ಕಲಬುರಗಿ: ಕಲಬುರಗಿಯಲ್ಲಿ ಫೆಬ್ರವರಿ ೫ ರಿಂದ ೭ ರವರೆಗೆ ಜರುಗಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಡಾ. ಬಿ.ಆರ್. ಅಂಬೇಡ್ಕರ ಸಭಾಂಗಣ (ಸಮಾನಾಂತರ ವೇದಿಕೆ-೧)ದಲ್ಲಿ ಇದೇ ಫೆಬ್ರವರಿ ೫ ರಂದು ಸಂಜೆ ೬.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಭೂಮಿ ಹಾಗೂ ಚಲನಚಿತ್ರ ಹಿರಿಯ ಕಲಾವಿದರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ಉದ್ಘಾಟಿಸುವರು.
ಕಲಬುರಗಿ ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಘನವೆತ್ತ ಕುಲಾಧಿಪತಿ ಡಾ.ಸೈಯದ ಶಾಹ ಖುಸ್ರೋ ಹುಸೇನಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಫೆಬ್ರವರಿ ೫ ರಂದು ಸಂಜೆ ೬.೩೦ ರಿಂದ ರಾತ್ರಿ ೧೧ ಗಂಟೆಯವರೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಕಲಬುರಗಿಯ ಮಾಲಾಶ್ರೀ ಫ.ಕಣವಿ ಅವರಿಂದ ಸುಗಮ ಸಂಗೀತ, ಮಾನ್ವಿಯ ಅಂಬಯ್ಯ ನೂಲಿ ಅವರಿಂದ ವಚನ ಸಂಗೀತ, ಬೆಂಗಳೂರಿನ ಪಂ. ನಾಗರಾಜರಾವ್ ಹವಾಲ್ದಾರ ಅವರಿಂದ ಹಿಂದೂಸ್ತಾನಿ ಸಂಗೀತ, ರಾಯಚೂರಿನ ಡಾ. ಪಂಡಿತ ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್ ವಾದನ, ಮೈಸೂರಿನ ಸುನೀತಾ ಚಂದ್ರಕುಮಾರ ಅವರಿಂದ ಕೃಷ್ಣ ಸಖಿ ನೃತ್ಯರೂಪಕ, ಕಲಬುರಗಿಯ ರಾಘವೇಂದ್ರ ಬಡಶೇಷಿ ಅವರಿಂದ ದಾಸವಾಣಿ, ಕಲಬುರಗಿಯ ಭೀಮಣ್ಣ ಜಾಧವ ಅವರಿಂದ ಸುಂದರಿವಾದನ, ಬೆಂಗಳೂರಿನ ಸತೀಶ ಹಂಪಿಹೊಳೆ ಹಾಗೂ ತಂಡದಿಂದ ಸುಗಮ ಸಂಗೀತ, ಕಲಬುರಗಿ ಕೋಟನೂರ (ಡಿ) ಸಿದ್ಧಶ್ರೀ ಪ್ರೌಢ ಶಾಲೆಯಿಂದ ಡೊಳ್ಳಿನ ಕುಣಿತ, ಧಾರವಾಡದ ಗಂಗಾಧರಮಾಂತ ಅವರಿಂದ ಭಾವಗೀತೆ, ಕಲಬುರಗಿಯ ಡಾ.ಶುಭಾಂಗಿ ಅವರಿಂದ ಭರತನಾಟ್ಯ, ಕೊಪ್ಪಳದ ದಾವಲ್ ಸಾಬ ಅತ್ತಾರ ಅವರಿಂದ ಗೀಗಿ ಪದ, ಕಲಬುರಗಿಯ ಜಯತೀರ್ಥ ಕುಲಕರ್ಣಿ ಅವರಿಂದ ಕೊಳಲು ವಾದನ, ಕಲಬುರಗಿಯ ಜಡೇಶ ಹೂಗಾರ ಅವರಿಂದ ತಬಲಾ ವಾದನ, ರಾಯಚೂರಿನ ದಾದಾಪೀರ್ ಅವರಿಂದ ತತ್ವಪದ, ಕೋಲಾರದ ಶ್ರೀ ಜಯ ನಾಟ್ಯ ಕಲಾ ಅಕಾಡೆಮಿಯಿಂದ ನೃತ್ಯರೂಪಕ ಕಾರ್ಯಕ್ರಮಗಳು ಜರುಗಲಿವೆ.
ಅಂದು ಸಂಜೆ ೬.೪೦ ರಿಂದ ರಾತ್ರಿ ೧೦.೩೦ ಗಂಟೆಯವರೆಗೆ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಸಭಾಂಗಣ (ಸಮಾನಾಂತರ ವೇದಿಕೆ-೧)ದಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಬೆಂಗಳೂರಿನ ಉಷಾ.ಬಿ ಅವರಿಂದ ಭರತನಾಟ್ಯ, ಪದ್ಮಿನಿ ಎಲ್ ಅವರಿಂದ ಭಾವಗೀತೆ, ಗದಗಿನ ಸಣ್ಣ ಮುದಿಯಪ್ಪ ಭಜಂತ್ರಿ ಅವರಿಂದ ಶಹನಾಯಿ ವಾದನ, ವಿಜಯಪುರದ ಪ್ರಕಾಶ ಸಿಂಗ ರಜಪೂತ ಅವರಿಂದ ಗಜಲ್ ಗಾಯನ, ಕಲಬುರಗಿಯ ನಿವೇದಿತಾ ನಾಗೇಂದ್ರಪ್ಪ ಹೊನ್ನಳ್ಳಿ ಅವರಿಂದ ಸಿತಾರವಾದನ, ಹೊಸಪೇಟೆಯ ವಿಜಯಲಕ್ಷ್ಮೀ ಅವರಿಂದ ಸುಗಮ ಸಂಗೀತ, ಹಗರಿಬೊಮ್ಮನಹಳ್ಳಿಯ ಭೀರಪ್ಪ ಬಾಣದ ಅವರಿಂದ ಭಾವಗೀತೆ, ಬೀದರ್‌ನ ಉಷಾ ಪ್ರಭಾಕರ ಅವರಿಂದ ನೂಪುರ ನೃತ್ಯ, ಬೆಂಗಳೂರಿನ ಲಕ್ಷ್ಮೀ ಮತ್ತು ತಂಡದಿಂದ ಜಾನಪದ ಸಮೂಹ ನೃತ್ಯ, ಕಲಬುರಗಿಯ ದತ್ತರಾಜ ಕಲಶೆಟ್ಟಿ ಅವರಿಂದ ತತ್ವಪದ ಗಾಯನ, ಶಿವಶರಣಪ್ಪ ಎಂ.ಪೂಜಾರಿ ಅವರಿಂದ ಹಿಂದೂಸ್ತಾನಿ ಸಂಗೀತ, ಮಲ್ಲಿಕಾರ್ಜುನ ಭಜಂತ್ರಿ ಅವರಿಂದ ಸುಗಮ ಸಂಗೀತ, ವಿಜಯಪುರದ ಕು. ದಿವ್ಯಾ ಹಾಗೂ ದಿಕ್ಷಾ ಭಿಸೆ ಅವರಿಂದ ಕೂಚಪುಡಿ ನೃತ್ಯ, ರವಿಕಾಂತ ಸದಾಶಿವ ಪೂಜಾರಿ ಅವರಿಂದ ಕಥಕ ನೃತ್ಯ, ಪ್ರಿಯಾಂಕ್ ಸರಶೇಟ್ ಅವರಿಂದ ಭರತನಾಟ್ಯ, ಕಲಬುರಗಿಯ ಗಂಗಾಂಭಿಕಾ ವೀರಯ್ಯ ಮಠಪತಿ ಅವರಿಂದ ಸುಗಮ ಸಂಗೀತ ಹಾಗೂ ಕು. ಸುಧಾರಾಣಿ ಅವರಿಂದ ಭಾವಗೀತೆ ಹಾಗೂ ತುಮಕೂರಿನ ಚಿಕ್ಕಪೇಟೆಯ ಎಸ್.ಎನ್.ರಮಾನಂದ ಅವರಿಂದ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ.
ಅಂದು ಸಂಜೆ ೫.೩೦ ರಿಂದ ರಾತ್ರಿ ೧೦.೩೦ ಗಂಟೆಯವರೆಗೆ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-೨)ದಲ್ಲಿ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಕಲಬುರಗಿಯ ದಿಗಂಬರ ಈರಪ್ಪಾ ಪಂಚಾಳ ಅವರಿಂದ ಜಾನಪದ ಗೀತೆ, ಬೆಳಗಾವಿಯ ಬಸವರಾಜ ಅಡಿವೆಪ್ಪ ತಿಮ್ಮಾಪೂರ ಅವರಿಂದ ಸುಗಮ ಸಂಗೀತ, ಕೊಡಗಿನ ಅನುಷಾ ಕಲಾ ತಂಡದಿಂದ ಭಾವಗೀತೆ, ಕಲಬುರಗಿಯ ಎಂಜಲ್ ಅವರಿಂದ ಭರತನಾಟ್ಯ, ಗಣಪತರಾವ್ ಶಿಂಗಶೆಟ್ಟಿ ಅವರಿಂದ ಜಾನಪದ ಗೀತೆ, ಹಾಸನದ ನೃತ್ಯಂಜಲಿ ಕಲಾ ನಿಕೇತನ ಅವರಿಂದ ಭರತ ನಾಟ್ಯ, ಕಲಬುರಗಿಯ ಇಂಡಿಯನ್ ಕಲ್ಚರಲ್ ಸೆಂಟರ್ ಮತ್ತು ಚಾರಿಟೇಬಲ್ ಟ್ರಸ್ಟ್‌ದಿಂದ ನೃಪತುಂಗ ನಾಟಕ, ಸೂರ್ಯನಗರಿ ಸ್ವತಂತ್ರ ಕಲಾ ಸಂಘದಿಂದ ಸುರಪುರ ವೆಂಕಟಪ್ಪ ನಾಯಕ ನಾಟಕ ಪ್ರದರ್ಶನ, ಕೊಪ್ಪಳದ ಭೀಮವ್ವಾ ದೊಡ್ಡಬಾಳಪ್ಪ ಅವರಿಂದ ಬೊಂಬೆಯಾಟ ವಿರಾಟ ಪರ್ವ ಹಾಗೂ ಧಾರವಾಡದ ಸಮುದಾಯ ರಂಗತಂಡದಿಂದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.
೮೫ನೇ ಸಾಹಿತ್ಯ ಸಮ್ಮೇಳನ: ಫೆ. 6 ರಂದು ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ ೫ ರಿಂದ ೭ರವರೆಗೆ ಜರುಗಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಇದೇ ಫೆಬ್ರವರಿ ೬ ರಂದು ವಿವಿಧ ವೇದಿಕೆಗಳಲ್ಲಿ ಏರ್ಪಡಿಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಅಂದು ಸಂಜೆ ೬.೩೦ ರಿಂದ ರಾತ್ರಿ ೧೧ ಗಂಟೆಯವರೆಗೆ ವಿಶ್ವವಿದ್ಯಾಲಯದ ಆವರಣದ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಕಲಬುರಗಿಯ ಹರ್ಷಿತ ಸಿ ಮತ್ತು ತಂಡದಿಂದ ಭರತನಾಟ್ಯ, ಸುರಪುರದ ಲಕ್ಷ್ಮಣ ಗುತ್ತೇದಾರ ಅವರಿಂದ ಜನಪದ ಗೀತೆ, ಯಾದಗಿರಿಯ ಬಸವರಾಜ ಬಂಟನೂರ ಅವರಿಂದ ವಚನ ಗಾಯನ, ಬೆಂಗಳೂರಿನ ಖ್ಯಾತ ಹಿನ್ನೆಲೆ ಗಾಯಕಿ ಇಂದು ನಾಗರಾಜ ಅವರಿಂದ ರಸಮಂಜರಿ, ಕಲಬುರಗಿಯ ಅನಂತ ಚಿಂಚನಸೂರ ಅವರಿಂದ ಭರತನಾಟ್ಯ, ಇಳಕಲ್‌ನ ರಂಗಗೀತೆ ಕಲಾ ಸಂಘದ ಶಿವರಂಜನಿ ಅವರಿಂದ ಸುಗಮ ಸಂಗೀತ, ರಾಯಚೂರಿನ ಸಂಗೀತ ಕಾಖಂಡಕಿ ಅವರಿಂದ ದಾಸವಾಣಿ, ಕಲಬುರಗಿ ಸಿದ್ಧರಾಮಪ್ಪ ಪೊಲೀಸ್ ಪಾಟೀಲ ಅವರಿಂದ ಭಾವಗೀತೆ, ಗಂಗಾವತಿಯ ಗೋವಿಂದರಾಜು ಅವರಿಂದ ಕೊಳಲು ವಾದನ, ಕಲಬುರಗಿಯ ಪ್ರಸನ್ನ ವೆಂಕಟೇಶ ಕೊರತಿ ಅವರಿಂದ ಸುಗಮ ಸಂಗೀತ, ಪ್ರೋ.ರೇವಯ್ಯ ವಸ್ತ್ರದಮಠ ಅವರಿಂದ ಹಿಂದುಸ್ತಾನಿ ಸಂಗೀತ, ವಿಜಯಪುರದ ಜ್ಯೋರ್ತಿಲಿಂಗ ಚಂದ್ರಾಮ ಹೊನ್ನಕಟ್ಟಿ ಅವರಿಂದ ತತ್ವಪದ, ಕಲಬುರಗಿಯ ಶಂಕ್ರಪ್ಪ ಬಿ.ಹೂಗಾರ ಅವರಿಂದ ವಚನ ಗಾಯನ, ಶಿವಮೊಗ್ಗದ ವಿದ್ವಾನ್ ದತ್ತಮೂರ್ತಿ ಭಟ್ ಅವರಿಂದ ದಾಸರ ಪದಗಳು ಹಾಗೂ ಕಲಬುರಗಿಯ ಅಣ್ಣಾರಾವ ಶೆಳ್ಳಗಿ ಅವರಿಂದ ಭಾವಗೀತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಅಂದು ಸಂಜೆ ೭ ರಿಂದ ರಾತ್ರಿ ೧೦.೩೦ ಗಂಟೆಯವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ (ಸಮಾನಾಂತರ ವೇದಿಕೆ-೧)ರಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಬೆಂಗಳೂರಿನ ವಿದ್ವಾನ್ ನಾಗೇಂದ್ರ ಟಿ.ರಾಣಾಪೂರ ಅವರಿಂದ ಸುಗಮ ಸಂಗೀತ, ವಿದ್ವಾನ್ ನಾಗಭೂಷಣ ಅವರಿಂದ ಭರತ ನಾಟ್ಯ, ಬಳ್ಳಾರಿಯ ಸವಿತಾ ಅಮರೇಶ ನುಗಡೋಣಿ ಅವರಿಂದ ಸುಗಮ ಸಂಗೀತ, ಕೊಪ್ಪಳದ ಅಕ್ಕಮಹಾದೇವಿ ರಾಬೂರ ಅವರಿಂದ ಲಾವಣಿ ಪದ, ಬೆಂಗಳೂರಿನ ತ್ರೀವೇಣಿ ಮತ್ತು ವಿಜಯಲಕ್ಷ್ಮೀ ಅವರಿಂದ ಭಾವಗೀತೆ, ಶಿವಮೊಗ್ಗದ ಶ್ರೀನಿವಾಸ ಅರುಣ ಹಂಪಿಹೊಳಿ ಅವರಿಂದ ಹಿಂದೂಸ್ತಾನಿ ಸಂಗೀತ, ಬೀದರನ ರಾಣಿ ಸತ್ಯಮೂರ್ತಿ ಅವರಿಂದ ಜಾನಪದ ನೃತ್ಯ, ಉಡುಪಿಯ ಶ್ರೀ ದುರ್ಗಾ ಪರಮೇಶ್ವರಿ ಹೋಳಿ ತಂಡದಿಂದ ಕರಾವಳಿ ಹೋಳಿ ಕುಣಿತ, ಕಲಬುರಗಿಯ ಗುರುಬಸಯ್ಯ ಎಂ. ಹಿರೇಮಠ ಅವರಿಂದ ಹಿಂದೂಸ್ತಾನಿ ಸಂಗೀತ, ಕಲಬುರಗಿಯ ಅಪರ್ಣ ಎಂ.ದೊಡ್ಡಮನಿ ಅವರಿಂದ ಭಾವಗೀತೆ, ಕಲಬುರಗಿಯ ಸಿದ್ದಪ್ಪ ಹಣಮಂತ ನಾಗರಳ್ಳಿ ಅವರಿಂದ ಸುಗಮ ಸಂಗೀತ, ಕರಬಸಯ್ಯಸ್ವಾಮಿ ಯಲಮಾಮಡಿ ಅವರಿಂದ ತತ್ವಪದ, ಕೊಪ್ಪಳದ ಮಾರಪ್ಪ ದಾಸರ ಅವರಿಂದ ತಂಬೂರಿ ಪಿಟೀಲು ವಾದನ, ಅಫಜಲಪುರದ ಶಿವಶರಣಪ್ಪ ಗುಂದಗಿ ಅವರಿಂದ ಸುಗಮ ಸಂಗೀತ ಹಾಗೂ ಬಳ್ಳಾರಿಯ ಶ್ರೀ ಎಲಿಹಾಳ ಸಿದ್ದಯ್ಯ ಸ್ವಾಮಿ ಕಲಾಬಳಗದಿಂದ ಉಪಪಾಂಡವರ ಸಂಹಾರ ನಾಟಕ ಪ್ರದರ್ಶನಗೊಳ್ಳಲಿದೆ.
ಅಂದು ಸಂಜೆ ೫.೩೦ರಿಂದ ರಾತ್ರಿ ೧೦ ಗಂಟೆಯವರೆಗೆ ವಿಶ್ವವಿದ್ಯಾಲಯದ ಆವರಣದಲ್ಲಿನ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-೨) ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ರಾಯಚೂರಿನ ಶಾಂತಾ ಕುಲಕರ್ಣಿ ಅವರಿಂದ ರಂಗಗೀತೆಗಳು, ಸೇಡಂನ ಗಂಗಮ್ಮ ತಾಯಿತ ಅವರಿಂದ ಜನಪದ ಹಾಡು, ಕಲಬುರಗಿಯ ಗುರುಶಾಂತಯ್ಯ ಸ್ಥಾವರಮಠ ಅವರಿಂದ ವಚನ ಗಾಯನ, ಆಕಾಂಕ್ಷ ಪುರಾಣಿಕ ಅವರಿಂದ ಭರತ ನಾಟ್ಯ, ಸಿದ್ಧಾರ್ಥ ಚಿಮ್ಮಇದಲಾಯಿ ಅವರಿಂದ ವಚನ ಗಾಯನ, ಬಸವರಾಜ ಚೆನ್ನಪ್ಪಾ ಅವರಿಂದ ಬಯಲಾಟ, ಹಾವೇರಿಯ ಮಹೇಶ್ವರಿ ಅವರಿಂದ ದೊಡ್ಡಾಟ-ವಚನ ನೃತ್ಯ, ಚಿತ್ರದುರ್ಗದ ಕೃಷ್ಣಪ್ಪ ಅವರಿಂದ ಜನಪದ ಹಾಡು, ಬೀದರಿನ ಲಕ್ಷ್ಮೀ ಅವರಿಂದ ನೃತ್ಯ, ಮೈಸೂರಿನ ಆರ್.ಸಿ.ರಾಜಲಕ್ಷ್ಮೀ ಅವರಿಂದ ಸುಗಮ ಸಂಗೀತ, ಗದಗಿನ ಆದರ್ಶ ಕಲಾ ತಂಡದಿಂದ ಜನಪದ ನೃತ್ಯ, ಬೀದರಿನ ರೇಖಾ ಸೌದಿ ಅವರಿಂದ ಜನಪದ ಗೀತೆ, ಕೊಪ್ಪಳದ ಹುಲಗಿ ನಾಟ್ಯ ನಾದ ಕಲಾ ಸಂಘದಿಂದ ಭರತನಾಟ್ಯ, ಬಾಗಲಕೋಟೆಯ ಸ್ಪೂರ್ತಿ ಶೆಟ್ಟಿ ಅವರಿಂದ ಭರತನಾಟ್ಯ, ಕಲಬುಗಿಯ ಆರ್ಟ್ ಥೇಟರ್ ದಿಂದ ವಿಧೂಷಕ ನಾಟಕ ಪ್ರದರ್ಶನ ಹಾಗೂ ಕಲಬುರಗಿ ರಂಗಾಯಣದಿಂದ ಹುಕುಂ ಪತ್ರ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.
ಸಾಹಿತ್ಯ ಸಮ್ಮೇಳನ: ಫೆಬ್ರವರಿ ೭ರಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ ೫, ೬ ಮತ್ತು ೭ರಂದು ಜರುಗಲಿರುವ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಇದೇ ಫೆಬ್ರವರಿ ೭ ರಂದು ವಿವಿಧ ವೇದಿಕೆಗಳಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಫೆಬ್ರವರಿ ೭ರಂದು ಸಂಜೆ ೬.೩೦ ಗಂಟೆಯಿಂದ ರಾತ್ರಿ ೧೦.೩೦ ಗಂಟೆಯವರೆಗೆ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಕಲಬುರಗಿಯ ವಿನ್ಯಾಸ ಧರ್ಮಗಿರಿ ಅವರಿಂದ ಭರತನಾಟ್ಯ, ಶ್ರೀ ಬಸವರಾಜ ಆಲಗೂಡು ಅವರಿಂದ ಗೀಗೀ ಪದ, ಸಿದ್ದಣ್ಣ ಚನ್ನಮಲ್ಲಪ್ಪ ಕುಂಬಾರ ಅವರಿಂದ ಮೂಗಿನಿಂದ ಕೊಳಲು ವಾದನ, ಮೈಸೂರಿನ ಸುಮ ರಾಜಕುಮಾರ ಅವರಿಂದ ಮಾತನಾಡುವ ಗೊಂಬೆ, ಬಾಗಲಕೋಟೆಯ ಡಾ.ಸಿದ್ದರಾಮಯ್ಯ ಮಠಪತಿ ಅವರಿಂದ ಹಿಂದೂಸ್ತಾನಿ ಸಂಗೀತ, ಬಸವಕಲ್ಯಾಣದ ಧೂಳಪ್ಪ ಮುಡಬಿ ಅವರಿಂದ ವಚನ ಸಂಗೀತ, ಬೆಂಗಳೂರಿನ ಶ್ರೀ ವಿಜಯ ರಂಗ ಅವರಿಂದ ದಾಸರ ವಾಣಿ ಹಾಗೂ ಬೆಂಗಳೂರಿನ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.
ಅಂದು ಸಂಜೆ ೫.೩೦ ಗಂಟೆಯಿಂದ ರಾತ್ರಿ ೧೦.೩೦ ಗಂಟೆಯವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣ (ಸಮಾನಾಂತರ ವೇದಿಕೆ-೧) ದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಮೈಸೂರಿನ ಚಾಮುಂಡಿಪುರಂ ನೃತ್ಯ ಶಾಲೆಯ ಸೌಮ್ಯ ಅವರಿಂದ ಭರತನಾಟ್ಯ, ಕಲಬುರಗಿಯ ಡಾ.ಛಾಯಾ ಭರತನೂರ ಅವರಿಂದ ವಚನ ಸಂಗೀತ, ಬಾಗಲಕೋಟೆಯ ವೆಂಕಪ್ಪ ಅಂಬಾಜಿ ಸುಗೇತಕರ್ ಅವರಿಂದ ಗೊಂದಲಿಗರ ಹಾಡು, ಕಲಬುರಗಿಯ ಹಣಮಂತರಾವ ಮಂಗಾಣಿ ಅವರಿಂದ ಜಾನಪದ ಸಂಗೀತ, ಕುಮಾರಿ ಶ್ರದ್ಧಾ ಅವರಿಂದ ಯೋಗ ನೃತ್ಯ, ಬೆಳಗಾವಿಯ ಶಿವಪುತ್ರ ಬಡಿಗೇರ ಅವರಿಂದ ಜಾನಪದ ಗೀತೆ, ಕೊಪ್ಪಳದ ಶಿವಕುಮಾರ ಜಿ. ಮಹಂತ ಅವರಿಂದ ಭಾವಗೀತೆ, ಗದಗಿನ ಡಾ. ವಿಶ್ವನಾಥ ವಿ. ಹಿರೇಮಠ ಅವರಿಂದ ಹಿಂದೂಸ್ತಾನಿ ಸಂಗೀತ, ಬಳ್ಳಾರಿಯ ಜಿ.ಚಂದ್ರಕಾಂತ ಅವರಿಂದ ವಚನ ಸಂಗೀತ, ಬಾಗಲಕೋಟೆಯ ಅಖಂಡೇಶ್ವರ ಎಂ.ಪತ್ತಾರ್ ಅವರಿಂದ ಸುಗಮ ಸಂಗೀತ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯಿಂದ ನೃತ್ಯ ರೂಪಕ, ಕಲಬುರಗಿಯ ಗೋಪಾಲ ಕುಲಕರ್ಣಿ ಅವರಿಂದ ಭಾವಗೀತೆ, ಬಸವರಾಜ ಸಾಲಿ ಮತ್ತು ಸೂರ್ಯಕಾಂತ ಡುಮ್ಮಾ ಅವರಿಂದ ಸುಗಮ ಸಂಗೀತ, ಬೆಂಗಳೂರಿನ ಶ್ರೀ ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿಯಿಂದ ನೃತ್ಯ ರೂಪಕ, ಕಲಬುರಗಿಯ ಗುರುನಾಥ ಮಾಸ್ತರ್ ಪಡಗಾನೂರ್ ಅವರಿಂದ ಡೊಳ್ಳಿನ ಹಾಡು, ಬೆಳಗಾವಿಯ ಚಮಕೇರಿ ಸದಾಶಿವ ನಾಟ್ಯ ಸಂಘದಿಂದ ಶಿವಶಕ್ತಿ ಸಂವಾದ, ಸಣ್ಣಾಟ ಹಾಗೂ ಲೋಹಿಯಾ ಕಲಾ ತಂಡದಿಂದ ಕಡಕೋಳದ ಬೆಳಕು ನಾಟಕ ಪ್ರದರ್ಶನಗೊಳ್ಳಲಿದೆ.
ಅಂದು ಸಂಜೆ ೫ ರಿಂದ ರಾತ್ರಿ ೧೦.೧೫ ಗಂಟೆಯವರೆಗೆ ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-೨) ದಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
ಬೆಂಗಳೂರಿನ ನಾರಾಯಣಸ್ವಾಮಿ ತಂಡದಿಂದ ಶಾಸ್ತ್ರೀಯ ಗಾಯನ, ಭಾಗ್ಯ ಲಕ್ಷ್ಮೀ ಎಸ್. ಪಾಟೀಲ ಅವರಿಂದ ಭರತ ನಾಟ್ಯ, ವಿಜಯಪುರದ ಎಸ್.ಸಿ.ಕುರ್ಲೆ ಅವರಿಂದ ಜಾನಪದ ಹಾಡು, ಮಂಡ್ಯದ ಎನ್.ಟಿ.ಮೂರ್ತಾಚಾರ್ಯ ಅವರಿಂದ ಗೊಂಬೆ ಪ್ರದರ್ಶನ, ಕೊಪ್ಪಳದ ಲಕ್ಷ್ಮಣ ಪೀರಗಾರ ಅವರಿಂದ ನಾಟಕ, ಕಲಬುರಗಿಯ ಪಂಪಯ್ಯಾ ಸ್ವಾಮಿ ನಾಚವಾರ ಅವರಿಂದ ಬಬ್ರುವಾಹನ ದೊಡ್ಡಾಟ, ಬಳ್ಳಾರಿಯ ಕೆ.ಹೊನುರುಸ್ವಾಮಿ ಅವರಿಂದ ತೊಗಲು ಬೊಂಬೆಯಾಟ ಹಾಗೂ ರಾಮನಗರದ ಹಂಸಧ್ವನಿ ಕಲಾಬಳಗ ಅವರಿಂದ ನಾಟಕ ಏರ್ಪಡಿಸಲಾಗಿದೆ.
****