮನವಿ ಮಾಡಿದ್ದಾರೆ.

ಮುಖ್ಯ ಮಂತ್ರಿಗಳ ವೀಡಿಯೋ ಟೆಪ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇದು ನಮ್ಮ ಸರ್ಕಾರಕ್ಕೆ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ವೀರೋಧ ಪಕ್ಷದವರು ಸತ್ಯಾಸತ್ಯತೆ ತಿಳಿಯದೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಇದು ಸರಿಯಲ್ಲ ಮತ್ತು ನೆರೆ ಸಂತ್ರಂಸ್ಥರಿಗೆ ಸಿಗಬೇಕಾದ ಪರಿಹಾರವು ಡೈರೆಕ್ಟಾಗಿ ಅವರ ಖಾತೆ ಜಮೆಯಾಗುವಂತೆ ನಮ್ಮ ಸರ್ಕಾರ ನಿರ್ಣಯಗಳನ್ನು ಕೈಗೊಂಡಿದೆ ನಮ್ಮ ಸರ್ಕಾರವು ಮಧ್ಯವರ್ತಿಗಳ ಹಾವಳಿ ಮತ್ತು ಬ್ರಷ್ಟಾಚಾರವನ್ನು ತಡೆಯುವ ನಿಟ್ಟಿನಲ್ಲಿ ತೆಗೆದುಕೊಂಡಿರುವ ನಿರ್ಣಯಗಳನ್ನು ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ ಎಂದರು.

ಸುದ್ಧಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ನಗರಸಭಾ ಸದಸ್ಯ ವೇಣು ಮಾಧವ ನಾಯಕ, ಮುಖಂಡ ದೊಡ್ಡದೇಸಾಯಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here