ಚಿತ್ತಾಪುರ: ತಾಲೂಕು ಕೇಂದ್ರದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್ ಫೆಬ್ರವರಿ 28ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ಬ್ಯಾಡ್ಮಿಂಟನ್ ಅಸೋಷಿಯೇಷನ್ ಉಪಾಧ್ಯಕ್ಷರಾದ ಯೋಗೇಶ್ ಪಾಟೀಲ್ ತಿಳಿಸಿದರು.
ಪಟ್ಟಣದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಮೊದಲು ಗುಲ್ಬರ್ಗ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಆಗಮಿಸಲು ವಿಮಾನ ನಿಲ್ದಾಣವಿಲ್ಲ ಸ್ಟಾರ್ ಹೋಟೆಲ್ ಗಳಿಲ್ಲ ಎಂಬ ಕಾರಣಕ್ಕಾಗಿ ಅಂತರಾಷ್ಟ್ರೀಯ ಟೂರ್ನಮೆಂಟ್ ನಡೆಸಲು ಒಪ್ಪಿಗೆ ಸಿಕ್ಕಿರಲಿಲ್ಲ, ಆದರೆ ಈಗ ವಿಮಾನ ನಿಲ್ದಾಣ ಪ್ರಾರಂಭವಾಗಿದ್ದು ಕ್ರೀಡಾಪಟುಗಳಿಗೆ ಆಗಮಿಸಲು ಅನುಕೂಲವಾಗಿದೆ, ಶಾಸಕರ ಒಪ್ಪಿಗೆ ಮೇರೆಗೆ ಟೂರ್ನಮೆಂಟ್ ನಡೆಸಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ, ಅಂತರಾಷ್ಟ್ರೀಯ ಕ್ರೀಡಾಪಟು ರಾಹುಲ್ ದ್ರಾವಿಡ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಮತ್ತು ಶಾಸಕ ಪ್ರಿಯಾಂಕ ಖರ್ಗೆ ಹಾಗೂ ಗಣ್ಯರು ಉಪಸ್ಥಿತರಿರುವರು.
ಟೂರ್ನಮೆಂಟ್ ನಲ್ಲಿ ಕರ್ನಾಟಕ,ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಗುಜರಾತ್, ಗೋವಾ, ಮಹಾರಾಷ್ಟ್ರ, ಹಾಗೂ ಕೇರಳ, ರಾಜ್ಯಗಳಿಂದ ತಂಡಗಳು ಭಾಗವಹಿಸಲಿದ್ದು ಪ್ರಥಮ ಸ್ಥಾನ ಪಡೆದ ತಂಡಕ್ಕೆ 1 ಲಕ್ಷ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ಬಹುಮಾನ ನೀಡಲಾಗುತ್ತಿದೆ ಒಟ್ಟು 40 ತಂಡಗಳು ಭಾಗವಹಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಬ್ಯಾಡ್ಮಿಂಟನ್ ಅಸೋಷಿಯೇಷನ್ ಅಧ್ಯಕ್ಷ ಸಾಬಣ್ಣ ವಾಯ್ ಕಾಶಿ, ಸಂತೋಷ್ ಕಾಶಿ, ಜಹೀರ್ ಹುಲ ಹಕ್ಕ, ಬಾಬುರಾವ್ ಕಾಶಿ, ಲಕ್ಕನ್ ಸಿಂಗ್, ವಿಕ್ರಮ್ ಸಿಂಗ್, ಖದೀರ್, ರಿಯಾಜ್, ಶ್ರೀದೇವಿ, ಶೇರ್ ಅಲಿ, ವಿಜಯಕುಮಾರ, ಅಬ್ದುಲ ವಿಕ್ರಮ್, ಉಮರ್, ಇದ್ದರು.