ಕಲಬುರಗಿ: ಹೊಸ ವರ್ಷಕ್ಕೆ ಇನ್ನೇನು ಕ್ಷಣಗಣನೆ ಎದುರು ನೋಡುತ್ತಿರುವ ಯುವಕರಿಗೆ ಹಾಗೂ ಸಾರ್ವಜನಿಕರಿಗೆ ಜಿಲ್ಲಾ ಪೊಲೀಸ್ ಇಲಾಖೆ ಕೆಲವು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.
ಹೊಸ ವರ್ಷವನ್ನು ಅತ್ಯಂತ ಸಂಭ್ರಮ ಸಂತಸದಿಂದ ಆಚರಿಸಬೇಕು. ಆದರೆ ಅದರಿಂದ ಯಾವುದೇ ತೆರನಾದ ಅವಘಡಗಳು ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲವು ಕ್ರಮಗಳನ್ನು ಕೈಗೊಂಡಿದೆ.
ಕುಡಿದು ಮೋಟಾರು ಓಡಿಸುವುದನ್ನು ಚೆಕ್ ಮಾಡಲಾಗುವುದು,
ಬಾರ್ ಮತ್ತು ವೈನ್ ಶಾಪ್ ಗಳು ಎಂದಿನಂತೆ ನಿಗದಿಪಡಿಸಿದ ಸಮಯಕ್ಕೆ ಮುಚ್ಚಲಿವೆ. ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಪೊಲೀಸ್ ಅಧಿಕಾರಿಗಳು ಪೆಟ್ರೋಲಿಂಗ್ ನಡೆಸಲಿದ್ದಾರೆ.
ಯುವಕರು ಶೋಕಿಗಾಗಿ ತಮ್ಮ ವಾಹನದ ಚಕ್ರಗಳನ್ನು ಅಡ್ಡಾ ದಿಡ್ಡಿಯಾಗಿ ತಿರುಗಿಸುವುದು, ವಾಹನ ಚಾಲನೆ ಮಾಡುವುದು ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾಡಾ ಮಾರ್ಟಿನ್ ತಿಳಿಸಿದ್ದಾರೆ.