17 ರಂದು ರಾಜ್ಯಮಟ್ಟದ ಬಸವಣ್ಣನವರ ವಚನಗಳ ಕಂಠಪಾಠ ಸ್ಪರ್ಧೆ

0
405

ಬಸವಕಲ್ಯಾಣ: ಧರ್ಮಗುರು ಬಸವಣ್ಣನವರ ವಚನಗಳು ವ್ಯಾಪಕವಾಗಿ ಜನಮನಗಳಿಗೆ ತಲುಪಿಸುವ ನಿಟ್ಟಿನಲ್ಲಿ ಮತ್ತು ಪರಿಚಯಕ್ಕಾಗಿ ವಿಶ್ವಬಸವಧರ್ಮ ಟ್ರಸ್ಟ ಅನುಭವ ಮಂಟಪ, ಬಸವಕಲ್ಯಾಣ ವತಿಯಿಂದ ಲಿಂಗೈಕ್ಯ ಸುಶೀಲಾದೇವಿ ಡಾ.ಬಿ.ವಿ.ಪಟೇಲ ಆರನೇ ಸ್ಮರಣೆ ಅಂಗವಾಗಿ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಬಸವಣ್ಣನವರ ವಚನಗಳ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಗಿದೆ.

17 ರವಿವಾರ ರಂದು ಬೆಳಿಗ್ಗೆ 10 ಗಂಟೆಗೆ ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಈ ಸ್ಪರ್ಧೆ ನಡೆಸಲಾಗುತ್ತದೆ. ಹೆಚ್ಚು ವಚನಗಳು ಕಂಠಪಾಠ ಹೇಳಿ ವಿಜೇತರಾದವರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಪ್ರಥಮ ಬಹುಮಾನ ರೂ.ಹತ್ತು ಸಾವಿರ, ದ್ವಿತೀಯ ಬಹುಮಾನ, ಐದು ಸಾವಿರ  ಮತ್ತು ತೃತೀಯ ಬಹುಮಾನ ಎರಡು ಸಾವಿರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡಲಾಗುವುದು.

Contact Your\'s Advertisement; 9902492681

ಸ್ಪರ್ಧೆಯ ನಿಯಮಗಳು:- ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ದಿನಾಂಕ: ೧೭-೧೧-೨೦೧೯ ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಎಲ್ಲರಿಗೂ ಉಚಿತ ಪ್ರವೇಶ ದೂರದಿಂದ ಆಗಮಿಸುವ ಸ್ಪರ್ಧಾಳುಗಳು ತಮ್ಮ ಹೋಗಿ ಬರುವ ಖರ್ಚು ತಾವೇ ಭರಿಸಬೇಕು. ವಸತಿ ಮತ್ತು ಪ್ರಸಾದ ವ್ಯವಸ್ಥೆ ಉಚಿತವಾಗಿ ಒದಗಿಸಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಬಸವಣ್ಣನವರ ವಚನಗಳು ಮಾತ್ರ ಹೇಳಬೇಕು.  ತಾವು ಹೇಳುವ ವಚನಗಳನ್ನು ದಾಖಲಿಸಿದ ನೋಟ್‌ಬುಕ್ ಸಿದ್ಧಪಡಿಸಿಕೊಂಡು ಬರಬೇಕು. ವಚನಪೂರ್ತಿಯಾಗಿ ಹೇಳಬೇಕು. ವಚನ ನೆನಪಿಸಿಕೊಳ್ಳಲು ಮಧ್ಯದಲ್ಲಿ ಒಂದು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಹಿಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ವಿಜೇತರರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ. ವಯಸ್ಸಿನ ನಿರ್ಬಂಧ ಇರುವುದಿಲ್ಲ. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಭಾಗವಹಿಸುವುದು. ರಾಜ್ಯಮಟ್ಟದ ಸ್ಪರ್ಧೆ ಇದಾಗಿರುವುದರಿಂದ ರಾಜ್ಯದ ಎಲ್ಲಾ ಜಿಲ್ಲೆಯವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ದಿ: ೨೪-೧೧-೨೦೧೯ ರವಿವಾರ ರಂದು ಏರ್ಪಡಿಸಿದ ೪೦ನೆಯ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ ಸಮಾರಂಭದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು.

ಹೆಚ್ಚಿನ ವಿವರಗಳಿಗಾಗಿ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು, ಅನುಭವ ಮಂಟಪ, ಬಸವಕಲ್ಯಾಣ
ಮೊ: 8971948583, 8123913207, 9448586266, 9880768662 anubhavamantapa.kalyana@gmail.com  ಸಂಪರ್ಕಿಸಿ ಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here