ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರನ್ನು ಸೇವೆಯಿಂದ ವಜಾಕ್ಕೆ ಆಗ್ರಹ

0
212

ಕಲಬುರಗಿ: ಪದವಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸುವಲ್ಲಿ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಅಧ್ಯಾಪಕರ ವಿರುಧ್ದ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ  ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ ಅಧ್ಯಾಪಕರಿಗೆ ನ್ಯಾಯ ಕೊಡಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು  ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಶರಣಪ್ಪ ಸೈದಾಪೂರ ಮನವಿ ಮಾಡಿದ್ದಾರೆ.

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ  ಒಳ ಒಪ್ಪಂದ ಮಾಡಿಕೊಂಡು ಪರೀಕ್ಷಾ ಮಾರ್ಗದರ್ಶಿ ಕೈಪಿಡಿಯನ್ನು  ಉಲ್ಲಂಘಿಸುತ್ತಿರುವುದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ತೀವ್ರವಾಗಿ ಖಂಡಿಸುತ್ತದೆ. ಅಧ್ಯಾಪಕರ ವಿರೋಧಿ ನೀತಿ ಕೈಬಿಡಬೇಕೆಂದು ಮತ್ತು ಅಧ್ಯಾಪಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿದ್ದಾರೆ.

Contact Your\'s Advertisement; 9902492681

ಸರಕಾರಿ ಕಾಲೇಜು ಅಧ್ಯಾಪಕರ ಹಕ್ಕುಗಳನ್ನು ದಮನ ಮಾಡುತ್ತಿರುವ ಮೌಲ್ಯಮಾಪನ ಕುಲಸಚಿವರ ವರ್ತನೆ  ಸಂವಿಧಾನ ಬಾಹೀರವಾಗಿದೆ. ಅಧ್ಯಾಪಕರು ತಮ್ಮ ನ್ಯಾಯಯುತ ಹಕ್ಕುಗಳನ್ನು ಕೇಳುವ ಸಂದರ್ಭದಲ್ಲಿ ಅವರ ಪೋಟೊ ತೆಗೆಯಿರಿ, ವರ್ತನೆ ವಿಡಿಯೋ ಮಾಡಿರಿ, ಪೊಲೀಸರಿಗೆ ದೂರು ಕೊಡುತ್ತೇನೆ, ಜೊತೆಗೆ ಉನ್ನತ ಶಿಕ್ಷಣ ಆಯುಕ್ತರಿಗೆ  ಪತ್ರ ಬರೆಯುತ್ತೇನೆಂದು ಬೇದರಿಕೆ ಹಾಕಿದ, ಅಧಿಕಾರದ ಮಧದಲ್ಲಿ ಮನಸ್ಸಿಗೆ ಬಂದಂತೆ  ಅವಾಚ್ಯ ಶಬ್ದಗಳಿಂದ ಬೈಯುವುದರ ಜೊತೆಗೆ ಅನಾಗರಿಕವಾಗಿ ವರ್ತಿಸಿರುವುದು ಸಮಂಜಸವಲ್ಲ ಎಂದು ಆರೋಪಿಸಿದ್ದಾರೆ.

ಅಧ್ಯಾಪಕರು ತಪ್ಪು ಮಾಡಿದಾಗ  ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬಹುದೆ ವಿನಾಃ  ಈ ರೀತಿಯ ಧೋರಣೆ ಖಂಡನಿಯ ಸಂಘದ ಜಂಟಿ ಕಾರ್ಯದರ್ಶಿ ಡಾ. ಚಿನ್ನಾ ಆಶಪ್ಪ, ಡಾ. ಮಲ್ಲಿಕಾರ್ಜುನ ಶೆಟ್ಟಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here