20 ಕ್ವಿಂಟಾಲ್ ತೊಗರಿ ಖರೀದಿಸಲು ಕೇಂದ್ರಕ್ಕೆ ಮನವಿ ಸಲ್ಲಿಕೆ: ಉಪಮುಖ್ಯಮಂತ್ರಿ ಕಾರಜೋಳ

0
66

ಕಲಬುರಗಿ: ಈ ಬಾರಿ ತೊಗರಿ ಬೆಳೆ ಉತ್ತಮ ಇಳುವರಿ ಬಂದಿರುವುದುದರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ೧೦ ಕ್ವಿಂಟಲ್ ಬದಲಾಗಿ ೨೦ ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರ್ಧಧೂ, ಹೆಚ್ಚಿನ ಖರೀದಿಗೆ ಅನುಮೋದನೆ ಸಿಗುವ ನಿರೀಕ್ಷೆ ಇದೆ ಎಂದು ರಾಜ್ಯದ ಉಪಮುಖ್ಯಮಂತ್ರಿಗಳು, ಲೋಕೋಪಯೋಗಿ, ಸಮಾಜ ಕಲ್ಯಾಣ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು.

ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ರಾಜ್ಯ ಸರ್ಕಾರದ ೩೦೦ ರೂಪಾಯಿ ಸೇರಿ ತೊಗರಿಗೆ ಒಂದು ಕ್ವಿಂಟಲ್‌ಗೆ ೬೧೦೦ ರೂಪಾಯಿ ಕನಿಷ್ಠ ಬೆಂಬಲ ಬೆಲೆ ನೀಡಲಾಗಿತ್ತು. ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಕಲಬುರಗಿ, ಬೀದಋ, ವಿಜಯಪುರ, ರಾಯಚೂರು, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಉತ್ತಮ ಇಳುವರಿ ಬಂದಿದೆ. ಹೆಚ್ಚೆಚ್ಚು ಖರೀದಿ ಮಾಡಬೇಕೆಂಬುದು ರೈತರ ಬೇಡಿಕೆ ಇದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದರು.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯಲ್ಲಿ ತಲೆದೋರಿದ್ದ ಪ್ರವಾಹ ಸಂಬಂಧ ೨.೫ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಪರಿಹಾರ ಹಣದಲ್ಲಿ ಜೇವರ್ಗಿ ಮತ್ತು ಅಫಜಲಪುರ ನೆರೆಪೀಡಿತ ಪ್ರದೇಶಗಳಲ್ಲಿ ಸದ್ಯಕ್ಕೆ ತಾತ್ಕಾಲಿಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಹಲವು ದಿನಗಳಿಂದ ಖಾಲಿ ಇರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರ ಹುದ್ದೆಯನ್ನು ಬರುವ ಏಪ್ರಿಲ್ ಒಳಗಾಗಿ ತುಂಬಲಾಗುವುದು. ಶಾಸಕರು ಅಥವಾ ಸಚಿವರ ನೇಮಕ ಮಾಡುವ ಸಂಬಂಧ ಕಾಯ್ದೆಗೆ ಸಣ್ಣ ತಿದ್ದುಪಡಿ ತರುವ ಹಿನ್ನಲೆಯಲ್ಲಿ ನೇಮಕ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಹದಾಯಿ ನ್ಯಾಯಾಧೀಕರಣದ ಅಂತಿಮ ಐ ತೀರ್ಪಿನ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ಆದೇಶದನ್ವಯ ಕೇಂದ್ರ ಸರ್ಕಾರ ಪ್ರಕಟಿಸುವುದರಿಂದ ಶಾಶ್ವತ ಪರಿಹಾರ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿಗಳು, ೧೩.೪೨ ಟಿಎಂಸಿ ನೀರು ಹಂಚಿಕೆಯಾಗುವ ಮೂಲಕ ಕರ್ನಾಟಕ ಹಾಗೂ ಈ ನಾಡಿನ ರೈತರಿಗೆ ಸಿಕ್ಕ ಜಯ ಎಂದು ಅವರು ಹೇಳಿದರು.

ಜಲವಿದ್ಯುತ್ ಯೋಜನೆಗೆ ೮.೦೨ ಟಿಎಂಸಿ, ಬಂಡೂರಿ ನಾಲೆಗೆ ೨.೧೮ ಟಿಎಂಸಿ, ಕಳಸಾ ನಾಲೆಗೆ ೧.೭೦ ಟಿಎಂಸಿ, ಕುಡಿಯುವ ನೀರಿಗಾಗಿ ೧.೫ ಟಿಎಂಸಿ ಸೇರಿ ಒಟ್ಟು ೧೩.೪೨ ಟಿಎಂಸಿ ಹಂಚಿಕೆ ಮಾಡಿದೆ ಎಂದು ವಿವರಿಸಿದ ಅವರು ಹಂಚಿಕೆಯಾದ ಈ ನೀರಿನಲ್ಲಿ ಒಂದು ಹನಿಯೂ ವ್ಯರ್ಥವಾಗದ ರೀತಿಯಲ್ಲಿ ಉಪಯೋಗ ಮಾಡಲಿಕ್ಕೆ ರಾಜ್ಯ ಸರ್ಕಾರ ಕ್ರಿಯಾ ಯೋಜನೆ ರೂಪಿಸಲಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಗೆ ೧೫ ಸಾವಿರ ಕೋಟಿ ರೂ. ಅನುದಾನ: ಈ ಬಾರಿ ಆಯವ್ಯಯದಲ್ಲಿ ಲೋಕೋಪಯೋಗಿ ಇಲಾಖೆಗೆ ೧೫ ಸಾವಿರ ಕೋಟಿ ರೂ. ಅನುದಾನ ತೆಗೆದಿರಿಸುವಂತೆ ಮನವಿ ಸಲ್ಲಿಸಲಾಗಿದೆ. ನೆರೆಹಾವಳಿಯಿಂದಾಗಿ ಅಂದಾಜು ೭೦೨೧ ಕೋಟಿ ರೂ. ಗಳ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಕಳೆದ ವ? ಇಲಾಖೆಗೆ ೯೪೫೦ ಕೋಟಿ ರೂ. ಅನುದಾನ ಹಂಚಿಕೆಯಾಗಿತ್ತು. ನೆರೆ ಹಾವಳಿಗೆ ಹಾನಿಗೀಡಾದ ರಸ್ತೆ, ಸೇತುವೆಗಳ ದುರಸ್ತಿಗಾಗಿ ಹೆಚ್ಚಿನ ಅನುದಾನಕ್ಕಾಗಿ ೧೫ ಸಾವಿರ ಕೋಟಿ ರೂ. ಬೇಡಿಕೆ ಇಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಸವರಾಜ್ ಮುತ್ತಿಮೂಡ್, ದತ್ತಾತ್ರೇಯ ಪಾಟೀಲ್ ಸಿ.ರೇವೂರ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here