ಗರುಡಾದ್ರಿಯಲ್ಲಿ ಗಾಂಧಿ ಕುರಿತಾದ ರಂಗ ರೂಪಕ ಅಭಿನಯ

0
44

ಸುರಪುರ: ಮಹಾತ್ಮ ಗಾಂಧಿಯವರು ಕೇವಲ ಭಾರತ ಮಾತ್ರವಲ್ಲದೆ ಇಡೀ ಪ್ರಪಂಚವೇ ಮೆಚ್ಚಿದ ಮಹಾನ್ ನಾಯಕರಾಗಿದ್ದಾರೆ.ಅವರು ಜಗತ್ತಿಗೆ ಕೊಟ್ಟಿರುವ ಸತ್ಯ ಅಹಿಂಸೆಯ ಸಂದೇಶಗಳು ಹಾಗು ಶಾಂತಿಯುತವಾದ ಸತ್ಯಾಗ್ರಹದ ಹೋರಾಟ ಬಹುದೊಡ್ಡ ಅಸ್ತ್ರವಾಗಿದೆ.ಅಂತಹ ಮಹಾತ್ಮ ಗಾಂಧಿ ಕುರಿತಾದ ರೂಪಕ ನೋಡಲು ಸಿಕ್ಕಿರುವುದು ಭಾಗ್ಯ ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.

ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ರಂಗ ಪಯಣ ಧಾರವಾಡ,ಸಾರ್ವಜನಿಕ ಶಿಕ್ಷಣ ಇಲಾಖೆ,ರಿಕ್ರಿಯೇಷನ್ ಕ್ಲಬ್ ಸುರಪುರ ಹಾಗು ಅಜೀಂ ಪ್ರೇಮ್‌ಜಿ ಪೌಂಡೇಶನ್ ಇವರುಗಳ ಸಹಕಾರದಲ್ಲಿ ಬೋಳುವಾರ ಮಹ್ಮದ್ ಕುಂಇ ಇವರು ರಚಿಸಿರುವ ಪಾಪು ಗಾಂಧಿ ಗಾಂಧಿ ಬಾಪುವಾದ ಕಥೆ ಎಂಬ ಕಲಬುರಗಿ ರಂಗಾಯಣದ ಕಲಾವಿದರ ರಂಗ ರೂಪಕ ಅಭಿನಯ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ,ಇಂತಹ ಮನೋಜ್ಞವಾದ ರೂಪಕ ಶಾಲಾ ಮಕ್ಕಳಿಗೆ ತೋರಿಸುವುದು ತುಂಬಾ ಅವಶ್ಯಕವಾಗಿದೆ.ಇದರಿಂದ ಮಕ್ಕಳಲ್ಲಿ ದೇಶಪ್ರೇಮ,ಸತ್ಯ ನ್ಯಾಯಯುತವಾದುದರ ಪರವಾಗಿ ನಿಲ್ಲುವ ಗುಣಗಳನ್ನು ಬೆಳೆಸಲು ಸಾಧ್ಯವಾಗಲಿದೆ.ಈ ಪ್ರದರ್ಶನ ನೋಡಿ ಮಕ್ಕಳು ಗಾಂಧಿಯಂತಾಗಲೆಂದು ಹಾರೈಸಿದರು.

Contact Your\'s Advertisement; 9902492681

ನಂತರ ನಡೆದ ರಂಗ ರೂಪಕವನ್ನು ನೋಡಿದ ಮಕ್ಕಳು ಮಹಾತ್ಮ ಗಾಂಧಿಯವರ ಜೀವನ ರೀತಿಯನ್ನು ಕಂಡು ಬೆರಗಾದರು ಹಾಗು ಎಲ್ಲಾ ಮಕ್ಕಳು ಗಾಂಧಿಯ ಆದರ್ಶವನ್ನು ಗುಣಗಾನ ಮಾಡಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನ ಓಲೆಕಾರ,ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ,ನಿವೃತ್ತ ಲೋಕಾಯುಕ್ತ ಎಸ್ಪಿ ಸಿ.ಎನ್.ಭಂಡಾರೆ,ಎಪಿಎಫ್‌ನ ಸುರೇಶ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುರಪುರ ಕ್ಲಸ್ಟರ್‌ನ ಸಾವಿರಾರು ಮಕ್ಕಳು ಹಾಗು ಶಿಕ್ಷಕರು ಭಾಗವಹಿಸಿ ವೀಕ್ಷಿಸಿದರು.ರಂಗ ತಂಡದ ನಿರ್ದೇಶಕರಾದ ಹರಿಕೃಷ್ಣ ಇವರಿಗೆ ಎಲ್ಲರಿಂದ ಅಭಿನಂಧನೆ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ ಜಮದ್ರಖಾನಿ,ಬಿಆರ್‌ಪಿ ಖಾದರ್ ಪಟೇಲ್,ಆರ್.ಕೆ.ಕೋಡಿಹಾಳ,ಜಾಕೀರ್ ಹುಸೇನ್,ಸಾಮುವೆಲ್,ರವಿ ಗಲಗಿನ್,ಮಲ್ಲಿಕಾರ್ಜುನ ಕಟ್ಟಿಮನಿ,ಜೋಗಪ್ಪ,ಕೃಷ್ಣ ದರಬಾರಿ,ಎಪಿಎಫ್‌ನ ಅಜೀಂ ಫರೀದಿ,ವಿನೋದ ಕುಮಾರ,ಪರಮಣ್ಣ ತಳಗೇರಿ,ಶಿವಕುಮಾರ ಸೇರಿದಂತೆ ಅನೇಕರಿದ್ದರು.ಅನ್ವರ್ ಜಮಾದಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here