ದೇಶದಲ್ಲಿ ದಿನೇ ದಿನೇ ಕಾನೂನು ವಿರೋಧಿ ಚಟುವಟಿಕೆಗಳು ಹೆಚ್ಚು ನಡೆಯುತ್ತಿದ್ದು. ಹೆಣ್ಣುಮಕ್ಕಳು ಮೇಲೆ ದೌರ್ಜನ್ಯ, ಅತ್ಯಾಚಾರ ಮಾಡಿ ಕೊಲೆ ಮಾಡುವಂತಹ ಹೀನ ಕೃತ್ಯಗಳು ಹೆಚ್ಚಾಗುತ್ತಿವೆ. ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರ ವಿಫಲವಾಗಿದೆ. ಆದರೆ ಜನರಿಗೆ ಕಾನೂನಿನ ಬಗ್ಗೆ ಸರಕಾರದ ಬಗ್ಗೆ ಭಯ ಮತ್ತು ಗೌರವ ಇಲ್ಲದೆ ಹೋಗಿದೆ. ನಮ್ಮ ದೇಶದಲ್ಲಿ ಬಲವಾದ ಕಾನೂನು ಶಿಕ್ಷೆ ಇಲ್ಲದೆ ಇರುವುದರಿಂದ ಮೇಲಿಂದ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆಯಂತಹ ಪ್ರಕರಣೆಗಳು ನಡೆಯುತ್ತಿವೆ.
ಮುಗ್ಧ ಬಡ ಹೆಣ್ಣು ಮಕ್ಕಳು ಮೇಲೆ ದೇಶದಲ್ಲಿ ಅತ್ಯಾಚಾರ ನಡೆಯುತ್ತಿದ್ದರೂ ಕಾಮುಕರಿಗೆ ಯಾವದೇ ಬಿಸಿ ಮುಟ್ಟುವಂತಹ ಕ್ರಮ ತೆಗೆದುಕೊಂಡಿಲ್ಲ. ಈಗಲಾದರೂ ಇಂತಹ ಕಾಮುಕರಿಗೆ ಘೋರವಾದ ಕಠಿಣ ಶಿಕ್ಷೆಗೆ ಗುರಿಪಡಿಸಿ ಮುಂದೆ ಇಂತಹ ಕೃತ್ಯಗಳಿಗೆ ಕೈ ಹಾಕುವ ಕಾಮುಕರಿಗೆ ನಡುಕು ಹುಟ್ಟಿಸುವಂತ ಕಾನೂನು ಜಾರಿಗೆ ತರಬೇಕು. ಇಲ್ಲದಿದ್ದರೆ ಕಾನೂನು ವ್ಯವಸ್ಥೆ ಇದ್ದು ಇಲ್ಲದಂತೆ ಯಾಗುತ್ತದೆ.
-
ಇಲಿಯಾಸ್ ಪಟೇಲ್, ಬಳಗಾನೂರ, ಕೆಂಭಾವಿ