ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ: ಜನವರಿ 5 ರಂದು ‘ಗುರು ಸಾವಿತ್ರಿ’ ಪ್ರಶಸ್ತಿ ಪ್ರದಾನ

0
142

ಕಲಬುರಗಿ: ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಕೊಡಮಾಡುವ ‘ಗುರು ಸಾವಿತ್ರಿ’ ಪ್ರಶಸ್ತಿಗೆ ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಗೋಳಗಿ (ಸಿ) ಗ್ರಾಮದ ಸರಕಾರಿ ಪ್ರೌಢ ಶಾಲೆಯ ಶರಣಮ್ಮ ಎಸ್. ಬಿರಾದಾರ, ಬೋಧನ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಜಯಶ್ರೀ ಚೌಧರಿ, ಚಿಂಚನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿದ್ದಮ್ಮ ಶಿವಾನಂದ ಮಠಪತಿ, ಶರಣಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸುರೇಖಾ ಡಿ. ಸಾಗರ, ಅಫಜಲಪುರ ತಾಲೂಕಿನ ಅಳ್ಳಗಿ (ಕೆ) ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಂಬವ್ವ ಗೊರನಾಳ ಅವರು ಆಯ್ಕೆಯಾಗಿದ್ದು, ಜನವರಿ ೫ ರಂದು ಬೆಳಗ್ಗೆ ೧೦.೩೦ ಕ್ಕೆ ನಗರದ ವಿದ್ಯಾ ನಗರದಲ್ಲಿರುವ ಸರಕಾರಿ ಬಾಲಕಿಯರ ವಸತಿ ನಿಲಯದ ಆವರಣದಲ್ಲಿ ಆಯೀಜಿಸಿದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.

Contact Your\'s Advertisement; 9902492681

ನಿರ್ಗತಿಕರ, ದಲಿತರ ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ನಾನಾ ರೀತಿಯ ಮಾನಪಮಾನಗಳನ್ನು ಸಹಿಸಿ, ನಿಸ್ವಾರ್ಥ ಭಾವನೆಯಿಂದ, ಸಮರ್ಪಣಾಭಾವದಿಂದ ದುಡಿದ ತಾಯಿ ಸಾವಿತ್ರಿಬಾಯಿ ಫುಲೆ ಅವರು ದೇಶ ಕಂಡ ಅಪರೂಪದ ಶಿಕ್ಷಕಿಯಾಗಿದ್ದಾರೆ. ಹಾಗಾಗಿ, ಅಂತಹ ತ್ಯಾಗಮಯಿ ಜೀವನ ಇಂದಿನ ಶಿಕ್ಷಕರಿಗೆ ಮಾದರಿಯಾಗಬೇಕೆಂಬ ಉದ್ದೇಶದಿಂದ ಇಂಥ ಕಾರ್ಯಕ್ರಮ ಕಳೆದ ಅನೇಕ ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಸಮಾರಂಭ ಉದ್ಘಾಟಿಸಲಿದ್ದು, ಉಪ ಪೊಲೀಸ್ ಆಯುಕ್ತ ಡಿ. ಕಿಶೋರಬಾಬು ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ ಚೌರ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಫಾರ್ಮಾಸಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ. ಬಿ.ಎಸ್.ದೇಸಾಯಿ, ವಸತಿ ನಿಲಯದ ಮೇಲ್ವಿಚಾರಕರಾದ ಲಕ್ಷ್ಮೀ ಕೋರೆ, ಅಶ್ವಿನಿ ಹಡಪದ ಉಪಸ್ಥಿತರಿರುವರು.

ಚಿತ್ತಾಪುರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಡಾ.ಅನೀಲ ಟೆಂಗಳಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಅಕಾಡೆಮಿಯ ಎಸ್.ಎಂ.ಪಟ್ಟಣಕರ್, ಶಿವರಾಜ ಅಂಡಗಿ, ಡಾ.ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here