ಶಹಾಪುರ: ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಲೋಕದ ನಕ್ಷತ್ರ, ಹಿರಿಯ ಶಿಶು ಸಾಹಿತಿ, ಲೇಖಕ, ಚಿಂತಕ ಚಂದ್ರಕಾಂತ ಕರದಳ್ಳಿ ಅವರ ನೆನಪು ನಮ್ಮೆಲ್ಲರಿಗೂ ಮತ್ತೆ ಮತ್ತೆ ಕಾಡುತ್ತಲೆ ಇರುತ್ತದೆ ಎಂದು ಹಿರಿಯ ಸಾಹಿತಿ ಶಿವಣ್ಣ ಇಜೇರಿ ಹೇಳಿದರು.
ಶಹಾಪುರ ನಗರದ ದೇಶ್ಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಚಂದ್ರಕಾಂತ ಕರದಲ್ಲಿ ಯವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರೊಂದಿಗೆ ಕಳೆದಿರುವ ಕೆಲವು ನೆನಪುಗಳನ್ನು ನಮ್ಮೆಲ್ಲರೊಂದಿಗೆ ಹಂಚಿಕೊಂಡರು.
ಕಥೆಗಾರ ಸಿದ್ಧರಾಮ ಹೊನಕಲ್ ಮಾತನಾಡಿ ಚಂದ್ರಕಾಂತ ಕರದಳ್ಳಿ ಅವರಿಗೂ ನಮಗೂ ಬಹಳ ಆತ್ಮೀಯತೆ ಅಲ್ಲದೆ ಬಹುದಿನಗಳ ಗೆಳೆತನವಾಗಿತ್ತು ಅವರ ಮಕ್ಕಳ ಸಾಹಿತ್ಯದಲಿ ಸಾಕಷ್ಟು ಕೆಲಸ ಮಾಡಿ ಎತ್ತರಕ್ಕೆ ಬೆಳೆದವರು ಜೊತೆಗೆ ಅವರ ವೈಚಾರಿಕತೆಯ ನಿಲುವುಗಳು ಸ್ಪಷ್ಟವಾಗಿದ್ದವು ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೆಗುಂದಿ ಮಾತನಾಡಿ, ಚಂದ್ರಕಾಂತ ಕರದಳ್ಳಿ ಅವರ ಅಕಾಲಿಕ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು ಶಹಾಪುರ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸುವುದರಲ್ಲಿ ಚಂದ್ರಕಾಂತ ಕರದಳ್ಳಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಅವರನ್ನು ಬಣ್ಣಿಸಿದರು.
ಸಾಹಿತಿ ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ ಮಾತನಾಡಿ ಚಂದ್ರಕಾಂತ ಕರದಳ್ಳಿ ಅವರ ಜತೆಗಿನ ಒಡನಾಟವನ್ನು ಕುರಿತು ಹಾಗೂ ಅವರ ಸಮಗ್ರ ಮಕ್ಕಳ ಸಾಹಿತ್ಯದ ಕುರಿತು ವಿಶ್ಲೇಷಣೆ ನೀಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ ಪಡೆದು ನಮ್ಮ ಜಿಲ್ಲೆಯ ಕೀರ್ತಿ ಇಡೀ ಭಾರತಕದ ತುಂಬೆಲ್ಲ ಬೆಳಗಿಸಿದವರು.
ಕಾರ್ಯಕ್ರಮದ ಪ್ರಾರಂಭದಲ್ಲಿ ೧ ನಿಮಿಷಗಳ ಕಾಲ ಮೌನಾಚರಣೆ ಮಾಡಿ ಹಾಗೂ ಕರದಳಿ ಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಿ.ಜಿ.ಬಳೂರಗಿ, ಪ್ರಮುಖರಾದ ಬಸವರಾಜ್ ಹಿರೇಮಠ್, ಶಿವರಾಜ್ ದೇಶ್ಮುಖ್,ಕವಯಿತ್ರಿ ಕವಿತಾ ಹಳ್ಳಿ, ಶಿವಶರಣಪ್ಪ ಕಾಮಾ, ಬಸವರಾಜಪ್ಪ ವಿಭೂತಿಹಳ್ಳಿ, ಮಾನಪ್ಪ ಹೂಗಾರ, ಗುಂಡಪ್ಪ ತುಂಬಿಗಿ, ಅಯ್ಯಣ್ಣ ವಟಾರ, ದೇವಿಂದ್ರಪ್ಪ ಕನ್ಯಾಕೋಳೂರ, ಶರಣಪ್ಪ ಮುಂಡಾಸ್, ರಾಮಗೊಂಡಪ್ಪ ಹಳಗೊ೦ಡ, ಗುರುಲಿಂಗಪ್ಪ ಸರಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಬಸವರಾಜ ಸಿನ್ನೂರ, ಹಾಗೂ ಇತರರು ಉಪಸ್ಥಿತರಿದ್ದರು.