ಸುರಪುರ: ಮಹಾತ್ಮ ಗಾಂಧಿಯವರು ಕೇವಲ ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವೇ ಮೆಚ್ಚಿದ ಮಹಾನ್ ನಾಯಕರಾಗಿದ್ದಾರೆ.ಅವರು ಜಗತ್ತಿಗೆ ಕೊಟ್ಟಿರುವ ಸತ್ಯ ಅಹಿಂಸೆಯ ಸಂದೇಶಗಳು ಹಾಗು ಶಾಂತಿಯುತವಾದ ಸತ್ಯಾಗ್ರಹದ ಹೋರಾಟ ಬಹುದೊಡ್ಡ ಅಸ್ತ್ರವಾಗಿದೆ.ಅಂತಹ ಮಹಾತ್ಮ ಗಾಂಧಿ ಕುರಿತಾದ ರೂಪಕ ನೋಡಲು ಸಿಕ್ಕಿರುವುದು ಭಾಗ್ಯ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ರಂಗ ಪಯಣ ಧಾರವಾಡ,ಸಾರ್ವಜನಿಕ ಶಿಕ್ಷಣ ಇಲಾಖೆ,ರಿಕ್ರಿಯೇಷನ್ ಕ್ಲಬ್ ಸುರಪುರ ಹಾಗು ಅಜೀಂ ಪ್ರೇಮ್‌ಜಿ ಪೌಂಡೇಶನ್ ಇವರುಗಳ ಸಹಕಾರದಲ್ಲಿ ಬೋಳುವಾರ ಮಹ್ಮದ್ ಕುಂಇ ಇವರು ರಚಿಸಿರುವ ಪಾಪು ಗಾಂಧಿ ಗಾಂಧಿ ಬಾಪುವಾದ ಕಥೆ ಎಂಬ ಕಲಬುರಗಿ ರಂಗಾಯಣದ ಕಲಾವಿದರ ರಂಗ ರೂಪಕ ಅಭಿನಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ,ಇಂತಹ ಮನೋಜ್ಞವಾದ ರೂಪಕ ಶಾಲಾ ಮಕ್ಕಳಿಗೆ ತೋರಿಸುವುದು ತುಂಬಾ ಅವಶ್ಯಕವಾಗಿದೆ.ಇದರಿಂದ ಮಕ್ಕಳಲ್ಲಿ ದೇಶಪ್ರೇಮ,ಸತ್ಯ ನ್ಯಾಯಯುತವಾದುದರ ಪರವಾಗಿ ನಿಲ್ಲುವ ಗುಣಗಳನ್ನು ಬೆಳೆಸಲು ಸಾಧ್ಯವಾಗಲಿದೆ.ಈ ಪ್ರದರ್ಶನ ನೋಡಿ ಮಕ್ಕಳು ಗಾಂಧಿಯಂತಾಗಲೆಂದು ಹಾರೈಸಿದರು.
ನಂತರ ನಡೆದ ರಂಗ ರೂಪಕವನ್ನು ನೋಡಿದ ಮಕ್ಕಳು ಮಹಾತ್ಮ ಗಾಂಧಿಯವರ ಜೀವನ ರೀತಿಯನ್ನು ಕಂಡು ಬೆರಗಾದರು ಹಾಗು ಎಲ್ಲಾ ಮಕ್ಕಳು ಗಾಂಧಿಯ ಆದರ್ಶವನ್ನು ಗುಣಗಾನ ಮಾಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೆಕಾರ,ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ನಿವೃತ್ತ ಲೋಕಾಯುಕ್ತ ಎಸ್ಪಿ ಸಿ.ಎನ್.ಭಂಡಾರೆ,ಎಪಿಎಫ್‌ನ ಸುರೇಶ ಗೌಡ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುರಪುರ ಕ್ಲಸ್ಟರ್‌ನ ಸಾವಿರಾರು ಮಕ್ಕಳು ಹಾಗು ಶಿಕ್ಷಕರು ಭಾಗವಹಿಸಿ ವೀಕ್ಷಿಸಿದರು.ರಂಗ ತಂಡದ ನಿರ್ದೇಶಕರಾದ ಹರಿಕೃಷ್ಣ ಇವರಿಗೆ ಎಲ್ಲರಿಂದ ಅಭಿನಂಧನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಜಮದ್ರಖಾನಿ,ಬಿಆರ್‌ಪಿ ಖಾದರ್ ಪಟೇಲ್,ಆರ್.ಕೆ.ಕೋಡಿಹಾಳ,ಜಾಕೀರ್ ಹುಸೇನ್,ಸಾಮುವೆಲ್,ರವಿ ಗಲಗಿನ್,ಮಲ್ಲಿಕಾರ್ಜುನ ಕಟ್ಟಿಮನಿ,ಜೋಗಪ್ಪ,ಕೃಷ್ಣ ದರಬಾರಿ,ಎಪಿಎಫ್‌ನ ಅಜೀಂ ಫರೀದಿ,ವಿನೋದ ಕುಮಾರ,ಪರಮಣ್ಣ ತಳಗೇರಿ,ಶಿವಕುಮಾರ ಸೇರಿದಂತೆ ಅನೇಕರಿದ್ದರು.ಅನ್ವರ್ ಜಮಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…