ಬಿಸಿ ಬಿಸಿ ಸುದ್ದಿ

ರಾಷ್ಟ್ರಕ್ಕಾಗಿ ಪ್ರಾಣ ಕೊಟ್ಟ ಸ್ವಾತಂತ್ರ್ಯ ವೀರರನ್ನು ನಾಯಕರಾಗಿ ಮಾಡಿಕೊಳ್ಳಿ: ವೀರೇಶ ಸಾಲಿಮಠ

ಕಲಬುರಗಿ: ಇಂದಿನ ಯುವಕರು ಸಿನಿಮಾ ನಾಯಕರು ಮತ್ತು ಕ್ರಿಕೆಟ್ ಆಟಗಾರರು ತಮ್ಮ ಜೀವನಕ್ಕೆ ಆದರ್ಶವಾಗಿ ಇಟ್ಟುಕೊಳ್ಳದೇ ರಾಷ್ಟ್ರಕ್ಕಾಗಿ ಪ್ರಾಣ ಕೊಟ್ಟ ಸ್ವಾತಂತ್ರ್ಯ ವೀರರನ್ನು ತಮ್ಮ ನಾಯಕರಾಗಿ ಮಾಡಿಕೊಳ್ಳುವುದು ಅವಶ್ಯಕ ಎಂದು ವೀರೇಶ ಸಾಲಿಮಠ ಹೇಳಿದರು.

ನಿನ್ನೆ ನಗರದ ಭವಾನಿ ನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೮೦ನೇ ಮಾಲಿಕೆಯಲ್ಲಿ ಮುಂದುವರಿದು ಮಾತನಾಡುತ್ತಾ ಕೇವಲ ೧೨ನೇ ವಯಸ್ಸಿನಲ್ಲಿ ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಧುಮುಕಿದ ವೀರ ಭಗತಸಿಂಗ ಇನ್ನೇನು ಬ್ರೀಟಿಷರು ನೇಣುಗಂಬಕ್ಕೆ ಏರಿಸುತ್ತಾರೆಂಬ ವಿಷಯ ಗೊತ್ತಾದರೂ ಕೂಡ ಭಗತಸಿಂಗ ಚಿಂತಿಸದೆ, ನಾನು ಪ್ರಾಣ ಕೊಡುತ್ತಿರುವುದು ರಾಷ್ಟ್ರಕ್ಕಾಗಿ ಎಂದು ಹೆಮ್ಮೆಯಿಂದ ನಗು ನಗುತ್ತಾ ನೇಣುಗಂಬಕ್ಕೆ ಕೊರಳೊಡ್ಡಿದ ಭಗತಸಿಂಗರೆ ಇಂದಿನ ವಿದ್ಯಾರ್ಥಿ ಯುವಕರಿಗೆ ಆದರ್ಶವಾಗಬೇಕೆಂದು ಹೇಳಿದರು. ರಾಷ್ಟ್ರಪ್ರೇಮ ಬೆಳೆಸಿಕೊಂಡು ಇಂದಿನ ಯುವಕರು ಮುಂದಿರುವ ಸವಾಲುಗಳಿಗೆ ಪರಿಹಾರ ಹುಡುಕಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಕಲಬುರಗಿ ಉತ್ತರ ಮಂಡಲದ ಭಾರತೀಯ ಜನತಾ ಪಕ್ಷದ ನೂತನ ಅಧ್ಯಕ್ಷರಾದ ಅಶೋಕ ಮಾನಕರ್ ಅವರು ಮಾತನಾಡುತ್ತಾ ಕಲ್ಯಾಣ ನಾಡಿನಲ್ಲಿ ಸಂತರು, ಶರಣರು ನಡೆದಾಡಿದ ಪವಿತ್ರ ಸ್ಥಳ ಇಂತಹ ನಾಡಿನಲ್ಲಿ ಜನಿಸಿರುವುದು ನಮ್ಮ ಸೌಭಾಗ್ಯ, ಇಂತಹ ಸಂದರ್ಭದಲ್ಲಿ ಶಿವಾನುಭವಗೋಷ್ಠಿ ಮುಖಾಂತರ ಅಧ್ಯಾತ್ಮಿಕದ ಬೀಜ ಬಿತ್ತಿ ಸುಂದರ ಸಮಾಜ ನಿರ್ಮಿಸುತ್ತಿರುವ ಬಬಲಾದ ಮಠದ ಕಾರ್ಯ ಶ್ಲಾಘನೀಯ ಎಂದು ನುಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಮ.ನಿ.ಪ್ರ.ಸ್ವ. ಗುರುಪಾದಲಿಂಗ ಶಿವಯೋಗಿಗಳು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಶಿವಕುಮಾರ ಬಿ. ಕಲಬುರಗಿರವರ ೨೦೨೦ನೇ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು. ಸಂಗಮೇಶ ಹೂಗಾರ ಪ್ರಾರ್ಥಿಸಿದರು. ಶಿಕ್ಷಕರಾದ ದೇವಯ್ಯ ಗುತ್ತೇದಾರ ನಿರೂಸಿದರು, ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು, ಧನರಾಜ ಸಣಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮಠದ ಕಾರ್ಯದರ್ಶಿಗಳಾದ ಬಸಯ್ಯ ಶಾಸ್ತ್ರೀ, ಶೇಖರ ದೇಗಾಂವ, ಕವಿತಾ ದೇಗಾಂವ, ವೈಜನಾಥ ನಂದ್ಯಾಳ, ವೀರಯ್ಯ ಸ್ವಾಮಿ, ಬಸಯ್ಯ ಸ್ವಾಮಿ, ಅಮರೇಶ್ವರಿ ಸಂಗಮೇಶ ಹೂಗಾರ, ಪ್ರಕಾಶ ರೋಳೆ, ಜಗನ್ನಾಥ ಸಜ್ಜನಶೆಟ್ಟಿ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

emedialine

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

11 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

13 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

20 hours ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

20 hours ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

20 hours ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago