ಮಕ್ಕಳ ವಿಜ್ಞಾನ ಮೇಳದಲ್ಲಿ ಅಗ್ನಿಶಾಮಕ ದಳದಿಂದ ಅಣುಕು ಪ್ರದರ್ಶನ

0
100

ಸುರಪುರ: ನಗರದ ತಿಮ್ಮಾಪುರದಲ್ಲಿಯ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಮೇಳವನ್ನು ನಡೆಸಲಾಯಿತು.ವಿಜ್ಞಾನ ಮೇಳದಲ್ಲಿ ಅನೇಕ ಶಾಲೆಗಳ ಮಕ್ಕಳು ಭಾಗವಹಿಸಿ ವಿಜ್ಞಾನದ ಅವಿಷ್ಕಾರಗಳ ಬಗ್ಗೆ ತಿಳಿದುಕೊಂಡರು.

ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಗ್ನಿಶಾಮಕ ದಳದ ವತಿಯಿಂದ ಬೆಂಕಿ ಅವಘಡ ಸಂಭವಿಸಿದಾಘ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಅಣಕು ಪ್ರದರ್ಶನದ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಸಣ್ಣ ಮಲ್ಲಯ್ಯ ಮಾತನಾಡಿ,ಯಾವುದೆ ಬೆಂಕಿ ಅವಘಡ ಸಂಬವಿಸಿದ ಸಂದರ್ಭದಲ್ಲಿ ಕೆಲವೊಂದು ಇಲ್ಲಿ ತೋರಿಸುವ ತುರ್ತು ಕ್ರಮಗಳನ್ನು ಕೈಗೊಂಡಲ್ಲಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಲು ಸಾಧ್ಯವಿದೆ.ಅಲ್ಲದೆ ಬೆಂಕಿ ಅವಘಡ ಕಾಣಿಸಿದ ಕೂಡಲೆ ೧೧೨ ಉಚಿತ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದಲ್ಲಿ ತಕ್ಷಣವೇ ಇಲಾಖೆಯಿಂದ ನೆರವಿಗೆ ಬರಲಾಗುವುದು.ಪ್ರತಿಯೊಬ್ಬರು ಈ ಸಹಾಯವಾಣಿಯನ್ನು ನೆನಪಲ್ಲಿಟ್ಟುಕೊಳ್ಳುವುದು ಅವಶ್ಯ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಶಂಕರ್,ವೆಂಕಟೇಶ ದೊರೆ ಪೀರಾಪುರ ಹಾಗು ಬಿಆರ್‌ಪಿ ಖಾದರ ಪಟೇಲ್,ಸಿಆರ್‌ಪಿ ಅಬ್ದುಲ್ ಪಟೇಲ್,ಪ್ರಧಾನಗುರು ಕಮಲಾಬಾಯಿ,ಶಿಕ್ಷಕರಾದ ರಾಮಪ್ಪ ಗುಂಜಾಳ,ಪಿಡ್ಡಮ್ಮ ಆರತಿ,ಜಯರಾಮ್ ಚವ್ಹಾಣ್,ಮೌನೇಶ,ಶಿವಕುಮಾರ ಕಮತಗಿ,ಚಂದ್ರಕಲಾ,ರೇಣುಕಾ ವಾಲಿ,ಅಜೀಂ ಪ್ರೇಮಜಿ ಪೌಂಡೇಶನ್ನಿನ ಶಿವಕುಮಾರ್,ಅನ್ವರ್ ಜಮಾದಾರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here