ಅಸಾಮಾನ್ಯ ವ್ಯಕ್ತಿತ್ವದ ಮಹಾಪುರುಷ ಹರ್ಡೇಕರ್ ಮಂಜಪ್ಪ

0
182

ಕಲಬುರಗಿ: ಹರ್ಡೇಕರ್ ಮಂಜಪ್ಪನವರುದೊಡ್ಡ ಸಾಹಿತಿ. ಅವರು ಸಾಹಿತ್ಯ ರಚಿಸಿದ್ದು ಸ್ವಹಿತಾಸಕ್ತಿಗಾಗಿಅಲ. ಸಮಾಜ ಮುಖಿಯಾಗಿ ಸಾಹಿತ್ಯಯವನ್ನು ರಚಿಸಿದರು. ಆ ಕಾಲದಲ್ಲಿ ಸಂಶೋಧನೆ ಮಾಡಿದರು. ಬಸವ ಜಯಂತಿಯನ್ನು ಆಚರಿಸುವ ಕಾರ್ಯಕ್ಕೆ ಕಾರಣೀಭೂತರಾದರು ಎಂದು ಬೆಂಗಳೂರಿನ ನಿವೃತ್ತ ನಿರ್ದೇಶಕರು, ಬರ ಪರಿಹಾರ ಉಸ್ತುವಾರಿ ಕೋಶದ ಡಾ. ಎಚ್. ಚಂದ್ರಶೇಖರ ಹೇಳಿದರು.

ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಲಿಂ. ಅಣ್ಣಾರಾವ ಶರಣಪ್ಪ ಪಾಟೀಲ ಸರಡಗಿ ಸ್ಮರಣಾರ್ಥ ಭಾನುವಾರ ನಡೆದ ಅರಿವಿನ ಮನೆ 620 ನೆಯ ದತ್ತಿಕಾರ್ಯಕ್ರಮದಲ್ಲಿ’ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ’ಎಂಬ ವಿಷಯದ ಮೇಲೆ ಅನುಭಾವ ನೀಡಿದ ಅವರು, ಹರ್ಡೇಕರ್ ಮಂಜಪ್ಪ ನವರು ಅಪ್ಪಟ ಶಿವಭಕ್ತರಾಗಿದ್ದರು. ಸ್ವಾತಂತ್ರ್ಯಪೂರ್ವ ೧೯೨೨-೨೩ ವಿಜಯಪುರದಲ್ಲಿ ಕರ್ನಾಟಕ ಕಾಂಗ್ರೆಸ್ ಸಭೆ ನಡೆಯುತ್ತದೆ. ಅದರ ಅಧ್ಯಕ್ಷತೆಯನ್ನುರಾಜಾಜಿಯವರು ವಹಿಸಿದ್ದರು. ಆ ಸಭೆಯಲ್ಲಿ ಭಾಗವಹಿಸಿದ ಹರ್ಡೇಕರ್ ಮಂಜಪ್ಪನವರುಕಾಂಗ್ರೆಸ್ ಪಕ್ಷಸೇರದೇ ಸಂಪೂರ್ಣವಾಗಿಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದರು.

Contact Your\'s Advertisement; 9902492681

ಗಾಂಧೀಜಿಯವರ ತತ್ವ್ತಾದರ್ಶಗಳಿಗೆ ಮಾರುಹೋಗಿಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಗಾಂಧಿಜಿಯವರ ತತ್ವ್ತಪ್ರಚಾರ ಕೈಕೊಂಡರು. ಬ್ರಹ್ಮಚರ್ಯ ಆಸ್ತೇಯ, ಅಪರಿಗ್ರಹ, ಸ್ವದೇಶಿ ನಿರ್ಭಯ ಇತ್ಯಾದಿ ಸತ್ಯಾಗ್ರಹ ವಿಚಾರಗಳನ್ನು ಕುರಿತು ಮಾತನಾಡಿ ಜನಜಾಗ್ರತೆ ಮೂಡಿಸುವಲ್ಲಿ ಯಶ್ವಸ್ವಿಯಾದರು. ಆಗ ಅವರೊಡನಿದ್ದ ಶ್ರೀ ಗಂಗಾಧರ ರಾವ್‌ದೇಶಪಾಂಡೆಯವರು ಇವರ ಕಾರ್ಯಕ್ಷಮತೆಯನ್ನು ಮನಗಂಡು ಇವರಿಗೆ ಕರ್ನಾಟಕದ ಗಾಂಧಿ ಎಂಬ ಅಭಿದಾನ ನೀಡುತ್ತಾರೆ. ರಾಷ್ಟ್ರಕವಿ ಕುವೆಂಪುರವರು’ಓ! ನನ್ನಚೇತನಾ ಆಗು ನೀ ಅನಿಕೇತನ’ಎಂದು ಹಾಡಿದರು ಅದು ಅಕ್ಷರಶಃ  ಹರ್ಡೇಕರ್ ಮಂಜಪ್ಪನವರಿಗೆ ಹೊಂದುತ್ತದೆ.

ಅವರು ಹುಟ್ಟಿದ್ದು ಬನವಾಸಿಯಲ್ಲಿ. ದಾವಣಗೆರೆ- ಹರಿಹರದಲ್ಲಿ ತಮ್ಮ ಸಮಾಜ ಸೇವೆಯನ್ನು ಮುಂದುವರೆಸುತ್ತಾರೆ. ನಂತರ ಆಮಟ್ಟಿಗೆ ಆಗಮಿಸಿ ಆಶ್ರಮ ನಿರ್ಮಿಸಿ ಅಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಯುಗದ ಕವಿ ಕುವೆಂಪುನವರು ಹರ್ಡೇಕರ್ ಮಂಜಪ್ಪನವರನ್ನುಅಜ್ಞಾತ ಮಹಾಪುರುಷನೆಂದು ಬಣ್ಣಿಸಿರುವುದು ಅವರ ವ್ಯಕ್ತಿತ್ವದ ಔನ್ನತ್ಯವನ್ನು ತೋರಿಸುತ್ತದೆ. ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಶರಣತತ್ವ್ತ, ಗಾಂಧಿ ತತ್ವ್ತಗಳನ್ನು ಕುರಿತಾಗಿ ಒಂದು ತಿಂಗಳನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭಾಷಣಗಳನ್ನು ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಇದರಿಂದಾಗಿ ಇವರನ್ನು ರಾಷ್ಟ್ರ ಧರ್ಮದ್ರಷ್ಟಾರರೆಂದು ಕರೆಯುತ್ತಾರೆ. ಹರ್ಡೇಕರ್ ಮಂಜಪ್ಪನವರು ಬಹುದೊಡ್ಡ ಸಂಶೋಧನಕಾರರಾಗಿದ್ದರು. ಬಸವೇಶ್ವರಚರಿತ್ರೆ, ಶರಣಬಸವೇಶ್ವರ ಚರಿತ್ರೆಯನ್ನು ಬರೆದುತಮ್ಮ ಪ್ರತಿಭೆಯನ್ನು ಮೆರೆಯುತ್ತಾರೆ.

ಅಧ್ಯಕ್ಷತೆ ವಹಿಸಿ ಮಾತನಾಡಿದಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿಯವರು ಶರಣರ ಸಂದೇಶಗಳು ಸಾರ್ವಕಾಲಿಕ ಸತ್ಯಗಳು. ಬರುವ ನೂತನ ವರ್ಷವನ್ನುಕೇಂದ್ರ ಬಸವ ಸಮಿತಿಯು ’ಸದ್ಭಾವನಾವರ್ಷ’ವೆಂದು ಆಚರಿಸುವುದರ ಮುಖಾಂತರ ಶರಣ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಮಹಾನ್‌ ಉದ್ದೇಶವನ್ನು ಇಟ್ಟು ಕೊಂಡಿದೆ ಎಂದರು.

ವೇದಿಕೆಯ ಮೇಲೆ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿದೇರ್ಶಕರಾದಡಾ. ವೀರಣ್ಣದಂಡೆ, ಹಾಗೂ ದತ್ತಿ ದಾಸೋಹಿಗಳಾದ ನಾಗೇಂದ್ರಪ್ಪಅಣ್ಣಾರಾವ ಪಾಟೀಲ ಸರಡಗಿ ಉಪಸ್ಥಿತರಿದ್ದರು. ಗುರುಶಾಂತಯ್ಯ ಸ್ಥಾವರಮಠ ನಡೆಸಿಕೊಟ್ಟ ವಚನಸಂಗೀತಎಲ್ಲರ ಮನ ಸೆಳೆಯಿತು.ಪ್ರಧಾನ ಕಾರ್ಯದರ್ಶಿ ಎಚ್.ಕೆ. ಉದ್ದಂಡಯ್ಯ ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here