ಕಲಬುರಗಿ ಕೋಟೆ ನಿವಾಸಿಗಳಿಂದ ಬೃಹತ್ ಪ್ರತಿಭಟನೆ

0
122

ಕಲಬುರಗಿ: ಜಿಲ್ಲೆಯ ಬಹಮನಿ ಕೋಟೆಯೊಳಗಿನ ನಿವಾಸಿಗಳಿಂದ ಇಂದು ಮುಸ್ಲಿಂ ಚೌಕ್ ವೃತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೋಟೆಯೋವಳಗಿನ ಮನೆಗಳ ತೆರವುಗೋಳಿಸುವ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದರು.

ಕಲಬುರಗಿ ನಗರದ ಪ್ರಸಿದ್ಧ ಬಹಮನಿ ಸಮ್ರಾಜದ ಸುಮಾರು 600 ವರ್ಷದ ಪುರಾತನ ಕೋಟೆಯಲ್ಲಿ 282 ಮನೆಗಳು ನಿರ್ಮಾಣವಾಗಿದ್ದು, ಕೋಟೆಯಲ್ಲಿ ನಿರ್ಮಿಸಿರುವ ಮನೆಗಳು ಆಕ್ರಮವಾಗಿದೆ ಎಂದು ಹೈ.ಕೋರ್ಟ್ ಮನೆಗಳ ತೆರವುಗೊಳಿಸಲು ಆದೇಶ ನೀಡಿದೆ. ಈ ಹಿನ್ನೆಯಲ್ಲಿ ಇಂದು ಇಲ್ಲಿನ ನಿವಾಸಿಗಳು ಯಾವುದೇ ಸ್ಥಿತಿಯಲ್ಲಿ ಕೋಟೆಯಲ್ಲಿರುವ ಮನೆಗಳು ತೆರವುಗೊಳಿಸಲು ಬಿಡುವುದಿಲ್ಲ, ಸ್ವಾತಂತ್ರ್ಯದ ಪೂರ್ವದಿಂದ ಈ ಕೋಟೆಯಲ್ಲಿ ನಿವಾಸಿಸುತ್ತಿದ್ದು, ಕೋಟೆಗೆ ನಮ್ಮಗೆ ಪುರಾತನ ನಂಟು ಉಂಟು, ಒಂದು ವಂಶವನ್ನೇ ಇಲ್ಲಿ ಕಳೆದಿದ್ದೇವೆ. ಪುರವಜ್ಜರು ಕೋಟೆಯಲ್ಲಿ ಹುಟ್ಟಿ ಬೇಳೆದು ಈ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಅಂದಿನ ಆಡಳಿತ ಅವಧಿಯಲ್ಲಿ ಕೊಟೆಯಲ್ಲಿನ ಮನೆಯೊಳಗಿನ ನಿವಾಸಿಗಳಿಗೆ ಹಕ್ಕು ಪತ್ರ ಸಹ ನೀಡಲಾಗಿದೆ ಎಂದು ತಿಳಿಸಿದರು. ತನ್ನ ಪಕ್ಷದ ದಾಖಲೆ ನ್ಯಾಯಲಯದ ಮುಂದೆ ಇಡಲು ಕಾಲವಕಾಶ, ಮತ್ತು ಗಡವು ನೀಡದ ಜಿಲ್ಲಾಡಳಿತ ಮನೆಗಳ ತೆರೆವುಗೊಳಿಸುವುದು ನಮ್ಮೊಂದಿಗೆ ಮಾಡುತಿರುವುದು ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಕೋಟೆಯಲ್ಲಿ ವಿಶ್ವ ಪ್ರಸಿದ್ಧ ಜಾಮಿಯಾ ಮಸಜೀದ್, ದರ್ಗಾ ಹಾಗೂ ಮುಸ್ಲಿಂ ಸಮುದಾಯದ ಕಬರಿಸ್ತಾನ್ (ಸ್ಮಶಾನ) ಇದ್ದು, ಇವುಗಳನ್ನು ಧ್ವಂಸ ಮಾಡುವು ಹುನ್ನಾರ ನಡೆಯುತ್ತಿದೆ ಎಂದು ಈ ಸಂದರ್ಭದಲ್ಲಿ ಆರೋಪಿಸಿ, ತೀರ್ಪುನ್ನು ಪ್ರಶ್ನಿಸಿ ನಿವಾಸಿಗಳು ಅರ್ಜಿಸಲು ತೀರ್ಮಾನಿಸಿದೇವೆ ಎಂದು ಮೌಲಾನ ತಿಳಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷರಾದ ಡಾ. ಅಜಗರ್ ಚುಲಬುಲ್, ರೈತ, ಕಾರ್ಮಿಕ ಮುಖಂಡ ಮಾರುತಿ ಮಾನ್ಪಡೆ, ನ್ಯಾಯವಾದಿ ವಾಹಜ್ ಬಾಬಾ, ಎಐಎಂಐಎಂ ಜಿಲ್ಲಾ ಮುಖಂಡ ರಹಿಮ್ ಮಿರ್ಚಿ, ಎಸ್.ಡಿ.ಪಿ.ಐ ಮುಖಂಡರು, ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ಇಲಿಯಾಜ್ ಸೇಠ್ ಬಾಗಬಾನ್, ಕಾಂಗ್ರೆಸ್ ಮುಖಂಡ ಬಾಬಾ ಖಾನ್ ಸೇರಿದಂತೆ ಕೋಟೆಯ ನಿವಾಸಿಗಳು ಇದ್ದರು.

ಈ ವೇಳೆಯಲ್ಲಿ ಪ್ರತಿಭಟನಾಕಾರರು ಸಂಸದ ಜಾಧವ್ ವಿರುದ್ಧ ಘೋಷಣೆ ಕುಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here