ಇಂಜಿನೀಯರಿಂಗ್ ಪಠ್ಯಕ್ರಮದಲ್ಲಿ ಬಾಹ್ಯಾಕಾಶ ಸಂಬಂಧಿತ ವಿಷಯವನ್ನು ಸೇರಿಸಲು ವಿವಿ ಆಸಕ್ತಿ: ಡಾ. ಅನಿಕುಮಾರ ಬಿಡವೆ

0
52

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಬಾಹ್ಯಾಕಾಶ ಸಂಬಂಧಿತ ಕೋರ್ಸ್‌ಗಳನ್ನು ಪ್ರಾರಂಭಿಸುವುದರ ಜೊತೆಗೆ ಇಸ್ರೋದ ನುರಿತ ವಿಜ್ಞಾನಿಗಳ ಸಹಾಯದಿಂದ ಕಿರು ಉಪಗ್ರಹ ಉಡಾವಣೆ ಮತ್ತು ಅದರ ಕುರಿತು ಅನ್ವೇಷಿಸಲು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ, ಎಕ್ಸಪೋಸ್ಯಾಟ್ ಡಾ. ಅಮರೇಶ್ವರ ಖೇಣದ್ ಅವರೊಂದಿಗೆ ವಿವಿಯ ಉಪಕುಲಪತಿ ವ್ಹಿ.ಡಿ. ಮೈತ್ರಿ ಹಾಗೂ ಕುಲಸಚಿವ ಡಾ.ಅನಿಲಕುಮಾರ್ ಬಿಡವೆ ಅವರು ಪ್ರಾಥಮಿಕ ಚರ್ಚೆ ನಡೆಸಿದರು.

ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಹಾಗೂ ಇಂಜಿನೀಯರಿಂಗ್ ಕೋರ್ಸ್‌ಗಳಲ್ಲಿ ಪಠ್ಯಕ್ರಮದ ಭಾಗವಾಗಿ ಬಾಹ್ಯಾಕಾಶ ಸಂಬಂಧಿತ ವಿಷಯವನ್ನು ಸೇರಿಸಲು ವಿಶ್ವವಿದ್ಯಾಲಯ ಆಸಕ್ತಿ ತೋರಿದೆ ಎಂದು ಕುಲಸಚಿವ ಡಾ.ಅನಿಕುಮಾರ ಬಿಡವೆ ಹೇಳಿದರು.

Contact Your\'s Advertisement; 9902492681

ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಷಯವನ್ನು ಪ್ರಾರಂಭಿಸುವ ಶೈಕ್ಷಣಿಕ ಸಂಸ್ಥೆಗಳಿಗೆ ಇಸ್ರೋ ಸಂಸ್ಥೆಯು ಯಾವಾಗಲೂ ಹುರಿದುಂಬಿಸುವುದರ ಜೊತೆಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದು, ಅದರಲ್ಲಿ ಸಕಾರತ್ಮಕವಾಗಿ ಸ್ಪಂದಿಸಿದ ಶರಣಬಸವ ವಿವಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಮರೇಶ್ವರ ಖೇಣದ್ ತಿಳಿಸಿದರು.

ಬಾಹ್ಯಕಾಶ ವಿಜ್ಞಾನದ ವಿವಿಧ ಆಯಾಮಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಇಸ್ರೋ ಸಂಸ್ಥೆಯು, ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿರುವ ಶೈಕ್ಷಣಿಕ ಸಂಸ್ಥೆಗಳಿಗೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳಿಗೆ ಸಹಾಯ ಹಸ್ತ ಚಾಚಿದೆ ಎಂದು ಖೇಣದ್ ಸ್ಪಷ್ಟಪಡಿಸಿದರು.

ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ವಿಜ್ಞಾನಿ ಡಾ. ಅಮರೇಶ್ವರ ಖೇಣದ್ ಅವರಿಗೆ ಧನ್ಯವಾದ ಸಲ್ಲಿಸಿದ ಕುಲಸಚಿವ ಡಾ.ಅನಿಲಕುಮಾರ ಬಿಡವೆ ಅವರು, ಮುಂದಿನ ದಿನಗಳಲ್ಲಿ ಇಸ್ರೋ ಜತೆಗಿನ ಸಹಯೋಗದ ವಿವಿರಗಳನ್ನು ರೂಪಿಸಲಾಗುವುದು ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here