ಶಹಾಬಾದ: ನಗರದ ಸಾರ್ವಜನಿಕರು ನೀರಿನ ಕರವನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. ಪಾವತಿಸದಿರುವವರ ನಳ ಸಂಪರ್ಕವನ್ನು ಕಡಿತಗೊಳಿಸಲಾಗುವುದೆಂದು ಪೌರಾಯುಕ್ತ ವೆಂಕಟೇಶ ಹೇಳಿದರು.
ನಗರದ ಸಾರ್ವಜನಿಕರಿಗೆ ಹಲವು ತಿಂಗಳಿನಿಂದ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆದರೆ ಸಾರ್ವಜನಿಕರು ಇಲ್ಲಿಯವರೆಗೆ ನೀರಿನ ಕರವನ್ನು ಪಾವತಿಸಿಲ್ಲ.ಆದ್ದರಿಂದ ಪಾವತಿಸದ ಸಾರ್ವಜನಿಕರು ಒಂದು ವಾರದಲ್ಲಿ ನೀರಿನ ಕರವನ್ನು ಪಾವತಿಸಬೇಕು.ಇಲ್ಲದಿದ್ದರೇ ಯಾವುದೇ ಮುನ್ಸೂಚನೆಯಿಲ್ಲದೇ ನಳ ಸಂರ್ಕವನ್ನು ಕಡಿತಗೊಳಿಸಲಾಗುವುದು ಎಂದು ಪೌರಾಯುಕ್ತ ವೆಂಕಟೇಶ ಮತ್ತು ಎನ್‌ಕೆಯುಎಸ್‌ಐಪಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.