ಅಲ್ಲಮನ ಕಟುವಾದ ಪ್ರಶ್ನೆಗಳಿಗೆ ಅಷ್ಟೇ ಗಟ್ಟಿಯಾಗಿ ದಿಟ್ಟತನದಿಂದ ಉತ್ತರಿಸಿದ ಮಹಾದೇವಿಯ ಅಧ್ಯಾತ್ಮದ ಔನ್ನತ್ಯ ಕಂಡು ಅಲ್ಲಮನಿಗೂ ಅಕ್ಕನ ಹಸಿವು ಹೌದೆನಿಸಿ ನಮೋ! ನಮೋ!! ಎಂದು ಕೈ ಮುಗಿದರಲ್ಲದೆ ತ್ರಿಕೂಟ ಗಿರಿಯಾಚೆ ಬಯಲಿದೆ. ಅಲ್ಲಿಗೆ ನಡೆ ತಾಯಿ ಎಂದು ಮಾರ್ಗದರ್ಶನ ಸಹ ಮಾಡುತ್ತಾರೆ. ಎಲ್ಲ ಶರಣರು ಸೇರಿ ಅಕ್ಕನನ್ನು ಬೀಳ್ಕೊಡುತ್ತಾರೆ.
ಶರಣರ ದರ್ಶನದಿಂದ ಜೀವನ ಪಾವನ ಮಾಡಿಕೊಂಡ ಅಕ್ಕನಿಗೆ ಮತ್ತೆ ಹಳೆಯ ನೆನಪುಗಳು ಬಂದವು. ಕಲ್ಯಾಣಕ್ಕೆ ಬರುವ ಮುನ್ನ ಕಿನ್ನರಿ ಬೊಮ್ಮಯ್ಯ, ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳು ಬಿಡಲಿಲ್ಲ. ಅವರ ಪ್ರಶ್ನೆಗಳಿಗೆ ಯೋಧನಂತೆ, ಬಟ್ಟದಂತೆ, ಭಕ್ತನಂತೆ ಉತ್ತರಿಸಿದ್ದಳು. ಶರಣರ ಸಂಗದಲ್ಲಿದ್ದ ಆಕೆಗೆ ಅಲ್ಲಿಂದ ತೆರಳಲು ಮನಸ್ಸು ಒಪ್ಪಲೇ ಇಲ್ಲ. ಆದರೂ ಶರಣರನ್ನು ಅಗಲುವುದಕ್ಕಿಂತ ಸಾವೆ ಪರಲೇಸು ಎನ್ನುವಂತಾಯಿತು ಆಕೆಗೆ. ಆದರೂ ತನ್ನ ಜೀವನದ ಮುಖ್ಯ ಉದ್ದೇಶಕ್ಕಾಗಿ ಅಲ್ಲಿಂದ ಕದಳಿಯೆಡೆಗೆ ತೆರಳಿದಳು.
“ಕದಳಿಯೆಂಬುದು ತನು, ಕದಳಿಯೆಮಬುದು ಮನ, ಕದಳಿಯೆಂಬುದು ವಿಯಂಗಳು. ಕದಳಿಯೆಂಬುದು ಭವಘೋರಾರಣ್ಯ. ಈ ಕದಳಿಯೆಂಬುದು ಗೆದ್ದು ತವೆ ಬದುಕಿ ಬಂದು, ಕದಳಿಯ ಬವನದಲ್ಲಿ ಭವಹರನ ಕಂಡೆನು. ಭವ ಗೆದ್ದು ಬಂದ ಮಗಳೆ ಎಂದು ಕರುಣದಿ ತೆಗೆದು ಬಿಗಿಯಪ್ಪಿದಡೆ, ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು” ಎನ್ನುವ ಅಕ್ಕನ ಈ ವಚನ ಅಕ್ಕನ ಕದಳಿವನದ ವಾಸ ಮತ್ತು ಅನುಭವವನ್ನು ವಿವರಿಸುತ್ತದೆ.
ಹೀಗೆ ಒಂದು ದಿನ, ಲಿಂಗಧ್ಯಾನದಲ್ಲಿದ್ದು, ಮರದುಯ್ಯಾಲೆಯಲ್ಲಿ ಕುಳಿತು ಹಾಡು ಹಾಡುತ್ತಿರುವಾಗ ಧಡೂತಿ ವ್ಯಕ್ತಿ ಹಾಗೂ ಆತನ ಜತೆ ಹೆಣ್ಣುಮಗಳೊಬ್ಬಳು ತನ್ನ ಕಡೆಯೇ ಬರುತ್ತಿರುವುದನ್ನು ಗಮನಿಸಿದಳು. ಇದೆಲ್ಲವನ್ನೂ ದಾಟಿ ಬಂದರೆ ಕದಳಿ ಹೊಕ್ಕರೆ ಇಲ್ಲಿಯೂ ಮತ್ತದೆ ಕಾಟ ಎನ್ನುತ್ತಿರುವಾಗಲೇ ಆ ವ್ಯಕ್ತಿಗಳು ಅಕ್ಕನ ಕಾಲಿಗೆರಗಿ ತಾನು ಕೌಶಿಕ, ಈಕೆ ಲಿಂಗರತಿ ಎಂದು ಹೇಳಿ ಪರಿಚಯ ಮಾಡಿಕೊಳ್ಳುತ್ತಾರೆ.
ಗುರು ಲಿಂಗದೇವರಿಂದ ಲಿಂಗದೀಕ್ಷೆ ಪಡೆದು ತಮ್ಮ ಕ್ಷನಮಾಪಣೆಗೆ ಬಂದಿದ್ದೇನೆ. ನನ್ನನ್ನು ಈ ಭವ ಬಂಧನದಿಂದ ಮುಕ್ತ ಮಾಡು ಎಂದು ಅಂಗಲಾಚಿದಾಗ ಅಕ್ಕ ಅವನನ್ನು ಕ್ಷಮಿಸುತ್ತಾಳೆ. ತಾನು ಮತ್ತೊಂದು ದೂರದ ಬೆಟ್ಟದ ತುದಿಯಲ್ಲಿ ಕುಳಿತು ಕೈಯಲ್ಲಿ ಲಿಂಗವಿಡಿದು ಲಿಂಗಾನುಭಾವಿಯಾಗಿ ಕಾಯ ಜೀವದ ಹೊಲಿಗೆ ಬಿಚ್ಚಿ ಇಚ್ಛಾಮರಣಿಯಾಗಿ ಬಯಲಲ್ಲಿ ಬಯಲಾಗಿ ಲೋಕಕ್ಕೆ ಬೆಳಗಾಗುತ್ತಾಳೆ.
ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…