“ಮತ್ತೊಮ್ಮೆ ಸಿದ್ದರಾಮಯ್ಯ” ಅಭಿಯಾನಕ್ಕೆ ಕೆ.ಎಸ್. ಶಿವರಾಂ ಚಾಲನೆ

0
57

ಬೆಂಗಳೂರು: ಅಸಹ್ಯ ರಾಜಕಾರಣಿಗಳಿಂದ ಬೇಸತ್ತಿದ್ದ ಶ್ರೀ ಸಾಮಾನ್ಯ, ಈ ದೇಶಕ್ಕೆ, ಈ ನಾಡಿಗೆ ಇನ್ನು  ಭವಿಷ್ಯವಿಲ್ಲವೆಂದು ತೀರ್ಮಾನಿಸಿ, ರಾಜಕಾರಣದಲ್ಲಿ ಆಸಕ್ತಿ ಕಳೆದುಕೊಂಡು , ನನಗೂ ರಾಜಕೀಯಕ್ಕೂ ಸಂಬಂಧವಿಲ್ಲವೆಂದು ರಾಜಕೀಯದಿಂದ ವಿಮುಖವಾಗಬೇಕಾದಾಗಲೇ ಆಶಾ ಕಿರಣದಂತೆ ಕಾಣಿಸಿ ಕೊಂಡವರು ಸಿದ್ದರಾಮಯ್ಯನವರು ಎಂದು ಕ.ರಾ.ಹಿಂ.ವ.ಜಾಗ್ರತ ವೇದಿಕೆಯ ರಾಜ್ಯಧ್ಯಕ್ಷ ಕೆ.ಎಸ್. ಶಿವರಾಂ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲನಲ್ಲಿ  ಮತ್ತೊಮ್ಮೆ ಸಿದ್ದರಾಮಯ್ಯ ಅಭಿಯಾನಕ್ಕೆ ಚಾಲನೆ ನೀಡಿ,ಪ್ರಾಸ್ತಾವಿಕ ಮಾತನಾಡಿ, ಸಿದ್ದು ಪರವಾಗಿ ಪ್ರಚಾರ ಮಾಡುತ್ತಿರುವ ನಮ್ಮಂತವರಿಗೆ ರಾಜಕೀಯದ ನಂಟು ಇಲ್ಲ, ರಾಜಕಾರಣದ ಹತ್ತಿರವೂ ನಾವುಗಳು ಸುಳಿಯುವುದಿಲ್ಲ. ರಾಜಕಾರಣಿಗಳಿಂದ ನಮಗೆ ಯಾವ ಲಾಭವೂ ಆಗಬೇಕಾಗಿಲ್ಲ, ನಮ್ಮ ಕ್ಷೇತ್ರದ ಶಾಸಕರ ಜೊತೆಯಲ್ಲೆ ನಮಗೆ ಸಂಬಂಧವಿಲ್ಲ. ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ನಾವುಗಳು ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Contact Your\'s Advertisement; 9902492681

ಆದರೂ ನಾವುಗಳು ಸಿದ್ದು  ಪರವಾಗಿ ಪ್ರಚಾರ ಮಾಡುತ್ತಿದ್ದೇವೆ. ನಿಜವಾಗಿಯೂ ಜಗತ್ತಿನಲ್ಲಿ ಇದೊಂದು ವಿಸ್ಮಯ. ಸಾಮಾನ್ಯರಲ್ಲಿ ಸಾಮಾನ್ಯರಾದ ನಮ್ಮನ್ನು ಸಿದ್ದು  ಅದು ಹೇಗೆ ತನ್ನತ್ತ ಸೆಳೆದ. ಅದ್ಯಾವ ಶಕ್ತಿ ಸಿದ್ದರಾಮಯ್ಯನ ವರಲ್ಲಿದೆ. ಇದುವರೆಗೂ ಯಾವ ರಾಜಕಾರಣಿಯ ಬಗೆಗೂ ಆಸಕ್ತಿ ಹೊಂದದ ನಾವುಗಳು ಅದ್ಯಾಕೆ ಸಿದ್ದು ಮೋಹಕ್ಕೆ ಸಿಕ್ಕಿಕೊಂಡೆವು. ಸಿದ್ದರಾಮಯ್ಯನಲ್ಲಿ ಯಾವ ಶಕ್ತಿಯೂ ಇಲ್ಲದಿದ್ದರೆ ಶ್ರೀ ಸಾಮಾನ್ಯರನ್ನು ತನ್ನತ್ತ ಸೆಳೆಯಲು ಹೇಗೆ ಸಾಧ್ಯ? ಭಾರತದ ರಾಜಕಾರಣದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಶ್ರೀ ಸಾಮಾನ್ಯನು ಜಾಗೃತನಾದ, ಸಿದ್ದರಾಮಯ್ಯನವರನ್ನು ಉಳಿಸಿಕೊಳ್ಳದಿದ್ದರೆ ಈ ನಾಡಿಗೆ  ಭವಿಷ್ಯವಿಲ್ಲವೆಂದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಭಾರತೀಯರು ಇದುವರೆಗೂ ಸಿನಿಮಾ ನಾಯಕರ ಮೋಹಕ್ಕೆ ಒಳಗಾಗುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಒಬ್ಬ ಸಿನಿಮಾ ನಾಯಕರನ್ನ ಮೀರಿ ಸಿದ್ದರಾಮಯ್ಯ ಜನರನ್ನ ತನ್ನತ್ತ ಸೆಳೆದ. ಕನ್ನಡಿಗರು  ಯಾವುದೇ ರಾಜಕಾರಣಿಯನ್ನ ನಾಯಕನಂತೆ ಒಪ್ಪಿಕೊಂಡಿರಲಿಲ್ಲ.  ಸಿದ್ದರಾಮಯ್ಯ ಕರ್ನಾಟಕವನ್ನು ಮಾತ್ರ ಬದಲಾಯಿಸುತ್ತಿಲ್ಲ ದೇಶದ ಜನತೆ  ಮನಸ್ಥಿತಿಯನ್ನು ಬದಲಾಯಿಸಿ ಬಿಟ್ಟರು ಎಂದು ಅವರು ತಿಳಿಸಿದರು.

ಈಗ ಭಾರತೀಯರ ಕಣ್ಣಲ್ಲಿ ಒಂದು ಕನಸಿದೆ ಅದರ ಭಾರ ಸಿದ್ದರಾಮಯ್ಯನವರ ಮೇಲಿದೆ. ಸಿದ್ದರಾಮಯ್ಯನವರನ್ನು ದೇಶದ ಪ್ರಧಾನಿಯಾಗಿ  ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮತ್ತೊಮ್ಮೆಸಿದ್ದರಾಮಯ್ಯ ಅಭಿಯಾನಕ್ಕೆ ಚಾಲನೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here