’ಭವಿಷ್ಯ ಎಂಬುದು ನಾವು ರೂಪಿಸಿಕೊಳ್ಳುವ ಮಾರ್ಗ’

0
53

ಸುರಪುರ: ಭವಿಷ್ಯ ತಮ್ಮ ಹಣೆ ಬರಹ ಎಂಬುದು ಬಹುತೇಕರ ಭಾವನೆ. ಸರಿಯಾದ ಯೋಜನೆಯನ್ನು ರೂಪಿಸಿ ಶ್ರದ್ಧೆಯಿಂದ ಕೆಲಸ ಮಾಡಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬಹುದು’ ಎಂದು ನವ್ಯದಿಶಾ ಟ್ರಸ್ಟ್‌ನ ತರುಬೇತುದಾರ ಬೆಳಗಾವಿಯ ಬಸವರಾಜ ಅರಭಾವಿ ಹೇಳಿದರು.

ತಾಲ್ಲೂಕಿನ ಬೈಚಬಾಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು. ’ಎಸ್ಸೆಸ್ಸೆಲ್ಸಿ ನಂತರ ನಿಮಗೆ ಇಷ್ಟವಾದ ವಿಷಯಗಳನ್ನು ತೆಗೆದುಕೊಂಡು ಪಿಯುಸಿ ಮಾಡಬಹುದು. ಇಲ್ಲವೇ ಡಿಪ್ಲೋಮಾ ಮಾಡಬಹುದು. ಐಟಿಐ, ಡಿಎಂಎಲ್‌ಟಿ ಇತರ ವೃತ್ತಿಪರ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು’ ಎಂದು ಸಲಹೆ ನೀಡಿದರು.

Contact Your\'s Advertisement; 9902492681

೮ನೇ ತರಗತಿ ಮಕ್ಕಳಿಗೆ ನೀರು, ನೈರ್ಮಲ್ಯ, ನೀರು ಸಂಗ್ರಹ, ಶೌಚಾಲಯಗಳ ಬಳಕೆ, ಕೈತೊಳೆಯುವ ವಿಧಾನ ಇತರ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು. ೯ನೇ ತರಗತಿ ಮಕ್ಕಳಿಗೆ ಹಣಕಾಸಿನ ನಿರ್ವಹಣೆ, ಅನಾವಶ್ಯಕ ಖರ್ಚಿಗೆ ಕಡಿವಾಣ, ಬ್ಯಾಂಕ್ ಖಾತೆ ತೆಗೆಯುವ ಬಗ್ಗೆ, ಹಣದ ಉಳಿತಾಯದ ಮಹತ್ವ ಇತರ ವಿಷಯಗಳ ಬಗ್ಗೆ ತಿಳಿಸಿಕೊಟ್ಟರು.

ಮಕ್ಕಳಿಗೆ ಈ ಕುರಿತು ಕೈಪಿಡಿಗಳನ್ನು ಉಚಿತವಾಗಿ ವಿತರಿಸಿ, ’ನವ್ಯದಿಶಾ ಸಂಸ್ಥೆ ರಾಜ್ಯದ ೧೪ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿದೆ’ ಎಂದರು.

ಮುಖ್ಯ ಶಿಕ್ಷಕ ರಾಮಪ್ಪ ಯರಿಕ್ಯಾಳ, ಶಿಕ್ಷಕರಾದ ಎಚ್. ರಾಠೋಡ, ಶಾಹುಸೇನ್, ವಿದ್ಯಾಧರ್ ಪಾಟೀಲ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here